ಹಾವೇರಿ

ಎಲ್‌ಐಸಿಯಿಂದ ಆರ್ಥಿಕ ಸುರಕ್ಷತೆ

Published On :

ಬ್ಯಾಡಗಿ:  ಕುಟುಂಬದ ಪ್ರತಿ ಸದಸ್ಯರಿಗೂ ಆರ್ಥಿಕ ಸುರಕ್ಷತೆ ನೀಡಲು ಭಾರತೀಯ ಜೀವವಿಮಾ ನಿಗಮದಿಂದ (ಎಲ್‌ಐಸಿ) ಮಾತ್ರ ಸಾಧ್ಯವೆಂದು ಸ್ಥಳೀಯ ಶಾಖಾ ವ್ಯವಸ್ಥಾಪಕ ಪಿ.ಎನ್. ಅಂಚಿಗೇರಿ ಹೇಳಿದರು. ಬುಧವಾರ ಸ್ಥಳೀಯ ಸಂಪರ್ಕ ಶಾಖೆಯಲ್ಲಿ 2014-15ನೇ ಹೊಸ ವರ್ಷಕ್ಕೆ ಪದಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದುಡಿಮೆಯಲ್ಲಿನ ಉಳಿತಾಯದ ಹಣವನ್ನು ಎಲ್‌ಐಸಿಯಲ್ಲಿ ತೊಡಗಿಸಿ ನಿಶ್ಚಿಂತರಾಗಿರುವಂತೆ ಸಲಹೆ ನೀಡಿದರು. ಅಭಿವೃದ್ಧಿ ಅಧಿಕಾರಿ ರವಿ ಮುಗದುಮ್ ಮಾತನಾಡಿ, ಸಂಕಷ್ಟದ ಸಂದರ್ಭದಲ್ಲಿ ತಾವು ಗಳಿಸಿದ ಆಸ್ತಿ ತಮ್ಮ ನೆರವಿಗೆ ಬರದಿರಬಹುದು. ಆದರೆ, ಎಲ್‌ಐಸಿಯಲ್ಲಿ ಬಂಡವಾಳ ತೊಡಗಿಸಿದಲ್ಲಿ ತಮ್ಮ ಎಲ್ಲ ಸಂಕಷ್ಟಗಳಿಗೆ ಸ್ಪಂದಿಸಲಿದೆ. ಎಲ್‌ಐಸಿ ಕುರಿತು ತಿರಸ್ಕಾರ ಮನೋಭಾವನೆ ಬೇಡ ಎಂದ ಅವರು, ಎಲ್‌ಐಸಿಯಲ್ಲಿ ಹಣ ಹೂಡುವುದೂ ಇತ್ತೀಚಿನ ದಿನಗಳಲ್ಲಿ ಗೌರವದ ಸಂಕೇತವಾಗಿದೆ ಎಂದರು. ಅಭಿವೃದ್ಧಿ ಅಧಿಕಾರಿ ಎ.ಎಂ. ಖಾಜಿ ಮಾತನಾಡಿದರು. ಎಸ್.ಎಸ್. ಜೋಶಿ, ನೀಲಪ್ಪ ಕುಳೇರ, ಎಂ.ಬಿ. ರಾಮಗೊಂಡನಳ್ಳಿ, ಗಿರೀಶ ಬಿಜಾಪುರ, ಸಿ.ಎಸ್. ಜಾವಜ್ಜನವರ, ಎಂ.ಎಸ್. ಕಟಗಿ, ಸುಮ ಎರೆಶೀಮಿ, ರತ್ವವ್ವ ಗಿಡ್ಡಣ್ಣನವರ, ನಾಗೇಶ್ ಗುತ್ತಲ, ಎಸ್.ಎಂ. ವೀರನಗೌಡ, ಝಡ್.ಎಂ. ಅಗಸಿಬಾಗಿಲ ಮಹದೇವಪ್ಪ ಕುರುಬರ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ವಿಶಾಲ್ ಲಿಂಗಾಡೆ ಸ್ವಾಗತಿಸಿದರು. ಸುರೇಶ ವರದ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.