ಹಾವೇರಿ

ಬೆಲೆ, ಕೃಷಿ ಆಯೋಗ ಶೀಘ್ರ ರಚನೆ: ಸಿಎಂ

Published On :

ಹಿರೇಕೆರೂರು: ಕೃಷಿ ಆಯೋಗ ರಚನೆ ಹಾಗೂ ಬೆಳೆಗೆ ಬೆಲೆ ನಿಗದಿ ಮಾಡಲು ರೈತ ಪ್ರತಿನಿಧಿಗಳನ್ನು ಒಳಗೊಂಡ ಬೆಲೆ ಆಯೋಗವನ್ನು ರಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ರೈತ ಸಂಘದ ಆಶ್ರಯದಲ್ಲಿ ಅನಿರ್ದಿಷ್ಟ ಧರಣಿ ನಡೆಸುತ್ತಿದ್ದ ರೈತರನ್ನು ಭೇಟಿಯಾದ ಅವರು, ಬತ್ತ, ರಾಗಿ, ಜೋಳ, ಕಬ್ಬು, ಮೆಕ್ಕೆಜೋಳ, ತೊಗರಿಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ. ಕಳಪೆ ಹತ್ತಿ ಬೀಜ ಪೂರೈಸಿದ ಕಂಪನಿ ಮಾಲೀಕರನ್ನು ಕರೆದು, ಚರ್ಚಿಸಿ, ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಹೊಸ ಮರಳು ನೀತಿ ಜಾರಿಗೂ ಚಿಂತನೆ ಮಾಡಲಾಗಿದೆ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಕಡಿಮೆಯಾಗಿದ್ದು, ಸಚಿವರ ಜತೆ ಚರ್ಚಿಸಿ, ಸೂಕ್ತ ಬೆಲೆ ನಿಗದಿ ಮಾಡಲಾಗುವುದು. ತಾವೂ 1983ರಲ್ಲಿ ಮೈಸೂರಿನಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದು, ರೈತರ ಬವಣೆ ಏನೆಂಬುದು ತಿಳಿದಿದೆ. ರೈತರಿಗೆ ತೊಂದರೆಯಾಗದಂತೆ ಶ್ರಮಿಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ, ಮಾಜಿ ಶಾಸಕ ಬಿ.ಸಿ. ಪಾಟೀಲ್, ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ತಾಲೂಕು ಅಧ್ಯಕ್ಷ ಬಸನಗೌಡ ಗಂಗಪ್ಪನವರ, ಹಸಿರು ಸೇನೆ ಅಧ್ಯಕ್ಷ ಮಹೇಶ ಕೊಟ್ಟೂರು, ಗೌರವಾಧ್ಯಕ್ಷ ಎಸ್.ವಿ. ಚಪ್ಪರದಳ್ಳಿ, ಜಿಲ್ಲಾ ಸಂಚಾಲಕ ಮಹಮದ್ ಗೌಸುಸಾಬ ಪಾಟೀಲ್, ರಾಣಿಬೆನ್ನ್ನೂರು ತಾಲೂಕು ಅಧ್ಯಕ್ಷ ಬಸವರಾಜ ಕಡೂರು, ಹಾವೇರಿಯ ಸುರೇಶ ಚಲವಾದಿ, ಸುರೇಶ ಧೂಳಿಹೊಳಿ, ಪ್ರಕಾಶ ಹರಿಯಾಳದವರ, ನಿಂಗಪ್ಪ ಬಿದರಿ, ಗೌಸುಸಾಬ ಬಡಗಿ, ಹನುಮಂತಪ್ಪ ಪೂಜಾರ, ನಾಗಪ್ಪ ಯಲಿಗಾರ, ಚನ್ನಬಸಪ್ಪ ಹಾವೇರಿ ಪಾಲ್ಗೊಂಡಿದ್ದರು.
ಎಬಿವಿಪಿಯಿಂದಲೂ ಮನವಿ
ಶೈಕ್ಷಣಿಕವಾಗಿ ಹಿಂದುಳಿದ ತಾಲೂಕನ್ನು ಅಭಿವೃದ್ಧಿಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಮನವಿ ಸಲ್ಲಿಸಿದರು. ಎಬಿವಿಪಿ ಜಿಲ್ಲಾ ಸಂಚಾಲಕ ವಿಜಯಕುಮಾರ ಪಿ.ಎಂ., ಕಾರ್ಯಕರ್ತರಾದ ನಂದನ ಹಲವಾಗಿಲ, ನೂತನ ಚಕ್ರಸಾಲಿ, ವಿಜಯ ತಿಪ್ಪಶೆಟ್ಟಿ, ನವೀನ ಹಲವಾಗಿಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.