ಹಾವೇರಿ

ಫೆ. 2ರಿಂದ ವೇದಾಂತ ಪರಿಷತ್ ಮಹಾಸಭೆ

Published On :

ರಾಣಿಬೆನ್ನೂರು: ಇಲ್ಲಿನ ಸಿದ್ಧಾರೂಢ ನಗರದಲ್ಲಿರುವ ಸಿದ್ಧಾರೂಢ ಮಠದಲ್ಲಿ ಫೆ. 2ರಿಂದ 4ರ ವರೆಗೆ 14ನೇ ವರ್ಷದ ವೇದಾಂತ ಪರಿಷತ್ ಮಹಾಸಭೆ ನಡೆಯಲಿದೆ. ಭಕ್ತರ ಸಹಕಾರದಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪೀಠಾಧಿಕಾರಿ ಮಲ್ಲಯ್ಯ ಸ್ವಾಮಿಗಳು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 2ರಂದು ಅನುಪಮಾಚಲ ಭಕ್ತಿ ಭಾವನುಕೂಲನೆ ಶಂಭುಲಿಂಗ ಹಾಗೂ ಕಂಡು ಕೇಳಿ ಮತ್ತೆ ಮೋಹಿಪರೆ ಬಲ್ಲವರು ಎಂಬ ಕುರಿತು ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಸದ್ಗುರು ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮಿಗಳು, ಹುಬ್ಬಳ್ಳಿಯ ಜಡೆಸಿದ್ಧಾಶ್ರಮದ ಮುಕ್ತಾನಂದ ಮಹಾಸ್ವಾಮಿಗಳು ಉಪದೇಶ ನೀಡುವರು. ಫೆ. 3ರಂದು ಫಲಿಸಲರಿಯವು ಪುಣ್ಯದನುಕೂಲವಿಲ್ಲದಿರೆ ತನಗೆ ಮನವೆಳಸಿದಂತೆ ಹಾಗೂ ಚಿಂತಿಸದಿರು ಸುಖ ದುಃಖದೆಡೆಯೊಳು ನೀನಿಂತು ತಿಳಿದ ಬಳಿಕ ಎಲೆ ಜೀವನೆ ಎಂಬ ಬಗ್ಗೆ ಹುಬ್ಬಳ್ಳಿ ಸಿದ್ಧಾರೂಢ ಮಠದ ಸಚ್ಚಿದಾನಂದ ಮಹಾಸ್ವಾಮಿಗಳು, ಬಳ್ಳೂರು ಸಿದ್ಧಾರೂಡ ಮಠದ ವಿದ್ಯಾನಂದ ಭಾರತಿ ಮಹಾಸ್ವಾಮಿಗಳು ಉಪದೇಶ ನೀಡುವರು. ಫೆ. 4ರಂದು ಬೆಳಗ್ಗೆ 8.30ಕ್ಕೆ ಆರು ಬಲ್ಲರು ನಿಜಾನಂದ ಬೋಧಾಂಬುಧಿ ಬಗ್ಗೆ ಬುದ್ನಿ ಸಿದ್ಧಾರೂಢ ಮಠದ ಪ್ರಭಾನಂದ ಸ್ವಾಮಿಗಳು ಹಾಗೂ ಸೌಟಗಿ ಲಿಂಗಯ್ಯ ಮಹಾಸ್ವಾಮಿಗಳು ಉಪದೇಶ ನೀಡುವರೆಂದು ತಿಳಿಸಿದರು. ಮಠದ ಆಡಳಿತ ಮಂಡಳಿ ಸದಸ್ಯರಾದ ಪವನಕುಮಾರ ಕೆ. ಮಲ್ಲಾಡದ, ಭೀಮಣ್ಣ ಹಾದಿಮನಿ, ದೇವೇಂದ್ರಪ್ಪ ಎ., ರೇವಣ್ಣ, ಬಸವರಾಜ ದೊಡ್ಡತಮ್ಮಣ್ಣನವರ, ಶಿವಪ್ಪ ಕುರುವತ್ತಿ, ತಾಪಂ ಸದಸ್ಯೆ ಪೂರ್ಣಿಮಾ ಕುರುವತ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.