ಜಾತಿರಹಿತ ಸಮಾಜಕ್ಕೆ ಅನುಭವ ಮಂಟಪ ಮಾದರಿ
ಹಾನಗಲ್ಲ: ಜಾತಿ-ವರ್ಗರಹಿತ ಸಮಾಜ ನಿರ್ಮಾಣಕ್ಕೆ ಅನುಭವ ಮಂಟಪವೇ ಮಾದರಿ. ಹುಟ್ಟಿನಿಂದಲ್ಲದೆ, ನಮ್ಮ ನಡೆ-ನುಡಿಗಳಿಂದ ಕುಲ ನಿರ್ಣಯವಾಗುತ್ತದೆ ಎಂದು ಸಾರಿದ ಶಿವಯೋಗಿ ಸಿದ್ಧರಾಮ ಕಾಯಕ ಮಂತ್ರವನ್ನು ಜಗತ್ತಿಗೆ ಬೋಧಿಸಿದರೆಂದು ಲೋಕೋಪಯೋಗಿ ಇಲಾಖೆ ಅಭಿಯಂತ ಬಿ.ವೈ. ಬಂಡಿವಡ್ಡರ ಶ್ಲಾಘಿಸಿದರು.
ಫ್ರೆಂಡ್ಸ್ ಅಸೋಸಿಯೇಶನ್ ಸಭಾಭವನದಲ್ಲಿ ನಡೆದ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಜೆಇಕೋ ಅಧ್ಯಕ್ಷ ಎ.ಎಸ್. ಬಳ್ಳಾರಿ, ನ್ಯಾಯವಾದಿ ಎಸ್.ಆರ್. ಪಾಟೀಲ, ಎಪಿಎಂಸಿ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ ಮಾತನಾಡಿದರು. ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರು ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರ, ಸದಸ್ಯ ಹನುಮಂತಪ್ಪ ಗೊಂದಿ, ಜಿಪಂ ಸದಸ್ಯೆ ಕಸ್ತೂರವ್ವ ವಡ್ಡರ, ತಾಪಂ ಇಒ ಡಾ ಡಿ.ಸಿ.ಬಸವರಾಜ, ಮಂಜುನಾಥ ಕೊಪ್ಪರಸಿಕೊಪ್ಪ, ಸಮಾಜ ಕಲ್ಯಾಣಾಧಿಕಾರಿ ಚಂದ್ರಪ್ಪ ನರಸಗೊಂಡರ, ಸಿಡಿಪಿಒ ಬಿ.ಆರ್. ಶೆಟ್ಟರ ಇದ್ದರು. ಜನತಾ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಹಾಡಿದರು. ರವಿ ಶೇಷಗಿರಿ ಸಿದ್ಧರಾಮರು ರಚಿಸಿದ ವಚನಗಳನ್ನು ಹೇಳಿದರು. ಬಿಇಒ ಪ್ರಭು ಸುಣಗಾರ ಸ್ವಾಗತಿಸಿದರು. ಶಿಕ್ಷಕ ನಿರಂಜನ ಗುಡಿ ನಿರೂಪಿಸಿದರು. ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

