ಟೆಂಟ್ ವಾಸಿ ಮಗು ಶಾಲೆಗೆ ಸೇರ್ಪಡೆ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 4
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅದರಲ್ಲೊಬ್ಬನಾದ ಜಮ್ಮಯ್ಯಾ ಎಂಬ ಮಗುವನ್ನು ಶಾಲೆಗೆ ಸೇರಿಸುವಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ನಗರದ ಲಕಮಾಪುರ ಪ್ರದೇಶದ ವ್ಯಾಪ್ತಿಗೆ ಸೇರಿದ ವಿನಾಯಕ ನಗರದ ಬಯಲು ಜಾಗದಲ್ಲಿ ಟೆಂಟ್ ಹೂಡಿಕೊಂಡು ಕಳೆದ 4 ವರ್ಷಗಳಿಂದ ಬುಡಗ ಜಂಗಮ ಜನಾಂಗದವರು ವಾಸಿಸುತ್ತಿರುವುದನ್ನು ಗಮನಿಸಿದ ಅವರು, ದಾನೇಶ್ವರಿ ನಗರ ಮತ್ತು ಸುತ್ತಮುತ್ತ ವಿವಿಧ ಸ್ಥಳಗಳಲ್ಲಿ ವಾಸವಾಗಿರುವುದನ್ನು ಪತ್ತೆ ಹಚ್ಚಿದರು.
ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ, ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾಧಿಕಾರಿ ಎಂ.ಎಸ್. ಗುಂಡಪಲ್ಲಿ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎಫ್ ಭಜಂತ್ರಿ, ಬಿಆರ್ಪಿ ಸಿ.ಜಿ. ಮಠಪತಿ ಮತ್ತು ಸಿಆರ್ಪಿ ಎಸ್.ಎಸ್. ಸುರಳೇಶ್ವರ ಅವರನ್ನೊಳಗೊಂಡ ಕಾರ್ಯಪಡೆ ತಂಡದವರು ಟೆಂಟ್ನಲ್ಲಿರುವ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಜಮ್ಮಯ್ಯಾನನ್ನು ಶಾಲೆಗೆ ಸೇರಿಸಿದರು.
ಈ ಸಂದರ್ಭದಲ್ಲಿ ಇಜಾರಿಲಕಮಾಪುರ ಶಾಲೆ ಎಸ್ಡಿಎಂಸಿ ಅಧ್ಯಕ್ಷ ನಾಗರಾಜ ಮಲಗೋಡ ಟೆಂಟ್ ಕುಟುಂಬದ ಪಾಲಕರ ಮನವೊಲಿಸಿ ಮಗುವನ್ನು ಶಾಲೆಗೆ ದಾಖಲಿಸುವಲ್ಲಿ ಯಶಸ್ವಿಯಾದರು.
ಇಜಾರಿಲಕಮಾಪುರ ಶಾಲೆ ಪ್ರದಾನ ಗುರುಗಳಾದ ಎಂ.ಬಿ. ಬೈರಮ್ಮನವರ ಮಗುವನ್ನು ಶಾಲೆಗೆ ದಾಖಲಿಸಿ ಸಮವಸ್ತ್ರ, ಪುಸ್ತಕ ಇನ್ನುಳಿದ ಸೌಲಭ್ಯಗಳನ್ನು ಕೊಡಲು ವ್ಯವಸ್ಥೆ ಮಾಡಿಸಿದರು.
16 ಟೆಂಟ್ಗಳಲ್ಲಿ ವಾಸವಾಗಿರುವ ವಿವಿಧ ಕುಟುಂಬಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಿಕ್ಷಣದ ಮಹತ್ವ ತಿಳಿಸಿದರು. ಈ ಬುಡಗ ಜನಾಂಗದವರು ಮೂಲತಃ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ತಾಲೂಕಿನ ಪೆದ್ದ ತಮ್ಮಲಮ್ಮ ಗ್ರಾಮಕ್ಕೆ ಸೇರಿದವರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

