ಹಾವೇರಿ

ಶೀಘ್ರವೇ ಹೆಲ್ತ್ ಕೇರ್ ಸೆಂಟರ್ ಸ್ಥಾಪನೆ: ಬಸವರಾಜ ಬೊಮ್ಮಾಯಿ

Published On :

ಶಿಗ್ಗಾಂವಿ: ಕ್ಷೇತ್ರದಲ್ಲಿ ಆರೋಗ್ಯಭರಿತ ಸಮಾಜ ಸ್ಥಾಪನೆಗೆ ಪೂರಕವಾಗಿ ದಿ. ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ಕೆಲಸ ಮಾಡಲಿದೆ. ದುಡಿಯವ ರೈತ, ಕಲಿಯವ ವಿದ್ಯಾರ್ಥಿಗೆ ಆಹಾರ, ಆರೋಗ್ಯ, ವಿದ್ಯೆ ಕಲ್ಪಿಸಲು ದಿ. ಎಸ್.ಆರ್. ಬೊಮ್ಮಾಯಿ ಅವರು ಕಂಡ ಕನಸು ನನಸು ಮಾಡುವ ಉದ್ದೇಶ ನನ್ನದು ಎಂದು ಶಾಸಕ ಬೊಮ್ಮಾಯಿ ಹೇಳಿದರು.
ತಾಲೂಕಿನ ಕಾಮನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮಾಜಿ ಮುಖ್ಯಮಂತ್ರಿ, ರಾಜಕೀಯ ಮುತ್ಸದ್ದಿ ದಿ. ಎಸ್.ಆರ್. ಬೊಮ್ಮಾಯಿ ಅವರ 90ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಚಿತ ಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾರಂಭದಿಂದಲೂ ಚಿಕಿತ್ಸೆಗೊಳಗಾಗುವ ಅನಾರೋಗ್ಯ ಮನುಷ್ಯನ ಸ್ಥಿತಿ-ಗತಿ ತಿಳಿಯಲು ಹೆಲ್ತ್ ಕೇರ್‌ನಿಂದ ಆರೋಗ್ಯ ಕಾರ್ಡ್ ಟ್ರಸ್ಟ್ ವಿತರಿಸುತ್ತದೆ ಎಂದರು. ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ತಾಪಂ ಅಧ್ಯಕ್ಷೆ ಸುಜಾತ ಕಲಕಟ್ಟಿ, ಉಪಾಧ್ಯಕ್ಷ ನಿಂಗಪ್ಪ ಹರಿಜನ, ಸದಸ್ಯರಾದ ಉಷಾ ಬಿಳಿ ಕುದರಿ, ಲಕ್ಷ್ಮವ್ವ ತೋಟದ, ಜಿಪಂ ಸದಸ್ಯ ಶಶಿಧರ ಹೊನ್ನಣ್ಣನವರ, ವಿರೂಪಾಕ್ಷಪ್ಪ ಆಡಿ, ಅರ್ಜುನ ಹಂಚಿನಮನಿ, ಡಾ. ಎಚ್. ಹನುಮಂತಪ್ಪ, ಡಾ. ಲಕ್ಷಣ ನಾಯ್ಕ, ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಬಗಾಡೆ ಉಪಸ್ಥಿತರಿದ್ದರು. ಇದಕ್ಕೂ ಪೂರ್ವ ದಿ. ಎಸ್.ಆರ್. ಬೊಮ್ಮಾಯಿ ಅವರ ಜನ್ಮದಿನಾಚರಣೆ ಅಂಗವಾಗಿ ಹಣ್ಣು ವಿತರಿಸಲಾಯಿತು. ನಂತರ ನಡೆದ ಶಿಬಿರದಲ್ಲಿ ನೂರಕ್ಕೂ ಹೆಚ್ಚು ರೋಗಿಗಳ ತಪಾಸಣೆ ಮಾಡಿ ಟ್ರಸ್ಟ್ ವತಿಯಿಂದ ಉಚಿತವಾಗಿ ಔಷಧ ವಿತರಿಸಲಾಯಿತು. ಎಸ್.ಎಸ್. ಜಾಧವ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.