ಹಾವೇರಿ

ಹುಲಿಕೆರೆ ಉದ್ಯಾನದಲ್ಲೀಗ ಉಲ್ಲಾಸ

Published On :

ಕನ್ನಡಪ್ರಭ ವಾರ್ತೆ, ಕೊಪ್ಪಳ, ಜ.7
ಬೆಟ್ಟದ ನಡುವೆ ರಮ್ಯತಾಣ. ಮಧ್ಯದಲ್ಲೊಂದು ತುಂಬಿದ ಕೆರೆ. ಜೊತೆಗೆ ಆಧುನಿಕವಾಗಿ ನಿರ್ಮಾಣ ಮಾಡಿರುವ ವಿಹಾರ ಕೇಂದ್ರಗಳು, ಮಕ್ಕಳಾಟದ ಸಾಮಗ್ರಿ. ಹಾಗೆ ಸುತ್ತಾಡಿಕೊಂಡು ವಿಹಾರ ಮಾಡುತ್ತಿದ್ದರೆ ನಾವೆಲ್ಲಿದ್ದೇವೋ ಎನ್ನುವ ಮನಸ್ಸು.
ಇಂಥದೊಂದು ರಮ್ಯತಾಣ ಈಗ ಕೊಪ್ಪಳದಲ್ಲಿಯೇ ಇದೆ. ಅದು ಹುಲಿಕೆರೆ ದಡದಲ್ಲಿ. ಅಚ್ಚರಿ ಎಂದರೆ ಸುಮಾರು ರು. 3 ಕೋಟಿ ವೆಚ್ಚ ಮಾಡಿ ನಿರ್ಮಾಣ ಮಾಡಿರುವ ಈ ಉದ್ಯಾನವನ್ನು ನಾಡಿಗೆ ಸಮರ್ಪಣೆ ಮಾಡಿಲ್ಲ. ಆದರೆ, ಜನವೋ ಜನ. ಕೋಟ್ಯಂತರ ರುಪಾಯಿ ವೆಚ್ಚ ಮಾಡಿ, ನಿರ್ಮಾಣ ಮಾಡಿರುವ ಉದ್ಯಾನವನ್ನು ಉದ್ಘಾಟನೆ ಮಾಡುವುದಕ್ಕೆ ಆಗುತ್ತಿಲ್ಲ ಈಗಿನ ಜಿಲ್ಲಾಡಳಿತಕ್ಕೆ. ಆದರೆ, ಈಗಾಗಲೇ ಉದ್ಯಾನದಲ್ಲಿ ಪುಂಡರ ಉಪಟಳ ಹೆಚ್ಚಾಗಿದ್ದು, ಸರಿಯಾದ ನಿರ್ವಹಣೆ ಇಲ್ಲದೆ ಉದ್ಘಾಟನೆಗೂ ಮುನ್ನವೆ ಪರಿಕರಗಳು ಹಾಳಾಗಲು ಶುರುವಾಗಿರುವುದು ಮಾತ್ರ ದುರಂತ.
ಹುಲಿಕೆರೆ ಮೈದಾನಕ್ಕೆ ಹೋದರೆ ಸಾಕು ನಿಮ್ಮನ್ನು ಉದ್ಯಾನ ಸ್ವಾಗತಿಸುತ್ತದೆ. ಈ ಹಿಂದಿನ ಸರ್ಕಾರ ಸುಮಾರು ರು. 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಉದ್ಯಾನ ಅತ್ಯುತ್ತಮವಾಗಿ ನಿರ್ಮಾಣವಾಗಿದೆ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನೀಡಿದ ಮಾರ್ಗದರ್ಶನದಂತೆಯೇ ನಿರ್ಮಾಣ ಮಾಡಲಾಗಿದೆ.
ರಾತ್ರಿ ಸಮಯದಲ್ಲಿ ಕಾವಲು ಇಲ್ಲದ ಕಾರಣ ದಾಳಿ ಮಾಡುವ ಪುಂಡರು ಅಲ್ಲಿಯ ವಿದ್ಯುತ್ ದೀಪ, ವೈಯರ್ ಮತ್ತಿತರರು ಸಾಮಗ್ರಿಗಳನ್ನು ಕಿತ್ತುಕೊಂಡು ಹೋಗುತ್ತಿದ್ದಾರೆ. ಆದ್ದರಿಂದ ಇದನ್ನು ಸರಿಪಡಿಸಬೇಕು ಮತ್ತು ಕೂಡಲೇ ಅದನ್ನು ಉದ್ಘಾಟನೆ ಮಾಡಬೇಕು ಎನ್ನುವುದು ಸ್ಥಳೀಯರ ಒತ್ತಾಸೆ. ಹಾಳು ಹೊಡೆಯುವ ಕೊಪ್ಪಳದಲ್ಲಿ ಹುಡುಕಿದರೂ ವಿಶ್ರಾಂತಿಗೆ ಸ್ಥಳ ಇರಲಿಲ್ಲ. ನಗರದ ಮಧ್ಯಭಾಗದಲ್ಲಿ ಸಿದ್ದಯ್ಯ ಪುರಾಣಿಕ ಹೆಸರಿನ ಪಾಳುಬಿದ್ದ ಪಾರ್ಕ್ ಒಂದೆ ಗತಿಯಾಗಿತ್ತು. ಆದರೆ, ಈಗ ಅತ್ಯುತ್ತಮ ಉದ್ಯಾನವನ್ನು ನಿರ್ಮಾಣ ಮಾಡಿ ವರ್ಷವಾಗಿದ್ದರೂ ಇನ್ನೂ ಉದ್ಘಾಟನೆ ಮಾಡಿಲ್ಲ ಎನ್ನುವುದು ಮಾತ್ರ ಅಚ್ಚರಿ.
ಕೊಪ್ಪಳದಲ್ಲಿ ಯೋಜನೆ ಕಾರ್ಯಗತವಾಗುವುದೆ ವಿಳಂಬ ಎನ್ನುವಂತೆ ಆಗಿರುವಾಗ ಈಗ ಪೂರ್ಣಗೊಂಡಿರುವ ಉದ್ಯಾನ ಉದ್ಘಾಟನೆ ಮಾಡುವುದಕ್ಕೂ ವಿಳಂಬ ಮಾಡುತ್ತಿರುವುದು ಮಾತ್ರ ನಾಚಿಕೆಗೇಡಿನ ಸಂಗತಿ ಎಂದೇ ಹೇಳಲಾಗುತ್ತದೆ. ಕೂಡಲೇ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ, ಉದ್ಘಾಟನೆಗೂ ಮುನ್ನವೆ ಹಾಳಾಗಿರುವ ವಸ್ತುಗಳನ್ನು ದುರಸ್ತಿ ಮಾಡಿ, ಅರ್ಪಣೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಎನ್ನುವುದು ಜನರ ಒತ್ತಾಯವೂ ಆಗಿದೆ.
-ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.