ಫಾಸಿಲ್ಸ್ ರಾಷ್ಟ್ರೀಯ ಸಮ್ಮೇಳನ ಸಮಾರೋಪ
ಶಿಗ್ಗಾಂವಿ: ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಸಂಘ (ಫಾಸಿಲ್ಸ್)ಗಳ ಸಹಯೋಗದಲ್ಲಿ ನಡೆದ ಎರಡು ದಿನಗಳ ಫಾಸಿಲ್ಸ್ ರಾಷ್ಟ್ರೀಯ ಸಮ್ಮೇಳನ ಸೋಮವಾರ ಕೊನೆಗೊಂಡಿತು.
ದೇಸೀಜ್ಞಾನ, ಗ್ರಾಮೀಣ ಮತ್ತು ಬುಡಕಟ್ಟು ಕಾರ್ಯಗಳ ನಿರ್ವಹಣೆ, ಗ್ರಾಮೀಣ ಮತ್ತು ಬುಡಕಟ್ಟು ಸಂಸ್ಕೃತಿಗಳಲ್ಲಿ ಉತ್ಪಾದನೆ ಹಾಗೂ ಸುಸ್ಥಿರ ಅಭಿವೃದ್ಧಿ ಮತ್ತು ಜಾನಪದ ಕುರಿತಾದ ಗೋಷ್ಠಿಗಳಲ್ಲಿ ಗಂಭೀರ ಚರ್ಚೆಗಳು ನಡೆದವು.
ನಾಗಂದಿಕೆ ವೇದಿಕೆಯಲ್ಲಿ ಡಾ ಟಿ. ಸತ್ಯನಾರಾಯಣ ಗೋದಾವರಿ ಬುಡಕಟ್ಟು ಸಂಸ್ಕೃತಿ ಮತ್ತು ಪರಂಪರೆ ಕುರಿತು, ಕುರುಂಬರ ಬೇಸಾಯ ಪದ್ಧತಿಗಳ ಕುರಿತು ಶ್ರೀಮಣಿ ಪಿ. ಪ್ರಬಂಧ ಮಂಡಿಸಿದರು. ಡಾ ಜ್ಯೋತ್ಸ್ನಾ ಚಂದ್ರಕಾಂತ್ ಕೃಷಿ ಪಾರಂಪರಿಕ ತಂತ್ರಜ್ಞಾನ ಕುರಿತು ವಿಷಯ ಮಂಡಿಸಿದರೆ, ಮೈಸೂರು ಜಿಲ್ಲೆಯ ಕರಕುಶಲ ಕಲೆಗಳ ಪಾರಂಪರಿಕ ಜ್ಞಾನದ ಬಗ್ಗೆ ಡಾ ಗೌರೀಶ, ಬಳ್ಳಾರಿ ಜಿಲ್ಲೆಯ ಜನಪದ ರಂಗಭೂಮಿ ಕುರಿತು ಡಾ ಸುಜಾತಾ ಅಕ್ಕಿ ಮಾತನಾಡಿದರು. ಶ್ರೀ ಕೃಷ್ಣರೆಡ್ಡಿ, ಎಲ್. ಶ್ರೀನಿವಾಸ ಡಪ್ಪು ಜಾತುಲು ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿಷಯ ಮಂಡಿಸಿದರು.
ನಡುಮನೆ ವೇದಿಕೆಯಲ್ಲಿ ಡಾ ರಾಘವನ್ ಪಯ್ಯನಾಡ್ ಜಾನಪದ ದತ್ತಗಳ ಸಂಗ್ರಹ ಹಾಗೂ ಭಾಷಿಕ ವಿಶ್ಲೇಷಣೆಯ ಪ್ರಸ್ತುತತೆ ಬಗ್ಗೆ ಉಪನ್ಯಾಸ ನೀಡಿದರು. ಡಾ ಪಿ. ನಾಜಿಮುದ್ದೀನ್, ದೀಪೇಶ್ ವಿ.ಕೆ., ಡಾ ರಾಜಲಕ್ಷ್ಮೀ ಅಚತ್, ಎ.ಜಿ. ಅರುಮಖಾಮ್, ಎಂ. ಸೋಮರಾಜೇಂದ್ರ, ಡಾ ಜಿ. ವಿಜಯಾ ಪ್ರಬಂಧ ಮಂಡಿಸಿದರು.
ತರಗತಿ ಕೊಠಡಿಯಲ್ಲಿ ನಡೆದ ಗೋಷ್ಠಿಗಳಲ್ಲಿ ಡಾ ಸಿ.ಟಿ. ಗುರುಪ್ರಸಾದ್, ಕೆ. ಬಾಲಾಜಿ ನಾಯಕ, ರವಿ, ಡಾ ಎಂ. ಉನ್ನಿಕೃಷ್ಣನ್, ಮೀರಾ ಎಚ್.ಎನ್., ರಾಜಶ್ರೀ ಪಾಟೀಲ ವಿಷಯ ಮಂಡಿಸಿದರು. ಡಾ ಓ. ಮುತ್ತಯ್ಯ, ಡಾ ಪುರುಷೋತ್ತಮ ಬಿಳಿಮಲೆ, ಪ್ರೊ ಎಚ್.ಎಂ. ಮಹೇಶ್ವರಯ್ಯ, ಡಾ ಎನ್. ಭಕ್ತವತ್ಸಲರೆಡ್ಡಿ, ಡಾ ಸುಜಾತಾ ಅಕ್ಕಿ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು. ಅರ್ಪಣಾ ಹೆಗಡೆ, ಡಾ ಭಾರತಿ ಮರವಂತೆ, ವಿಜಯಲಕ್ಷ್ಮೀ ಗೇಟಿಯವರ, ಪ್ರಕಾಶ ಹೊಸಮನಿ ನಿರೂಪಿಸಿದರು.
ಜಾನಪದ ವಿವಿ ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ, ಕುಲಸಚಿವ ಪ್ರೊ ಡಿ.ಬಿ. ನಾಯಕ, ಮೌಲ್ಯಮಾಪನ ಕುಲಸಚಿವ ಹಾಗೂ ಫಾಸಿಲ್ಸ್ ಪ್ರಾದೇಶಿಕ ಕಾರ್ಯದರ್ಶಿ ಪ್ರೊ ಸ.ಚಿ. ರಮೇಶ, ಹಿರಿಯ ಸಂಶೋಧನಾಧಿಕಾರಿ ಡಾ ಕೆ. ಪ್ರೇಮಕುಮಾರ, ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ ಚಂದ್ರ ಪೂಜಾರಿ. ಡಾ ತೀ.ನಂ. ಶಂಕರನಾರಾಯಣ ಇದ್ದರು.
ಸಾಂಸ್ಕೃತಿಕ ವೈಭವ
ನಾಗಂದಿಕೆ ವೇದಿಕೆಯಲ್ಲಿ ಸೋಮವಾರ ನಡೆದ ಜಾನಪದ ವೈಭವ ಕಾರ್ಯಕ್ರಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸಿತು. ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ ಮದ್ದಳೆ ಬಾರಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಕಲಾವಿದ ಅಶೋಕ ಕುರುಬರ ಹಾಗೂ ಸಂಗಡಿಗರಿಂದ ಅಭಿಮನ್ಯು ಕಾಳಗದ ದೊಡ್ಡಾಟ ಪ್ರಸಂಗ ಪ್ರದರ್ಶಿಸಿದರು. ರಾಮಚಂದ್ರಪ್ಪ ಅರ್ಕಸಾಲಿ ಹಾಗೂ ಸಂಗಡಿಗರು ಹಿಮ್ಮೇಳದಲ್ಲಿ ಸಾಥ್ ನೀಡಿದರು. ನಿಜಗುಣ ಶಿವಯೋಗಿ ಸಣ್ಣಾಟ ಪ್ರಸಂಗವನ್ನು ಧಾರವಾಡದ ರಂಗಸಮಾಜ ಕಲಾವಿದರು ಡಾ ಶ್ರೀಶೈಲ ಹುದ್ದಾರ ನಿರ್ದೇಶನದಲ್ಲಿ ಪ್ರದರ್ಶಿಸಿದರು.
ಡಾ ರಾಮು ಮೂಲಗಿ, ಹಾಲೇಶ ಗುಂಗೇರ, ಎನ್. ಮೋಹನಕುಮಾರ ಜಾನಪದ ಗೀತೆ ಹಾಡಿ ರಂಜಿಸಿದರು. ಕಲಾವಿದ ಮಾದಶೆಟ್ಟಿ ಹಾಗೂ ಸಂಗಡಿಗರು ಮಂಟೇಸ್ವಾಮಿ ಕಾವ್ಯ ಹಾಡಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಎಂ.ಬಿ. ಭರತನಾಟ್ಯ ಪ್ರದರ್ಶಿಸಿದರು. ವಿದ್ಯಾರ್ಥಿಗಳ ಜತೆ ಸೇರಿ ಭಾಂಗ್ರಾ ನೃತ್ಯ ಮಾಡಿದರು. ಎಂಬಿಎ ವಿದ್ಯಾರ್ಥಿ ಅಭಿನಯಾ ಜನಪದ ಗೀತೆಗೆ ಹೆಜ್ಜೆ ಹಾಕಿದರು. ಮುಗಳಿಯ ಮಲ್ಲಿಕಾರ್ಜುನ ಜನಪದ ಕಲಾ ತಂಡ ಹಾಗೂ ವಿವಿ ವಿದ್ಯಾರ್ಥಿಗಳು ಜೋಗತಿ ನೃತ್ಯ ಪ್ರದರ್ಶಿಸಿದರು. ಡಾ ಬಸಪ್ಪ ಬಂಗಾರಿ ಸಂಯೋಜಿಸಿ, ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

