ಹಾವೇರಿ

ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಮನವಿ

Published On :

ಹಾವೇರಿ: ಅಡುಗೆ ಅನಿಲ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿತು.
ಅಡುಗೆ ಅನಿಲ ಸಿಲಿಂಡರ್ಗೆ ನಿರಂತರವಾಗಿ ಬೆಲೆ ಏರಿಸಲಾಗುತ್ತಿದೆ. ಈ ರೀತಿ ಬೆಲೆ ಏರಿಸುತ್ತಿದ್ದರೆ ಬಡ ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದವರು ಜೀವನ ನಡೆಸುವುದೇ ಕಷ್ಟಕರವಾಗುತ್ತದೆ. ಅಗತ್ಯ ವಸ್ತುಗಳು, ಆಹಾರ ಧಾನ್ಯಗಳ ಬೆಲೆಯೂ ನಿರಂತರವಾಗಿ ಏರುತ್ತಲೇ ಇದೆ. ಇದು ಜನಸಾಮಾನ್ಯರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಇರುವ ಕಾಳಜಿಯನ್ನು ತೋರಿಸುತ್ತದೆ. ಈ ರೀತಿ ಬೆಲೆ ಏರಿಸಿರುವುದು ಖಂಡನೀಯ. ತಕ್ಷಣ ಸಿಲಿಂಡರ್ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆ ಇಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವೇದಕೆ ಕಾರ್ಯಕರ್ತರು ಆಗ್ರಹಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಟೀಕಿಹಳ್ಳಿ, ವೇದಿಕೆ ನಗರಾಧ್ಯಕ್ಷ ಶಿವಬಸವ ಬಣಕಾರ, ನಗರ ಕಾರ್ಯದರ್ಶಿ ನವೀನ ಅಪ್ಪಾಜಿ, ದಾರಕುಸ್ವಾಮಿ ಮಳಿಮಠ, ನಿಖಿಲ ಕೊರಡೂರ, ಸಾಗರ ಅಂಗಡಿ, ನವೀನ ಛಲವಾದಿ, ಗಂಗಾಧರ ಅಕಳಂಡಸ್ವಾಮಿಮಠ, ಶ್ರೀಧರ ಹಿರೇಮಠ, ರಾಮನಗೌಡ ಅಂದಾನಿಗೌಡ್ರ, ಶಿವಕುಮಾರ ಹಿರೇಮಠ, ಶಿವಾನಂದ ದೇವರವರ, ಶಿವಯೋಗಿ ಹಿರೇಮಠ, ಸಂತೋಷ ಅಣಜಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.