ಕ್ಷತ್ರಿಯ ಮರಾಠಾ ಅಧ್ಯಕ್ಷರಾಗಿ ಜಾಧವ
ಹಾನಗಲ್ಲ: ಕ್ಷತ್ರಿಯ ಮರಾಠಾ ಸಮಾಜದ ಹಾನಗಲ್ಲ ತಾಲೂಕು ಘಟಕದ ಅಧ್ಯಕ್ಷರಾಗಿ ಕೊಪ್ಪರಸಿಕೊಪ್ಪ ಗ್ರಾಮದ ವಿಷ್ಣುಕಾಂತ ಜಾಧವ ನೇಮಕಗೊಂಡಿದ್ದಾರೆ.
ಕೊಪ್ಪರಸಿಕೊಪ್ಪ ಗ್ರಾಮದ ಗೌರಮ್ಮಾಜಿ ಮಠದಲ್ಲಿ ವಿರೂಪಾಕ್ಷ ಮಹಾರಾಜ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಹಾನಗಲ್ಲಿನ ರಾಜು ಗೌಳಿ, ಕೋಶಾಧ್ಯಕ್ಷರಾಗಿ ಡೊಳ್ಳೇಶ್ವರದ ಶಿವಾಜಿ ಆರೇರ, ಕಾರ್ಯದರ್ಶಿಯಾಗಿ ಕೊಪ್ಪರಸಿಕೊಪ್ಪದ ಭೈರೋಜಿ ಸಾಳುಂಕೆ ನೇಮಕಗೊಂಡರು.
ಕ್ಷತ್ರಿಯ ಮರಾಠಾ ಸಮಾಜದ ರಾಜ್ಯ ಘಟಕದ ಉಪಾಧ್ಯಕ್ಷ ಯಲ್ಲಪ್ಪ ಕಿತ್ತೂರ, ಜಿಲ್ಲಾಧ್ಯಕ್ಷ ಎಂ.ಎನ್. ವೆಂಕೋಜಿ, ಹಾನಗಲ್ಲ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ರಾಮಣ್ಣ ಮಾಸನಕಟ್ಟಿ, ಕೊಪ್ಪರಸಿಕೊಪ್ಪ ಗ್ರಾಮ ಘಟಕದ ಅಧ್ಯಕ್ಷ ಕೆ.ಡಿ. ನಾಗೋಜಿ, ಸಮಾಜದ ಹಿರಿಯರಾದ ಆನಂದಪ್ಪ ಜಾಧವ, ಗೋಪಾಲಗೌಡ ರಾಮಣ್ಣನವರ, ಪರಸಪ್ಪ ಹೊಂಡದಕಟ್ಟಿ, ರಾಜಪ್ಪ ಸಂಕಪಾಳೆ, ಅರವಿಂದ ಆರೇರ, ಶಿವಾಜಿ ಸಾಳುಂಕೆ, ಪರಶುರಾಮ ಶಿಂಧೆ, ರಾಮಣ್ಣ ಬಮ್ಮನಹಳ್ಳಿ, ಬಸವರಾಜ ಭಗವಂತಿ, ಚಂದ್ರೇಶಖರ ಸುಬ್ಬಣ್ಣನವರ, ಚಂದ್ರಶೇಖರ ಸಾಳುಂಕೆ, ಪ್ರಕಾಶ ಚೋಳಪ್ಪನವರ, ಈರಣ್ಣ ನಾಗೋಜಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

