ಹಾವೇರಿ

15ರಿಂದ ಕಡೂರಲ್ಲಿ ಜಾತ್ರಾಮಹೋತ್ಸವ

Published On :

ಹಿರೇಕೆರೂರು: ತಾಲೂಕಿನ ಸುಕ್ಷೇತ್ರ ಕಡೂರ ಗ್ರಾಮದಲ್ಲಿ ಶ್ರೀಹನುಮಂತ ದೇವರ ರಥೋತ್ಸವ ಹಾಗೂ ಶ್ರೀ ದುರ್ಗಾದೇವಿ, ಕರಿಯಮ್ಮದೇವಿ, ಶ್ರೀ ಮಾತಂಗೆಮ್ಮ ದೇವಿಯ ಜಾತ್ರಾಮಹೋತ್ಸವ ಫೆ. 15ರಿಂದ 21ರವರೆಗೆ ಭಾವೈಕ್ಯತೆಯಿಂದ ಅದ್ಧೂರಿಯಾಗಿ ಜರುಗಲಿದೆ. ಫೆ. 15ರ ಬೆಳಗ್ಗೆ ಪವಮಾನ ಹೋಮ, ರಾತ್ರಿ ಕಡುಬಿನ ಕಾಳಗ ಹಾಗೂ ಕಂಕಣಧಾರಣೆ. ಫೆ. 16ರಂದು ಬೆಳಗ್ಗೆ ಹೂವಿನ ತೇರು, ಶ್ರೀ ಬೀರಲಿಂಗೇಶ್ವ ದ್ವಾರ ಬಾಗಿಲ ಕಳಸಾರೋಹಣ ಮತ್ತು ಶ್ರೀ ದುರ್ಗಾದೇವಿಯ ಕಳಸಾರೋಹಣ ಹಾಗೂ ಶ್ರೀ ದುರ್ಗಾದೇವಿ, ಕರಿಯಮ್ಮ ದೇವಿ, ಘಟಸ್ಥಾಪನೆ ಕಾರ್ಯಕ್ರಮ. ಫೆ. 17ರಂದು ಹನುಮಂತ ದೇವರ ದೊಡ್ಡ ರಥೋತ್ಸವ ಹಾಗೂ ದಿ. ಬಸಪ್ಪ ವೀರಪ್ಪ ಅಂಗಡಿ ಇವರ ಸ್ಮರಣಾರ್ಥ ಇವರ ಮಕ್ಕಳು ನಡೆಸಿ ಕೊಡುವ ಗುಗ್ಗಳ ಮಹೋತ್ಸವ ಜರುಗಲಿದೆ. ಮಧ್ಯಾಹ್ನ 3ಕ್ಕೆ ಗುಗ್ಗರಿ ಕಾರ್ಯಕ್ರಮ, ಒಕಳಿ, ಮತ್ತು ಬೂತ ಸೇವೆ ರಾತ್ರಿ 8ಕ್ಕೆ ಮಹಬೂಬ ಸುಭಾನಿ ಉರೂಸ್ ಜರುಗಲಿದೆ. ಫೆ. 18ರಂದು ಬೆಳಗ್ಗೆ 10 ಗಂಟೆಗೆ ಟಗರಿನ ಕಾಳಗ ಸಂಜೆ 4ಕ್ಕೆ ಡೊಳ್ಳು ಭಾಜಾ ಭಜಂತ್ರಿಗಳೊಂದಿಗೆ ವಿದ್ಯುತ್ ದೀಪಾಲಂಕಾರದೊಂದಿಗೆ ಶ್ರೀ ಮಾತೆ ದುರ್ಗಾದೇವಿಯ ಮೆರವಣಿಗೆ ವಿಜೃಂಭಣೆಯಿಂದ ಜರುಗಲಿದೆ. ನಂತರ ಉಡಿ ತುಂಬುವುದು. ಫೆ. 19ರಂದು ಬೆಳಿಗನ ಜಾವ ಶ್ರೀ ದುರ್ಗಾದೇವಿ, ಕರಿಯಮ್ಮ ದೇವಿ ಹಾಗೂ ಶ್ರೀ ಮಾತಂಗೆಮ್ಮ ದೇವಿಯವರಿಗೆ ಹರಕೆ ಸಲ್ಲಿಸುವುದು ಮತ್ತು ಹುಲುಸು ಹೊಡೆಯುವುದು. ಫೆ. 20ರಂದು ಬೆಳಗ್ಗೆ 10 ಗಂಟೆಗೆ ಹುಲುಸು ಹಿಡಿಯುವುದು, ರಾತ್ರಿ 9 ಕ್ಕೆ ಕವ್ವಾಲಿ ಕಾರ್ಯಕ್ರಮ ನಡೆಯುವುದು. ಫೆ. 21ರಂದು ಮಧ್ಯಾಹ್ನ 1ಗಂಟೆಗೆ ಜಂಗೀ ಬಯಲು ಕುಸ್ತಿ ಜರುಗಲಿವೆ.
ಜಾತ್ರಾ ವಿಶೇಷ: ಕಡೂರ ಗ್ರಾಮದಲ್ಲಿ ಜರುಗುತ್ತಿರುವ ಶ್ರೀ ದುರ್ಗಾದೇವಿ, ಕರಿಯಮ್ಮದೇವಿ, ಹಾಗೂ ಶ್ರೀ ಮಾತಂಗೆಮ್ಮ ದೇವಿಯ ಜಾತ್ರಾಮಹೋತ್ಸವ ಕಳೆದ 31ವರ್ಷಗಳಿಂದ ನಡೆದಿರಲಿಲ್ಲ. ಈ ಬಾರಿ ಗ್ರಾಮದ ಎಲ್ಲ ಜನತೆ ಒಗ್ಗಟ್ಟಿನಿಂದ ಜಾತ್ರಾ ಮಹೋತ್ಸವ ಹಮ್ಮಿಕೊಂಡಿದ್ದು ತಾಲೂಕಿನ ವಿಶೇಷವಾಗಿದೆ. ಇದರಿಂದಾಗಿ ಕಡೂರ ಜಾತ್ರೆ ಈ ಭಾಗದಲ್ಲಿ ಬಹು ಮಹತ್ವ ಪಡೆದಿದೆ. ಗ್ರಾಮದಲ್ಲಿ ಎಲ್ಲ ದೇವಸ್ಥಾನಗಳನ್ನು ಅಲಂಕರಿಸಿದ್ದು, ಕಟೌಟ್ಗಳು, ಬ್ಯಾನರ್ಗಳು ರಾರಾಜಿಸುತ್ತಿವೆ. ಗ್ರಾಮದ ಬೀದಿಗಳಲ್ಲಿ ಸ್ವಚ್ಛತೆ, ನೀರಿನ ಸುವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ಪೂರ್ಣಗೊಳಿಸಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.