ಗೋಪುರ ಗಡಿಯಾರ ಶೀಘ್ರ ಸರಿಪಡಿಸಿ
ಹಾವೇರಿ: ಜನರಿಗೆ ಆಶ್ವಾಸನೆಗಳ ನೀಡುವ ಮೂಲಕ ರಾಜಕಾರಣಿಗಳು, ಮುಖಂಡರು, ಅಧಿಕಾರಿಗಳು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುವುದು ಸಾಮಾನ್ಯ. ಆದರೆ ಇದಕ್ಕೆ ಇಂಬು ಕೊಡುವಂತೆ ನಗರದ ಜಿ.ಎಚ್ ಪಟೇಲ್ ಸರ್ಕಲ್ನಲ್ಲಿ ನಿರ್ಮಿಸಿದ ಗೋಪುರ ಗಡಿಯಾರ ಸಹ ರಾಜಕಾರಣಿಗಳು ಹಾಕಿಕೊಟ್ಟ ದಾರಿಯಲ್ಲಿಯೇ ನಡೆಯುವುದರ ಮೂಲಕ ಜನರ ದಾರಿ ತಪ್ಪಿಸುವ ಕಾರ್ಯದಲ್ಲಿ ನಿರತವಾಗಿದೆ. ಹೌದು, ನಗರದ ಜನತೆಗೆ, ಪಾದಚಾರಿಗಳಿಗೆ ಉಪಯೋಗವಾಗಲೆಂದು ನಗರದ ಜಿಲ್ಲಾ ಕ್ರೀಡಾಂಗಣದ ಹತ್ತಿರದ ಜಿ.ಎಚ್. ಪಟೇಲ್ ಸರ್ಕಲ್ನಲ್ಲಿ 2006ರ ಅಂದಿನ ದಕ್ಷಿಣ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಮಂಜುನಾಥ ಕುನ್ನೂರ ಅನುದಾನದಲ್ಲಿ ಗೋಪುರ ಗಡಿಯಾರ ನಿರ್ಮಿಸಲಾಗಿತ್ತು. ಆದರೆ, ನಿರ್ದಿಷ್ಟ ಸಮಯ ತೋರಿಸಬೇಕಾದ ಗಡಿಯಾರ ಸಮಯದ ಪರಿ ಇಲ್ಲದೇ ಮೌನಕ್ಕೆ ಶರಣಾಗಿದೆ.
ನಗರಸಭೆ ನಿರ್ಲಕ್ಷ್ಯ : ನಗರದ ಅಭಿವೃದ್ಧಿ ಮಾಡುತ್ತೇವೆಂದು ಆಶ್ವಾಸನೆ ನೀಡುವ ಮೂಲಕ ಅಧಿಕಾರ ಹಿಡಿದ ಇಂದಿನ ನಗರಸಭೆ ನಗರದಲ್ಲಿರುವ ಏಕೈಕ ಗೋಪುರ ಗಡಿಯಾರದ ಕಡೆ ಕಿಂಚಿತ್ತೂ ಗಮನ ನೀಡದೇ ನಿರ್ಲಕ್ಷ ತೋರಿದೆ. ಇದರ ಪರಿಣಾಮ ಗೋಪುರ ಗಡಿಯಾರದ ಸುತ್ತಮುತ್ತಲೂ ಹುಲ್ಲು ಬೆಳೆದು ಕಸ ಕಡ್ಡಿಗಳಿಂದ ತುಂಬಿ ತುಳುಕುವಂತಾಗಿದೆ. ನಗರದ ಸೌಂದರ್ಯಕ್ಕೆ ಇಂಬು ಕೊಡುವ ಈ ಗೋಪುರ ಗಡಿಯಾರವನ್ನು ಸುಸ್ಥಿತಿಯಲ್ಲಿಡದ ನಗರಸಭೆ ಇನ್ನೂ ನಗರವನ್ನು ಹೇಗೆ ಅಭಿವೃದ್ದಿ ಮಾಡುತ್ತದೆ ಎಂದು ಜನತೆ ನಗರಸಭೆಯ ಆಡಳಿತಕ್ಕೆ ಕನ್ನಡಿ ಇಟ್ಟಿದ್ದಾರೆ. ಇದಕ್ಕೆ ಸಂಬಧಿಸಿದ ಅಧಿಕಾರಿಗಳು ಗಡಿಯಾರ ಸುಸ್ಥಿತಿಗೆ ತರುವಲ್ಲಿ ಮುಂದಾಗಬೇಕು.
ಹಾವೇರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

