ಹಾವೇರಿ

ಜನಾಕರ್ಷಿಸಿದ ರಾಸುಗಳ ಪ್ರದರ್ಶನ

Published On :

ಶಿಗ್ಗಾಂವಿ: ಪಟ್ಟಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ನಿಮಿತ್ತ ಧಾರವಾಡ ಸಹಕಾರಿ ಹಾಲು ಒಕ್ಕೂಟ ಪಶುಸಂಗೋಪನಾ ಇಲಾಖೆ ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಶಿಗ್ಗಾಂವಿಯ ಪಶು ಸಂಗೋಪನಾ ಪಾಲಿಟೆಕ್ನಿಕ್ ಆಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಜಾನುವಾರು ಪ್ರದರ್ಶನ ಜನಾಕರ್ಷಣೆಗೆ ಪಾತ್ರವಾಯಿತು. ಶಿಗ್ಗಾಂವಿ ತಾಲೂಕು ಅಲ್ಲದೆ, ನೆರೆಯ ತಾಲೂಕುಗಳಿಂದ 127 ರಾಸುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಸ್ಥಳೀಯ ಮತ್ತು ಮುರ್ರಾ ತಳಿಯ ಎಮ್ಮೆ, ಎಚ್‌ಎಫ್ ಜರ್ಸಿ ಸೇರಿದಂತೆ ಸ್ಥಳೀಯ ತಳಿಗಳು, ಕಿಲಾರಿ, ಅಮೃತ್‌ಮಹಲ, ಹಳ್ಳಿಕಾರ ತಳಿಗಳ ದನಗಳ ಪ್ರದರ್ಶನ ಸಾವಿರಾರು ರೈತರನ್ನು ತನ್ನತ್ತ ಆಕರ್ಷಿಸಿತು. ಮುಂಜಾನೆಯಿಂದ ವೇದಿಕೆಯ ಪಕ್ಕದಲ್ಲಿ ನಿರ್ಮಾಣ ಮಾಡಲಾಗಿದ್ದ ಪ್ರದರ್ಶನ ಜಾಗೆಯತ್ತ ಜೋಡಿ ಜೋಡಿಯಾಗಿ ರಾಸುಗಳು ಆಗಮಿಸುತ್ತಿದ್ದಂತೆ ರೈತ ಸಮೂಹ ಕೂಡಾ ಕುತೂಹಲದಿಂದ ಅವುಗಳನ್ನು ವೀಕ್ಷಿಸಲು ಜಮಾಯಿಸ ತೊಡಗಿದ್ದರು.ಜ್ಞಾನ ದಾಸೋಹದ ಜೊತೆಗೆ ರೈತರಿಗೆ ಅನುಕೂಲವಾಗುವ ಹೈನುರಾಸು ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಯಿತು.16ರಂದು ನವಗ್ರಹ ರುದ್ರಹೋಮ, ಧರ್ಮಸಭೆಹಿರೇಕೆರೂರು: ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ಶನೇಶ್ವರ ಸ್ವಾಮಿಯ ಪ್ರಾಣಪ್ರತಿಷ್ಠಾಪನೆಯ 13ನೇ ವರ್ಷದ ಮಹೋತ್ಸದ ಅಂಗವಾಗಿ ನವಗ್ರಹ ರುದ್ರಹೋಮ ಹಾಗೂ ಧರ್ಮಸಭೆ ಫೆ. 16ರಂದು ಜರುಗಲಿದೆ. ಫೆ. 15ರಂದು ಸಂಜೆ 4 ಗಂಟೆಗೆ ಸಕಲ ವಾದ್ಯಘೋಷಗಳೊಂದಿಗೆ ಶ್ರೀಶನೇಶ್ವರ ದಿಗ್ಗಿ ಮಲ್ಲಿಕಾರ್ಜುನ, ಆಂಜನೇಯ, ಶ್ರೀ ದುರ್ಗಾದೇವಿ ಮಹಾಉತ್ಸವ ಅದ್ಧೂರಿಯಾಗಿ ಜರುಗುವುದು. ಫೆ. 16ರಂದು ಬೆಳಗ್ಗೆ 9 ಗಂಟೆಗೆ ಧರ್ಮಸಭೆ ನಡೆಯಲಿದ್ದು, ಕಾಳೇನಹಳ್ಳಿ ಶಿವಯೋಗವುಂದಿರದ ರೇವಣಸಿದ್ದ ಸ್ವಾಮಿಗಳು ಸಾನ್ನಿಧ್ಯವಹಿಸಲಿದ್ದು, ತಿಪ್ಪಾಯಿಕೊಪ್ಪದ ವಿರೂಪಾಕ್ಷ ಸ್ವಾಮಿಗಳು ನೇತೃತ್ವ ವಹಿಸುವರು. ಗ್ರಾಮದ ನಾಗನಗಾಡ ಪಾಟೀಲ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶಿವಮೊಗ್ಗದ ಉಪವಲಯ ಅರಣ್ಯಾಧಿಕಾರಿ ರೇವಣಸಿದ್ಧಯ್ಯ ಹಿರೇಮಠ, ಶಾಸಕ ಯು.ಬಿ. ಬಣಕಾರ, ಮಾಜಿ ಶಾಸಕ ಬಿ.ಸಿ. ಪಾಟೀಲ, ಸಿಇಎಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ಪಾಟೀಲ, ಎಸ್.ಬಿ. ತಿಪ್ಪಣ್ಣನವರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಬಾಳಿಕಾಯಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ಡಾ. ಜ್ಞಾನೇಂದ್ರಕುಮಾರ, ತಾಪಂ ಸದಸ್ಯೆ ನಿರ್ಮಲಾ ಗುಬ್ಬಿ, ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಹರಿಹರ, ಉಪಾಧ್ಯಕ್ಷ ಜಯಕುಮಾರ ಉಪ್ಪಾರ, ಸದಸ್ಯರಾದ ರೇಣುಕಾ ಚಲುವಾದಿ, ಕುಸುಮವ್ವ ರಟ್ಟಿಹಳ್ಳಿ, ಗ್ರಾಮದ ಮುಖಂಡರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ. ಶಿಗ್ಗಾಂವಿಯಲ್ಲಿ ರಫ್ತು ಜಾಗೃತಿ ಕಾರ್ಯಕ್ರಮ ಹಾವೇರಿ: ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರವು ಹಾವೇರಿ ಜಿಲ್ಲಾ ಕೈಗಾರಿಕಾ ಕೇಂದ್ರ, ಶಿಗ್ಗಾಂವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಶಿಗ್ಗಾಂವಿ ಕೈಗಾರಿಕಾ ವಸಾಹತುವಿನ ಸಣ್ಣ ಕೈಗಾರಿಕೆಗಳ ಸಂಘದ ಆಶ್ರಯದಲ್ಲಿ ರಫ್ತು ಜಾಗೃತಿ ಕಾರ್ಯಕ್ರಮ ಫೆ. 18ರಂದು ಶಿಗ್ಗಾಂವಿ ಎಪಿಎಂಸಿ ಸಭಾಂಗಣದಲ್ಲಿ ಜರುಗಲಿದೆ. ತರಬೇತಿಯ ಸಮಯದಲ್ಲಿ ರಫ್ತು ವ್ಯವಹಾರ ಏಕೆ? ಹೇಗೆ? ಎಲ್ಲಿಗೆ ಹಾಗೂ ಜಿಲ್ಲೆಯಿಂದ ಯಾವ ಯಾವ ಸಾಮಗ್ರಿಗಳನ್ನು ರಫ್ತು ಮಾಡಬಹುದು ಎಂಬ ಇತ್ಯಾದಿ ವಿವರಗಳಲ್ಲದೇ, ರಫ್ತು ನಿರ್ವಹಣೆಯಲ್ಲಿ ವಿವಿಧ ಹೆಜ್ಜೆಗಳ ಕುರಿತು ತಾಂತ್ರಿಕ ಅಧಿವೇಶನಗಳನ್ನು ನಡೆಸಲಾಗುವುದು. ಜಿಲ್ಲೆಯ ಪ್ರಗತಿಪರ ರೈತರು, ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು, ವ್ಯವಹಾರಸ್ಥರು, ಕೃಷಿಕರು, ತೋಟಗಾರಿಕಾ ಬೆಳೆಗಾರರು, ಶೈಕ್ಷಣಿಕ ಸಂಸ್ಥೆಗಳ ಬೋಧಕರು ಮತ್ತು ವಿದ್ಯಾರ್ಥಿಗಳು ಹಾಗೂ ರಫ್ತು ವ್ಯವಹಾರದಲ್ಲಿ ಆಸಕ್ತಿ ಹೊಂದಿದವರೆಲ್ಲರೂ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.