ಹಾವೇರಿ

ಭೀಮಾಶಂಕರ ಶ್ರೀ ಅಡ್ಡಪಲ್ಲಕ್ಕಿ ಉತ್ಸವ

Published On :

ರಾಣಿಬೆನ್ನೂರು: ಲೋಕ ಕಲ್ಯಾಣಾರ್ಥ ನಗರದಲ್ಲಿ ಗುರುವಾರ ನಡೆದ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಮೇಡ್ಲೆರಿ ರಸ್ತೆಯ ವಾಗೀಶ ನಗರದ ವೀರಭದ್ರೇಶ್ವರ ದೇವಸ್ಥಾನದ ಬಳಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.
ಮಾಜಿ ಸಚಿವ ಸಿ.ಎಂ. ಉದಾಸಿ, ಮಾಜಿ ಶಾಸಕ ಜಿ. ಶಿವಣ್ಣ, ನಗರಸಭೆ ಹಂಗಾಮಿ ಅಧ್ಯಕ್ಷ ಶಿವಣ್ಣ ಮಣೇಗಾರ, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣನವರ, ಕೆಎಲ್‌ಇ ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಪಿ. ಲಿಂಗನಗೌಡ್ರ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೀರಣ್ಣ ಅಂಗಡಿ, ನಗರಸಭಾ ಸದಸ್ಯರಾದ ಬಸವರಾಜ ಹುಚ್ಚಗೊಂಡರ, ರವಿ ಮಾಂಡ್ರೆ, ಜಿಪಂ ಸದಸ್ಯ ಸಂತೋಷ ಪಾಟೀಲ, ಜ್ಯೋತಿ ರಾಮಲಿಂಗಣ್ಣನವರ, ನಗರಸಭೆ ಮಾಜಿ ಅಧ್ಯಕ್ಷ ರಾಮಣ್ಣ ಕೋಲಕಾರ, ಕೆ.ವಿ. ಶ್ರೀನಿವಾಸ ಇದ್ದರು.
1008 ಕುಂಭ ಹೊತ್ತ ಸುಮಂಗಲಿಯರು, ಕೂಡ್ಲಿಗಿ ತಾಲೂಕು ಕೆ. ಅಯ್ಯನಹಳ್ಳಿ ಗ್ರಾಮದ ಗುರು ಕೊಟ್ಟೂರೇಶ್ವರ ಕರಡಿ ಮಜಲು ತಂಡ, ಕೆ ಬೈನಹಳ್ಳಿಯ ಮಹಿಳಾ ಡೋಳ್ಳಿನ ಮೇಳ, ಆರೇಮಲ್ಲಾಪುರದ ಪುರವಂತಿಕೆ ಮೇಳ, ಹರಿಹರ ಹಾಗೂ ಕಮದೋಡ ಗ್ರಾಮದ ಪುರವಂತಿಕೆ ಮತ್ತು ಸಮಾಳ ಮೇಳ, ಹಾವೇರಿ ತಾಲೂಕು ಅಂಗರಗಟ್ಟಿ ಗ್ರಾಮದ ನಾಶಿಕ್ ಡೊಳ್ಳಿನ ಮೇಳ, ಐರಣಿ ಹೊಳೆಮಠದ ಆನೆ ಶ್ರೀದೇವಿ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಮೆರುಗು ನೀಡಿದವು.
ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮ ಸಂಘಟಿಸಿದ್ದ ನೇಹರು ಮಾರ್ಕೆಟ್ ವರ್ತಕರ ಸಂಘದ ಅಧ್ಯಕ್ಷ ವಿ.ಬಿ. ಅಂಗಡಿ, ನಗರಸಭೆ ಸದಸ್ಯ ಪ್ರಭುಸ್ವಾಮಿ ಕರ್ಜಗಿಮಠ, ಚಂದ್ರಣ್ಣ ಸೊಪ್ಪಿನ, ಚಂದ್ರಪ್ಪ ರೋಡ್ಡನವರ, ಮಲ್ಲಣ್ಣ ಅಂಗಡಿ, ನಾಗರತ್ನಾ ತಾವರಗೊಂದಿ, ಶಾರದಾ ಪಟ್ಟಣಶೆಟ್ಟಿ, ಶೋಭಾ ಪಿ. ಅಂಗಡಿ, ಶಿವಲಿಂಗಯ್ಯ ಕರ್ಜಗಿಮಠ, ಸುಜಿತ್ ಜಂಬಗಿ, ಬಸವರಾಜ ತಾವರಗೊಂದಿ, ಬಸವರಾಜ ಪಟ್ಟಣಶೆಟ್ಟರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.