ಡೊಳ್ಳಿನ ಕಲೆಗೆ ಪ್ರೋತ್ಸಾಹ ಅಗತ್ಯ
ಶಿಗ್ಗಾಂವಿ: ಡೊಳ್ಳಿನ ಕಲೆ ಮತ್ತು ಹಾಡುಗಳು ಆಧುನಿಕ ಸೆಳೆತಕ್ಕೆ ಸಿಕ್ಕು ನಕಲಿಯಾಗುತ್ತಿವೆ ಎಂದು ಖ್ಯಾತ ಡೊಳ್ಳಿನ ಕಲಾವಿದ ಸೋಮನಿಂಗ ದನಗೊಂಡ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿವಿ ನಡುಮನೆ ಸಭಾಂಗಣದಲ್ಲಿ ಏ. 30ರಂದು ಆಯೋಜಿಸಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-18 ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕರ್ನಾಟಕ ಜಾನಪದ ವಿವಿಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಮಾತನಾಡಿದರು.ಇದೇ ಸಂದರ್ಭ ಸೋಮನಿಂಗ ದನಗೊಂಡ ಅವರನ್ನು ವಿವಿಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು. ವಿವಿ ಕುಲಸಚಿವ ಪ್ರೊ.ಡಿ.ಬಿ. ನಾಯಕ ಅವರು ಮಾತನಾಡಿದರು. ಮೌಲ್ಯಮಾಪನ ಕುಲಸಚಿವರು ಮತ್ತು ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕ ಪ್ರೊ.ಸ.ಚಿ. ರಮೇಶ ಇದ್ದರು. ಸಹ ಕಲಾವಿದ ಸಿದ್ದಣ್ಣ ದನಗೊಂಡ, ಮಾಳಪ್ಪ ದನಗೊಂಡ, ಮಲಕಪ್ಪ ತಿಕೋಟಿ, ಬಾಪು ಗೌಂಡಿ, ಶಿವನಿಂಗ ಹೊನವಾಡ, ಕೆಂಚಪ್ಪ ಬೆಳಗಾವಿ, ತಿಪ್ಪಣ್ಣ ಹೂಗಾರ, ಮುದಗೊಂಡ ಪೂಜಾರಿ ಅವರು ಡೊಳ್ಳಿನ ಹಾಡುಗಳನ್ನು ಪ್ರಸ್ತುತ ಪಡಿಸಿದರು.
ವಿವಿಯ ಹಿರಿಯ ಸಂಶೋಧನಾ ಅಧಿಕಾರಿ ಡಾ.ಕೆ. ಪ್ರೇಮಕುಮಾರ, ಅತಿಥಿ ಪ್ರಾಧ್ಯಾಪಕ ಡಾ. ರಾಮು ಮೂಲಗಿ, ರಂಗಕರ್ಮಿ ಡಾ. ಶ್ರೀಶೈಲ ಹುದ್ದಾರ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಆನಂದಪ್ಪ ಜೋಗಿ, ವಿವಿಯ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು. ವಿವಿಯ ಮೋಹನಕುಮಾರ ಎನ್. ಪ್ರಾರ್ಥಿಸಿದರು. ಯೋಜನಾ ಸಹಾಯಕ ಸಂಗಮೇಶ ಎಸ್. ಗಣಿ ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಯತೀಶ್ ಎಲ್. ಕೊಡಾವತ್ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

