ಹಿರೇಕೆರೂರು: ಇಂದು 58ನೇ ರಾಜ್ಯೋತ್ಸವ
ಹಿರೇಕೆರೂರು: ಪಟ್ಟಣದ ಹಿರೇಕೆರೂರು ತಾಲೂಕು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ಆವರಣದ ರಂಗಮಂಟಪದಲ್ಲಿ 58ನೇ ಕನ್ನಡ ರಾಜ್ಯೋತ್ಸವ ಹಾಗೂ ಸಂಘದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ನ. 1ರಂದು ಬೆಳಗ್ಗೆ 10.30ಕ್ಕೆ ಜರುಗಲಿದೆ. ಸಿಇಎಸ್ ಸಂಸ್ಥೆಯ ಸಂಸ್ಥಾಪಕ ಲಿಂ. ಡಿ.ಆರ್. ತಂಬಾಕದ ಅವರ 40ನೇ ಪುಣ್ಯ ದಿನಾಚರಣೆ ಅದ್ಧೂರಿಯಾಗಿ ಜರುಗಲಿದೆ. ತಾಲೂಕಿನ ಸಹಕಾರಿಗಳು, ಶಿಕ್ಷಣ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ಪಾಟೀಲ ತಿಳಿಸಿದ್ದಾರೆ.
ನಿರ್ಲಕ್ಷ್ಯ: ಲಾರಿ ಹರಿದು ಚಾಲಕ ಸಾವು
ಬ್ಯಾಡಗಿ: ನಿರ್ಲಕ್ಷ್ಯ ತೋರಿದ ಚಾಲಕನ ಮೇಲೆಯೇ ಲಾರಿಹಾಯ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಆತ ಕೊನೆಯುಸಿರೆಳೆದ ಘಟನೆ ಪಟ್ಟಣದ ಹೊಂಡದ ಬಳಿಯಿರುವ ಮೇಲ್ಮಟ್ಟದ ಜಲಾಗಾರದ ಬಳಿ ಬುಧವಾರ ತಡರಾತ್ರಿ ನಡೆದಿದೆ. ಮೃತನನ್ನು ಪಟ್ಟಣದ ಈರಣ್ಣ ಭರಮಪ್ಪ ಗೌಳಿ (28) ಎಂದು ಗುರುತಿಸಲಾಗಿದೆ. ಸರಕು ತುಂಬಿದ ಲಾರಿಯೊಂದರ ಜಾಮ್ ಆಗಿದ್ದ ಬ್ರೇಕ್ನ ವ್ಯಾಕ್ಯೂಮ್ ತೆಗೆಯುವ ಸಂದರ್ಭದಲ್ಲಿ ಈ ದುರ್ಘಟನೆ ನಡೆಸಿದೆ. ನ್ಯೂಟ್ರಲ್ ಗೇರ್ನಲ್ಲಿದ್ದ ಲಾರಿ ಮುಂದಕ್ಕೆ ಚಲಿಸಿದ್ದರಿಂದ ಗಾಲಿಗಳ ಪಕ್ಕದಲ್ಲಿಯೇ ಮಲಗಿ ವ್ಯಾಕ್ಯೂಮ್ ತೆಗೆಯುವುದರಲ್ಲಿ ನಿರತನಾಗಿದ್ದ ಈರಣ್ಣನ ತಲೆ ಎರಡು ಚಕ್ರದ ನಡುವೆ ಸಿಲುಕಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆತನನ್ನು ಸಾರ್ವಜನಿಕರ ಸಹಕಾರದೊಂದಿಗೆ ಚಿಕಿತ್ಸೆಗಾಗಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಆದರೂ ಆತ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

