ಹಾವೇರಿ

ತಾಯಿಯಿಂದ ಮಕ್ಕಳಿಗೆ ಸನ್ಮಾರ್ಗ, ಉತ್ತಮ ಶಿಕ್ಷಣ: ರೂಪಾ ಸಜ್ಜನ

Published On :

ಬ್ಯಾಡಗಿ: ಸೂಕ್ತ ಸಂದರ್ಭದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಮಾರ್ಗದರ್ಶನ ಸಿಗದಿದ್ದರೆ ಕುಟುಂಬ ಹಾಗೂ ಸಮಾಜಕ್ಕೆ ಭಾರವಾಗುವುದು ನಿಶ್ಚಿತ. ಈ ಶಕ್ತಿ ಕೇವಲ ತಾಯಿಯಲ್ಲಿದೆ ಎಂದು ಎಸ್‌ಜೆಜೆಎಂ ಕಾಲೇಜಿನ ಕನ್ನಡ ಅಧ್ಯಾಪಕಿ ರೂಪಾ ಸಜ್ಜನ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಮ್ಮೂರ ಗ್ರಾಮದ ಪಾಸಿ ಪ್ರಭಾವತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ತಾಯಂದಿರ ಸಭೆಯಲ್ಲಿ ಮಾತನಾಡಿದ ಅವರು, ಮಾನಸಿಕ ಛಲವಿದ್ದರೆ ದೈಹಿಕ ಪ್ರಕ್ರಿಯೆಗಳು ತಾನಾಗಿ ಪ್ರಾರಂಭವಾಗುತ್ತದೆ. ಶಸ್ತ್ರದಿಂದ ಗೆಲ್ಲಲಾಗದ್ದನ್ನು ಶಾಸ್ತ್ರ ಗೆಲ್ಲಿಸಬಲ್ಲದು. ವಾದದಿಂದ ಆಗದ್ದು ವಾತ್ಸಲ್ಯದಿಂದ ಆದೀತು. ಮಕ್ಕಳನ್ನು ಪ್ರೀತಿ-ವಾತ್ಸಲ್ಯದಿಂದ ಕಂಡು ಸನ್ಮಾರ್ಗದಲ್ಲಿ ನಡೆಸಬೇಕು ಎಂದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಹೊಲ ಹಾಗೂ ಮನೆಗೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳದೆ, ಓದುವ ವಾತಾವರಣ ಕಲ್ಪಿಸಬೇಕು ಎಂದು ಸೂಚಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಪೂರ್ಣಿಮಾ ಚಿಕ್ಕೇರೂರ ಮಾತನಾಡಿದರು. ಜೀವರಾಜ ಛತ್ರದ ಅಧ್ಯಕ್ಷತೆ ವಹಿಸಿದ್ದರು. 2012-13 ಸಾಲಿನ ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿದ ನಿರ್ಮಲಾ ಬ್ಯಾಡಗಿ, ಚಂದ್ರಶೇಖರ ಬಾರ್ಕಿ, ಲತಾ ಜೋಗಿಹಳ್ಳಿ, ವಿಶಾಲಾ ಬಾರಂಗಿ, ನವೀನ್ ದೊಡ್ಮನಿ ಅವರಿಗೆ ಸರ್ಕಾರದಿಂದ ಕೊಡಮಾಡಿದ ಪ್ರೋತ್ಸಾಹಧನದ ಚೆಕ್ ವಿತರಿಸಲಾಯಿತು. ಎಸ್‌ಡಿಎಂಸಿ ಉಪಾಧ್ಯಕ್ಷ ಅಶೋಕ ಹಿರೇಹಳ್ಳಿ, ಸದಸ್ಯರಾದ ಕರಿಯಪ್ಪ ಬಾರಂಗಿ, ದೇವೇಂದ್ರಪ್ಪ ಬ್ಯಾಡಗಿ, ಶಿವಪುತ್ರಪ್ಪ ಜೋಗಿಹಳ್ಳಿ, ಬಸವರಾಜಪ್ಪ ಬಾರಂಗಿ, ಶಿಕ್ಷಕರಾದ ಟಿ. ಚಂದ್ರಶೇಖರ, ಎಚ್.ಟಿ. ಸತ್ಯಪ್ರಕಾಶ, ಕೆ.ಸಿ. ಚಂದ್ರಶೇಖರ, ಪರಶುರಾಮ ಮುರಬಂಡಿ ಇದ್ದರು. ಕಿರಣ ಹಿರೇಹಳ್ಳಿ ಸ್ವಾಗತಿಸಿದರು. ಕವಿತಾ ದ್ಯಾಮನಗೌಡ್ರ ನಿರೂಪಿಸಿದರು. ಸಂಜೀವ ದಾದುಗೋಳ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.