ಸರ್ವಜ್ಞ ಪ್ರಾಧಿಕಾರ ರಚಿಸಲು ಆಗ್ರಹ
ಹಿರೇಕೆರೂರು: ನಾಡಿನ ವರಕವಿ ಸರ್ವಜ್ಞ ಪ್ರಾಧಿಕಾರ ರಚಿಸಬೇಕು ಮತ್ತು ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಸರ್ವಜ್ಞನಿಗೆ ಗೌರವ ಕೊಡಲು ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸರ್ಕಾರಕ್ಕೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕರಬಸಯ್ಯ ಬಸರಿಹಳ್ಳಿಮಠ ಮತನಾಡಿ, ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ನಾಡಕವಿ ಸರ್ವಜ್ಞ ಕವಿಯ ಬಗ್ಗೆ ಅನಾದರ ತೋರುವ ಮೂಲಕ ಪ್ರಾಧಿಕಾರ ರಚನೆಯಲ್ಲಿ ವಿಳಂಬ ಮಾಡಿದ್ದು, ಎಲ್ಲರಿಗೂ ತಿಳಿದ ವಿಷಯವಾಗಿದೆ.
ಸರ್ವಜ್ಞ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡರು ಪ್ರಾಧಿಕಾರ ರಚನೆ ಸುಳಿವು ನೀಡಿ ಘೋಷಣೆ ಮಾಡಿದರೂ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿಲ್ಲ. ನಂತರ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿ ರು. 2 ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿ ಪ್ರಾಧಿಕಾರ ರಚನೆಯತ್ತ ಒಲವು ತೋರಿದ್ದರೂ ಪ್ರಾಧಿಕಾರ ಮಾತ್ರ ರಚನೆಯಾಗದೆ ನೆನೆಗುದಿಗೆ ಬಿದ್ದಿದೆ. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದಿರುವುದು ತ್ರಿಪದಿ ಬ್ರಹ್ಮ ಸರ್ವಜ್ಞನಿಗೆ ತೋರುತ್ತಿರುವ ಅಗೌರವವಾಗಿದೆ. ಇನ್ನಾದರೂ ನಮ್ಮ ಮನವಿಗೆ ಸ್ಪಂದಿಸಿ ಸರ್ವಜ್ಞ ಪ್ರಾಧಿಕಾರ ರಚಿಸಲು ಮುಂದಾಗಬೇಕು ಹಾಗೂ ಸರ್ವಜ್ಞ ಜಯಂತಿ ಸರ್ಕಾರ ಆಚರಿಸಲು ಮುಂದಾಗಬೇಕು. ರು. 2 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಗೊಳಿಸಿ ಪ್ರಾಧಿಕಾರ ರಚನೆಗೆ ಹೆಚ್ಚಿನ ಒಲವು ತೋರಿಸಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು. ಈ ಮೂಲಕ ಸರ್ವಜ್ಞನ ನಾಡಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ವರಕವಿ ಸರ್ವಜ್ಞನ ನಾಡಾದ ಹಿರೇಕೆರೂರು ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಕುರಿತು ತಹಸೀಲ್ದಾರ್ ಶಕುಂತಲಾ ಚೌಗಲಾ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಗಿರೀಶ ಬಾರ್ಕಿ, ಉಪಾಧ್ಯಕ್ಷ ಮಲ್ಲನಗೌಡ ಪುಟ್ಟಳ್ಳವರ, ಮಂಜುನಾಥ ಹಳ್ಳಳ್ಳಿ ಪದಾಧಿಕಾರಿಗಳಾದ ಎಂ.ಎಸ್. ಹಿರೇಮಠ, ಮಹಾಂತೇಶ ಪೂಜಾರ, ಶಂಭು ಹಿರೇಮಠ, ರವಿ ಬನ್ನಿಹಟ್ಟಿ, ಅಣ್ಣಪ್ಪ ಮುಚಡಿ, ಬಸವರಾಜ ತಿಪ್ಪಣ್ಣನವರ, ಸಿದ್ದಪ್ಪ ಕಮಲಾಪುರ, ದೇವರಾಜ ಹಾರೋಗೂಪ್ಪದ, ಕಲ್ಲೇಶ ಸುಣಗಾರ, ವೆಂಕಟೇಶ ರೇವಣಕರ ವಿವಿಧ ಗ್ರಾಮ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸರ್ವಜ್ಞ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸದಾನಂದಗೌಡರು ಪ್ರಾಧಿಕಾರ ರಚನೆ ಸುಳಿವು ನೀಡಿ ಪ್ರಾಧಿಕಾರ ಅಸ್ಥಿತ್ವಕ್ಕೆ ಬರಲಿಲ್ಲ. ನಂತರ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿ ರು. 2 ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿ ಪ್ರಾಧಿಕಾರ ರಚನೆಯತ್ತ ಒಲವು ತೋರಿದ್ದರೂ ಪ್ರಾಧಿಕಾರ ಮಾತ್ರ ರಚನೆಯಾಗದೆ ನೆನೆಗುದಿಗೆ ಬಿದ್ದಿದೆ. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದಿರುವುದು ತ್ರಿಪದಿ ಬ್ರಹ್ಮ ಸರ್ವಜ್ಞನಿಗೆ ತೋರತ್ತಿರುವ ಅಗೌರವ.
ಕರವೇ ಜಿಲ್ಲಾಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

