ತುಂತುರು ನೀರಾವರಿ ಲಾಭಕರ: ಬೊಮ್ಮಾಯಿ
ಶಿಗ್ಗಾಂವಿ: ಮಳೆಯಾಶ್ರಿತ ಬೆಳೆ ಅವಲಂಬಿಸಿದರೆ ರೈತರಿಗೆ ಆದಾಯ ಕಡಿಮೆಯಾಗುತ್ತದೆ. ನೀರು ಲಭ್ಯವಿರುವ ಕಡೆ ತುಂತುರು ನೀರಾವರಿ ಅಳವಡಿಸಿಕೊಂಡರೆ ಆದಾಯ ಹೆಚ್ಚಿಸಬಹುದು ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ದುಂಡಶಿ ಗ್ರಾಮದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ಸ್ಫೂರ್ತಿ ಪ್ರತಿಷ್ಠಾನದ ಆಶ್ರಯದಲ್ಲಿ ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆಯಲ್ಲಿ ತಡಸ ಉಪ-ಜಲಾನಯನದ ದುಂಡಶಿ ಭಾಗದ ರೈತರಿಗೆ ತುಂತುರು ನೀರಾವರಿ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.
ತಾಪಂ ಅಧ್ಯಕ್ಷೆ ಸುಜಾತಾ ಕಲಕಟ್ಟಿ, ಜಿಪಂ ಸದಸ್ಯರಾದ ಸರೋಜವ್ವ ಆಡೀನ, ಶಶಿಧರ ಹೊನ್ನಣ್ಣನವರ, ಸಿ.ಎಸ್. ಪಾಟೀಟ, ತಾಪಂ ಸದಸ್ಯರಾದ ಉಮಾ ಡವಗಿ, ಈಶ್ವರಗೌಡ್ರ ಪಾಟೀಲ, ಗ್ರಾಪಂ ಅಧ್ಯಕ್ಷ ಈರಣ್ಣ ಮಹಾಜನಶೆಟ್ಟರ, ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿಗಳಾದ ಬಿ. ಮಂಜುನಾಥ, ಸಹಾಯಕ ಕೃಷಿ ನಿರ್ದೇಶಕ ವೀರಭದ್ರ ರೆಡ್ಡಿ, ತಾಲೂಕು ಜಲಾನಯನ ಅಭಿವೃದ್ಧಿ ಅಧಿಕಾರಿಗಳಾದ ಬಸವನಗೌಡ್ರು ಪಾಟೀಲ, ಕೃಷಿ ಸಹಾಯಕ ಬಿ.ಜಿ. ಗುಡ್ಡಿ, ಸ್ಫೂರ್ತಿ ಸಂಸ್ಥೆಯ ಬಿ. ಗುರುಶಾಂತಪ್ಪ, ಶೇಖರಗೌಡ ಏಗನಗೌಡ್ರ, ಗುತ್ತೆಪ್ಪ ಅಚ್ಚಿಗೇರಿ, ಅಶೋಕ ಮುರಿಗೆನ್ನವರ, ಪುಂಡಲೀಕ ಭಟ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

