ಜಗತ್ತಿಗೆ ಜ್ಞಾನದ ಬೆಳಕಾದ ಸ್ವಾಮಿ ವಿವೇಕಾನಂದರು
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 12
ಬಹಳಷ್ಟು ಜನರು ಅಧಿಕಾರ, ಅಂತಸ್ತು, ಶ್ರೀಮಂತಿಕೆಯಿಂದ ಗುರುತಿಸಿಕೊಂಡರೆ, ಸ್ವಾಮಿ ವಿವೇಕಾನಂದರು ತಮ್ಮ ವ್ಯಕ್ತಿತ್ವದ ಮೂಲಕ ಜಗತ್ತನ್ನೇ ಬೆಳಗಿದರೆಂದು ಅಕ್ಕಿಆಲೂರಿನ ಶಿವಬಸವ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದರ 151ನೇ ಜಯಂತಿ ಅಂಗವಾಗಿ ಸ್ವಾಮಿ ವಿವೇಕಾನಂದ ಅಭಿಮಾನಿಗಳ ವೇದಿಕೆ, ವಿವೇಕ ಜಾಗೃತ ಬಳಗ, ಎಸ್‌ಎಫ್‌ಐ, ಎಬಿವಿಪಿ ಆಶ್ರಯದಲ್ಲಿ ಜರುಗಿದ ಸ್ವಾತಂತ್ರ್ಯ ಹೋರಾಟಗಾರ ಎಸ್.ಆರ್. ಮಹಾರಾಜಪೇಟ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣೆ ಹಾಗೂ ಆಯುರ್ವೇದ ಔಷಧಿಗಳ ಮಾಹಿತಿ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯುದ್ಧ ಪರಂಪರೆಯಿಂದ ನಲುಗಿದ್ದ ರಾಷ್ಟ್ರಗಳಿಗೆ ಶಾಂತಿ ಸಂದೇಶ ಸಾರಿದ ವಿವೇಕಾನಂದರು. ಸಚ್ಚಾರಿತ್ರ್ಯ ಹೊಂದಿದ ಯುವಕರಿಂದ ದೇಶದ ಪ್ರಗತಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರ ಆದರ್ಶಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದರು.
ಶಿಬಿರ ಉದ್ಘಾಟಿಸಿದ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷೆ ಮಾಲತಿ ಸುಧೀರ, ಯುವ ಜನಾಂಗ ದುಶ್ಚಟಗಳಿಗೆ ಮಾರು ಹೋಗುತ್ತಿದ್ದು, ಮಾನವೀಯ ಮೌಲ್ಯಗಳ ಅಧಃಪತನವಾಗುತ್ತಿದೆ. ಮಹಿಳೆಯನ್ನು ದೇವತೆ ಎಂದು ಪೂಜಿಸುವ ದೇಶದಲ್ಲೇ ಅತ್ಯಾಚಾರ ಎಲ್ಲೆ ಮೀರಿದ್ದು ದುರಂತ ಎಂದರು.
ತಹಸೀಲ್ದಾರ್ ಶಿವಶಂಕರ ನಾಯಕ್ ಮಾತನಾಡಿದರು. ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ವಿವೇಕ ಜಾಗೃತ ಬಳಗದ ಅಧ್ಯಕ್ಷ ಶಿವಕುಮಾರ ಹತ್ತಿಕಾಳ, ಕೋಮು ಸೌಹಾರ್ದ ವೇದಿಕೆ ಅಧ್ಯಕ್ಷ ಮಹ್ಮದ್ ರಫೀ ಹಕೀಮ್, ಎಸ್‌ಎಫ್‌ಐ ಅಧ್ಯಕ್ಷ ಮಂಜು ಪೂಜಾರ, ಡಾ ರಾಜಶೇಖರ ವೈದ್ಯ, ಡಾ ಗಿರೀಶ ಕುಲಕರ್ಣಿ, ರೋಷನ್ ದೊಡ್ಮನಿ, ಶಿವಕುಮಾರ ಸುಣಗಾರ, ಜ್ಞಾನೇಂದ್ರಕುಮಾರ, ರಾಮಣ್ಣ ಹಡಗಲಿ ಇದ್ದರು. ಜೀವರಾಜ ಛತ್ರದ ಸ್ವಾಗತಿಸಿ, ನಿರೂಪಿಸಿದರು, ಶಶಿಧರ ಗೊಲ್ಲರಹಳ್ಳಿಮಠ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

