ಹಾವೇರಿ

ದೇವರಲ್ಲಿ ನಂಬಿಕೆಯಿಟ್ಟರೆ ಇಷ್ಟಾರ್ಥ ಸಿದ್ಧಿ: ಆದ್ವಾನಿಮಠ

Published On :

ಶಿಗ್ಗಾಂವಿ: ದೇವರಲ್ಲಿ ನಂಬಿಕೆಯಿಟ್ಟು ಸಚ್ಚಾರಿತ್ರರಾಗಿ ಬಾಳಿದರೆ ಇಷ್ಟಾರ್ಥ ಸಿದ್ಧಿಯಾಗುತ್ತವೆ ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ಎ.ಕೆ. ಆದ್ವಾನಿಮಠ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಕೊಟ್ಟಿಗೇರಿಯಲ್ಲಿ ನಡೆದ 29ನೇ ಬಂಗಾರ ಬಸವೇಶ್ವರ ಜಾತ್ರಾ ಮಹೋತ್ಸವದ ಸಮಾರಂಭದಲ್ಲಿ ಅವರು ಮಾತನಾಡಿ, ಭಕ್ತಿಯ ನೆಲವೀಡಾದ ಕೊಟ್ಟಿಗೇರಿಯಲ್ಲಿ ಬಂಗಾರ ಬಸವೇಶ್ವರ ದೇವಸ್ಥಾನ ಉತ್ತಮ ಮಟ್ಟದಲ್ಲಿ ನಿರ್ಮಾಣಗೊಂಡಿರುವುದು ಧರ್ಮ ಜಾಗೃತಿಗೆ ನಿದರ್ಶನವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಡಾ. ಆರ್.ಎಸ್. ಅರಳೆಲೆಹಿರೇಮಠ ಮಾತನಾಡಿ, ಒಂದು ಸಾವಿರದ ಎಂಟು ಮತ್ತು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಎಂದು ಸಾರಿದ ರಂಭಾಪುರಿ ಜಗದ್ಗುರು ಜಗದ್ಗುರುಗಳಾದ ವೀರಗಂಗಾಧರ ಸ್ವಾಮಿಗಳ ವೇದ ವಾಖ್ಯದ ಹಿರಿಮೆಯಾಗಿದೆ. ಅದನ್ನು ನಾವು ನೀವೆಲ್ಲರೂ ಬೆಳೆಸಲು ಮುಂದಾಗಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶಿವಾನಂದ ಗಚ್ಚಿನಮಠ ವಹಿಸಿದ್ದರು. ಮಾಜಿ ಪುರಸಭೆ ಸದಸ್ಯರಾದ ಮಲ್ಲೇಶಪ್ಪ ಬಡ್ಡಿ ಮಾತನಾಡಿದರು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿ ಪ್ರಥಮ ಸ್ಥಾನ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ತಲಾ 1010 ಕೊಟ್ಟು ಸನ್ಮಾನಿಸಲಾಯಿತು.
ಈರಪ್ಪ ಅಂಗಡಿ, ಈರಣ್ಣ ಶೀಲವಂತರ, ನೀಲಪ್ಪ ಸಣ್ಣಕ್ಕಿ, ಗಂಗಾಧರ ಅಂಗಡಿ ಉಪಸ್ಥಿತರಿದ್ದರು. ಎಸ್.ಜಿ ಯಲಿಗಾರ ಸ್ವಾಗತಿಸಿದರು. ಸಿ.ಎನ್. ಶಿಗ್ಗಾಂವಿ ನಿರೂಪಿಸಿದರು. ಗಂಗಾಧರ ಬಡ್ಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.