ಹಾವೇರಿ

ಸಮಾಜಮುಖಿ ಕಾರ್ಯಗೈದವರ ಅನುಕರಿಸಿ

Published On :

ಹಾನಗಲ್ಲ:  ಸಮಾಜಮುಖಿ ಕಾರ್ಯ ಮಾಡಿದವರನ್ನು ಸಮಾಜ ಮರೆಯುವುದಿಲ್ಲ. ಇಂಥವರನ್ನು ಗೌರವಿಸಿದರೆ ಸಾಲದು, ಅವರ ಕಾರ್ಯದ ಅನುಕರಣೆಯಾಗಬೇಕು ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಕರೆ ನೀಡಿದರು.
ಶುಕ್ರವಾರ ಹಾನಗಲ್ಲಿನ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಸ್ಥೆಯ ಆವರಣದಲ್ಲಿ ನಡೆದ ಸಂಸ್ಥೆಯ ಸಿಬ್ಬಂದಿ ಸಂಯೋಜಿಸಿದ ರೈತ ಧುರೀಣ ಎ.ಎಸ್. ಬಳ್ಳಾರಿ ಅವರ ಸಹಸ್ರ ಚಂದ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಮಠ, ಧಾರ್ಮಿಕ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ವಾತಾವರಣ ಅನುಸರಿಸಿ ಬೆಳೆದವರಿಗೆ ಸಮಾಜಮುಖಿ ಚಿಂತನೆ ಸಹಜವಾಗಿಯೇ ಅನುಕರಣೆಯಾಗಿರುತ್ತದೆ. ಮನುಷ್ಯನ ಹುಟ್ಟು ಸತ್ಕಾರ್ಯದ ಕೊಡುಗೆಯ ಮೂಲಕ ಪಾವನವಾಗಬೇಕು. ಅಸಂಘಟಿತರನ್ನು ಸತ್ಕಾರ್ಯಕ್ಕಾಗಿ ಸಂಘಟಿಸಿ ಕ್ರಿಯಾಶೀಲತೆ ಮೂಲಕ ಸಮಷ್ಟಿ ಬದುಕು ನೀಡಿದ ಎ.ಎಸ್. ಬಳ್ಳಾರಿ ಅವರ ಹೋರಾಟ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಸಮಾರಂಭ ಉದ್ಘಾಟಿಸಿ ಸಿ.ಎಂ. ಉದಾಸಿ ಮಾತನಾಡಿದರು. ಅಭಿಮಾನಿಗಳು, ಸಾರ್ವಜನಿಕರ ಸನ್ಮಾನ ಸ್ವೀಕರಿಸಿ ಮಾತನಾಡಿದ ರೈತ ನಾಯಕ ಎ.ಎಸ್. ಬಳ್ಳಾರಿ, ದಿ. ಮಹಲಿಂಗಪ್ಪ ಶಂಕ್ರಿಕೊಪ್ಪ ಅವರ ರೈತಪರ ಕಾಳಜಿ ಕಾರಣವಾಗಿಯೇ ತಮ್ಮಲ್ಲಿ ಹೋರಾಟದ ಕಿಚ್ಚು ಗಟ್ಟಿಯಾಯಿತು. ಸಾರ್ವಜನಿಕ ಜೀವನದಲ್ಲಿ ಎಲ್ಲವನ್ನೂ ಸಹಿಸಿಕೊಳ್ಳಬೇಕು. ಗುಣ ಸಂಪನ್ನತೆ ಅಳವಡಿಸಿಕೊಂಡು ನಡೆಯಬೇಕಾಗುತ್ತದೆ. ಒಬ್ಬನಿಂದ ಎಲ್ಲವೂ ಸಾಧ್ಯವಿಲ್ಲ. ಶಕ್ತಿ ಇರುವವರನ್ನು ಸಮಾಜಮುಖಿ ಕೆಲಸಗಳಿಗೆ ಜೋಡಿಸಿದರೆ ಯಶಸ್ಸು ಸಾಧ್ಯ ಎಂದರು. ಸಮಿತಿಯ ಅಧ್ಯಕ್ಷ ಪಿ.ವೈ. ಗುಡಗುಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಹೊಳೇರ ಸ್ವಾಗತಿಸಿದರು. ನಿರಂಜನ ಗುಡಿ  ನಿರೂಪಿಸಿದರು. ರವಿ ಜಡೆಗೊಂಡರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.