ಹಾವೇರಿ

ನೀರು ನಿರ್ವಹಣಾ ಸಮಿತಿ ರಚಿಸಬೇಡಿ

Published On :

ಬ್ಯಾಡಗಿ: ಕಾವೇರಿ ನೀರು ನಿರ್ವಹಣಾ ಸಮಿತಿ ರಚಿಸದಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಮತ್ತು ಎಸ್‌ಎಫ್‌ಐ ತಾಲೂಕು ಘಟಕಗಳ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ಮಾಡಿ, ಬಳಿಕ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಹಳೇ ಪೊಲೀಸ್ ಠಾಣೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಅವರು ದಾರಿಯುದ್ದಕ್ಕೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ಮಾತನಾಡಿದ ಶಂಕರ ಕುಸಗೂರ, ಕಾವೇರಿ ನದಿ ರಾಜ್ಯದ ಜೀವನದಿ. ಆರಂಭದಿಂದಲೂ ನದಿ ನೀರು ಹಂಚಿಕೆ ವಿರುದ್ಧ ಕ್ಯಾತೆ ತೆಗೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ ಜಯಲಲಿತಾ ರಾಜ್ಯದ ಜನರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾವೇರಿ ನದಿಯಿಂದ ಈಗಾಗಲೇ 209 ಟಿಎಂಸಿ ನೀರನ್ನು ಪಡೆಯುತ್ತಿರುವ ತಮಿಳುನಾಡು ಅನಗತ್ಯವಾಗಿ ನೀರನ್ನು ಸಮುದ್ರ ಸೇರುವಂತೆ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಡಿಸೆಂಬರ್ ಒಳಗಾಗಿ ತನ್ನ ಪಾಲಿನ ನೀರು ಪಡೆದು ತನ್ನ ರಾಜ್ಯದಲ್ಲಿ ಡ್ಯಾಂ ನಿರ್ಮಿಸಿಕೊಳ್ಳುವಂತೆ ಸೂಚಿಸಿದ್ದರೂ ಕೋರ್ಟ್ ತೀರ್ಪಿಗೆ ಮನ್ನಣೆ ನೀಡಿಲ್ಲ ಎಂದರು.
ಚಂದ್ರು ಛತ್ರದ, ಜಿತೇಂದ್ರ ಸುಣಗಾರ, ಮಂಜುನಾಥ ಶಿರಾಳಕೊಪ್ಪ, ಬಸವರಾಜ ಹಾವನೂರು, ರಾಜು ಬಾಣಾಪುರ, ಮಂಜುನಾಥ ಕುಮ್ಮೂರ, ಕೃಷ್ಣ ಕರ್ಚಡ, ಜವೂರಸಾಬ್ ಹೇರೂರ, ಗಣೇಶ ಪಾತ್ರೋಟಿ, ಮುನಾನಾ ಎರೇಶೀಮಿ, ಜಯಪ್ಪ ಗೌಡ್ರ, ಅಲಿ ಬಳ್ಳಾರಿ, ಪಾಂಡುರಂಗ ಸುತಾರ ಇಸ್ಲಾಂ ಬಾಗಲಕೋಟೆ ಇನ್ನಿತರರು ಇದ್ದರು.
ಕಾವೇರಿ ರಾಜ್ಯದ ಜೀವನದಿ. ಆರಂಭದಿಂದಲೂ ನದಿ ನೀರು ಹಂಚಿಕೆ ವಿರುದ್ಧ ಕ್ಯಾತೆ ತೆಗೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ ಜಯಲಲಿತಾ ರಾಜ್ಯದ ಜನರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ.
 -ಶಂಕರ ಕುಸಗೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.