ಚುನಾವಣೆ: ಲೆಕ್ಕಪತ್ರಗಳ ಪರಿಶೀಲನೆ
ಹಾವೇರಿ: ಲೋಕಸಭಾ ಚುನಾವಣೆ ಅಂಗವಾಗಿ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚ ಲೆಕ್ಕ ಪತ್ರಗಳನ್ನು ಚುನಾವಣಾ ವೆಚ್ಚ ವೀಕ್ಷಕರಾದ ವಸಂತ ಗೇಸನ್ ಅವರು ಪರಿಶೀಲನೆ ನಡೆಸಲಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿ ಎಂ. ಮಂಜುನಾಥ ನಾಯಕ ತಿಳಿಸಿದ್ದಾರೆ.ಏ. 2,7 ಹಾಗೂ 15ರಂದು ಬೆಳಗ್ಗೆ 10 ಗಂಟೆಗೆ ಹಾವೇರಿ ನಗರದ ಸರ್ಕ್ಯೂಟ್ ಹೌಸ್ನ ರೂಂ ನಂ. 1ರಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರ ಲೆಕ್ಕಪತ್ರ, ಏ. 2,7 ಹಾಗೂ 15ರಂದು ಬೆಳಗ್ಗೆ 11 ಗಂಟೆಗೆ ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ಅವರ ಲೆಕ್ಕಪತ್ರ, ಏ. 3,8 ಹಾಗೂ 14 ರಂದು ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಅವರ ಲೆಕ್ಕಪತ್ರ, ಏ. 3,8 ಹಾಗೂ 14ರಂದು ಬೆಳಗ್ಗೆ 11 ಗಂಟೆಗೆ ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಹಾಲಪ್ಪಾ ತಿಮ್ಮೇನಹಳ್ಳಿ ಅವರ ಲೆಕ್ಕಪತ್ರ, ಏ. 2,7 ಹಾಗೂ 15ರಂದು ಮಧ್ಯಾಹ್ನ 1 ಗಂಟೆಗೆ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಡಿ. ಪ್ರಸಾದ ಅವರ ಲೆಕ್ಕಪತ್ರ, ಏ. 2,7 ಹಾಗೂ 15ರಂದು ಮಧ್ಯಾಹ್ನ 3 ಗಂಟೆಗೆ ಸರ್ವ ಜನತಾ ಪಾರ್ಟಿ ಅಭ್ಯರ್ಥಿ ಬಸವಂತಪ್ಪ ಹುಲ್ಲತ್ತಿ ಅವರ ಲೆಕ್ಕಪತ್ರ, ಏ. 2,7 ಹಾಗೂ 15 ರಂದು ಮಧ್ಯಾಹ್ನ 4 ಗಂಟೆಗೆ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಎಚ್.ಎಂ. ಸರಖಾಜಿ ಅವರ ಲೆಕ್ಕಪತ್ರ, ಏ. 2,7 ಹಾಗೂ 15 ರಂದು ಸಂಜೆ 5 ಗಂಟೆಗೆ ರಾಣಿ ಚನ್ನಮ್ಮ ಪಾರ್ಟಿ ಅಭ್ಯರ್ಥಿ ಸುರೇಶ ಮುಂಡರಗಿ ಅವರ ಲೆಕ್ಕಪತ್ರ ಪರಿಶೀಲನೆ ನಡೆಸಲಿದ್ದಾರೆ. ಏ. 3,8 ಹಾಗೂ 14ರಂದು ಮಧ್ಯಾಹ್ನ 12 ಗಂಟೆಗೆ ಪಕ್ಷೇತರ ಅಭ್ಯರ್ಥಿ ಕಬ್ಬಿಣದ ವೀರಭದ್ರಪ್ಪ ವೀರಪ್ಪ ಅವರ ಲೆಕ್ಕಪತ್ರ, ಏ. 3,8, ಹಾಗೂ 14ರಂದು ಮಧ್ಯಾಹ್ನ 12-30ಕ್ಕೆ ಪಕ್ಷೇತರ ಅಭ್ಯರ್ಥಿ ಕುಬೇರ ವಾಸಣ್ಣ ಅವರ ಲೆಕ್ಕಪತ್ರ, ಏ. 3,8 ಹಾಗೂ 14ರಂದು ಮಧ್ಯಾಹ್ನ 1 ಗಂಟೆಗೆ ಪಕ್ಷೇತರ ಅಭ್ಯರ್ಥಿ ಗಿರೀಶಗೌಡ ಬಿಷ್ಟನಗೌಡರ ಅವರ ಲೆಕ್ಕಪತ್ರ, ಏ. 3, 8 ಹಾಗೂ 14ರಂದು ಮಧ್ಯಾಹ್ನ 1-30ಕ್ಕೆ ಪಕ್ಷೇತರ ಅಭ್ಯರ್ಥಿ ಚಂದ್ರಶೇಖರಯ್ಯ ಕುಲಕರ್ಣಿ ಅವರ ಲೆಕ್ಕಪತ್ರ, ಏ. 3,8 ಹಾಗೂ 14ರಂದು ಮಧ್ಯಾಹ್ನ 2 ಗಂಟೆಗೆ ಪಕ್ಷೇತರ ಅಭ್ಯರ್ಥಿ ಬಿ.ಎಂ. ಜಯದೇವಮಠ ಅವರ ಲೆಕ್ಕಪತ್ರ, ಏ. 3,8 ಹಾಗೂ 14 ರಂದು ಮಧ್ಯಾಹ್ನ 3-30ಕ್ಕೆ ಪಕ್ಷೇತರ ಅಭ್ಯರ್ಥಿ ಬಿದರಗಡ್ಡಿ ವಿ.ಬಿ. ಅವರ ಲೆಕ್ಕಪತ್ರ, ಏ. 3,8 ಹಾಗೂ 14 ರಂದು ಸಂಜೆ 4 ಗಂಟೆಗೆ ಪಕ್ಷೇತರ ಅಭ್ಯರ್ಥಿ ಮೆಹಬೂಬಖಾನ ಪಠಾಣ ಅವರ ಲೆಕ್ಕಪತ್ರ, ಏ. 3,8 ಹಾಗೂ 14 ರಂದು ಸಾಯಂಕಾಲ 4-30ಕ್ಕೆ ಪಕ್ಷೇತರ ಅಭ್ಯರ್ಥಿ ರುದ್ರೇಶ ಹಡಗಲಿ ಅವರ ಲೆಕ್ಕಪತ್ರ, ಏ. 3,8 ಹಾಗೂ 14ರಂದು ಸಂಜೆ 5 ಗಂಟೆಗೆ ಪಕ್ಷೇತರ ಅಭ್ಯರ್ಥಿ ಸಿದ್ಧಪ್ಪ ಪೂಜಾರ ಅವರ ಲೆಕ್ಕಪತ್ರ, ಏ.3, 8 ಹಾಗೂ 14 ರಂದು ಸಂಜೆ 5-30ಕ್ಕೆ ಪಕ್ಷೇತರ ಅಭ್ಯರ್ಥಿ ಶಿವಕುಮಾರ ತಳವಾರ ಲೆಕ್ಕಪತ್ರ ಹಾಗೂ ಏ. 3,8 ಹಾಗೂ 14 ರಂದು ಸಂಜೆ 6 ಗಂಟೆಗೆ ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ ಅವರ ಲೆಕ್ಕಪತ್ರವನ್ನು ಪರಿಶೀಲನೆ ಮಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

