ಹಾವೇರಿ

ಬಿಲ್ ಪಾವತಿಸಿ: ಗುತ್ತಿಗೆದಾರರ ಧರಣಿ

Published On :

ಹಾವೇರಿ: ನಗರಸಭೆ ವತಿಯಿಂದ ವಿವಿಧ ಯೋಜನೆಗಳಲ್ಲಿ ಕಾಮಗಾರಿ ನಿರ್ವಹಿಸಿದ ರು. 4 ಕೋಟಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಗುತ್ತಿಗೆದಾರರು ಸೋಮವಾರ ನಗರಸಭೆ ಕಚೇರಿ ಎದುರು ಧರಣಿ ನಡೆಸಿದರು.
ನಗರಸಭೆಯ 18 ಬಿಜೆಪಿ ಸದಸ್ಯರು ಗುತ್ತಿಗೆದಾರರ ಹೋರಾಟ ಬೆಂಬಲಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ನಗರಸಭೆ ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗುತ್ತಿರುವ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಶೀಘ್ರ ಬಿಲ್ ಪಾವತಿಸುವಂತೆ ಒತ್ತಾಯಿಸಿದರು.
ನಗರಸಭೆ ಸದಸ್ಯ ಅಂದಾನಿಗೌಡ್ರ ಗುಡ್ಡನಗೌಡ್ರ ಮಾತನಾಡಿ, ನಗರಸಭೆ ವತಿಯಿಂದ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆ, 13ನೇ ಹಣಕಾಸು ಯೋಜನೆ ಹಾಗೂ ಎಸ್‌ಎಫ್‌ಸಿ ಯೋಜನೆಯಲ್ಲಿ ಸಿವಿಲ್ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಈ ಬಗ್ಗೆ ಮೂರನೇ ತಂಡದಿಂದ ಪರಿಶೀಲನಾ ವರದಿ ಹಾಗೂ ಉಪವಿಭಾಗಾಧಿಕಾರಿಗಳಿಂದ ಸ್ಥಳ ಪರಿಶೀಲನೆಯೂ ನಡೆದಿದೆ. ಆದರೆ ಇದುವರೆಗೆ ಪೌರಾಯುಕ್ತರು ಕಾಮಗಾರಿ ಕೈಗೊಂಡ ತಮಗೆ ಬಿಲ್ ಪಾವತಿಸಿಲ್ಲ. ಪೌರಾಡಳಿತ ನಿರ್ದೇಶನಾಲಯ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಬಿಲ್ ನೀಡುವಂತೆ ತಿಳಿಸಿ ರು. 4 ಕೋಟಿ ಬಿಡುಗಡೆ ಮಾಡಿದೆ. ವರ್ಷ ಕಳೆದರೂ ಬಿಲ್ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸಂಘದ ಅಧ್ಯಕ್ಷ ಬಸವರಾಜ ಪೋಲನವರ, ಪ್ರವೀಣ ಶೆಟ್ಟರ್ ಮಾತನಾಡಿ, ಕಾಮಗಾರಿ ಕಳಪೆಯಾಗಿದ್ದರೆ ಬಿಲ್ ಕ್ಚೊಡಿ ಎನ್ನುತ್ತಿಲ್ಲ. ಕಾಮಗಾರಿ ಪೂರ್ಣಗೊಳಿಸಿ, ಪರಿಶೀಲಿಸಲಾಗಿದೆ. ಹಣ ಪಾವತಿಗೆ ಪೌರಾಡಳಿತ ನಿರ್ದೇಶನಾಲಯ ಸೂಚಿಸಿದೆ. ಯಾವುದೋ ಕೆಲಸ ಸರಿಯಾಗಿಲ್ಲ ಎಂದು ಎಲ್ಲ ಬಿಲ್ ತಡೆ ಹಿಡಿಯುವುದು ಸರಿಯಲ್ಲ ಎಂದರು. ವಿಜಯಕುಮಾರ ಚಿನ್ನಿಕಟ್ಟಿ, ಬಾಬುಸಾಬ್ ಮೊಮಿನ್‌ಗಾರ, ಹನುಮಂತ ನಾಯಕ ಬಾದಾಮಿ, ಲಲಿತಾ ಗುಂಡೇನಹಳ್ಳಿ, ಜ್ಯೋತಿ ಸಾತೇನಹಳ್ಳಿ, ಸುರೇಶ ದೊಡ್ಮನಿ, ಸುರೇಶ ಹೊಸ್ಮನಿ, ಹನುಮಂತಪ್ಪ ಬಂಡಿವಡ್ಡರ, ಮಾಲತೇಶ ಗಾಜಿ, ಜಯಪ್ಪ ದೇಸಳ್ಳಿ, ಚಂದ್ರಪ್ಪ ಕ್ಯಾತಣ್ಣನವರ, ಮಲ್ಲೇಶ ಭೋವಿ, ಟಿ.ಎಫ್. ತಳವಾರ, ಉಮ್ಮೀದ್ ನದಾಫ್, ಎಚ್.ಆರ್. ಹಸನ್‌ವಾಲೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.