ಹಾವೇರಿ

ಮಹಿಳೆಯರು ಸ್ವ-ಉದ್ಯೋಗ ಕೌಶಲ್ಯ ಬೆಳೆಸಿಕೊಳ್ಳಬೇಕು

Published On :

ಹಿರೇಕೆರೂರು: ಸ್ವಸಹಾಯ ಸಂಘಗಳಲ್ಲಿರುವ ಮಹಿಳೆಯರು ವಿವಿಧ ಸ್ವಉದ್ಯೋಗ ಕೈಗೊಳ್ಳುವದರೊಂದಿಗೆ ವಿವಿಧ ಕೌಶಲ್ಯಗಳನ್ನು ಮೈಗೊಡಿಸಿಕೊಳ್ಳಬೇಕು. ಈ ಮೂಲಕ ಸಮಾಜದಲ್ಲಿ ನಿರ್ಭೀತಿಯಿಂದ ಬದುಕು ನಡೆಸಲು ಸಹಾಯವಾಗುತ್ತದೆ ಎಂದು ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಚ್.ಎಫ್. ಹಕ್ಕಿ ಕರೆ ನೀಡಿದರು.
ಅವರು ತಾಲೂಕಿನ ಎಂಕೆ ಯತ್ತಿನಹಳ್ಳಿ ಗ್ರಾಮದಲ್ಲಿ ಜಿಪಂ ಹಾವೇರಿ, ಜಿಲ್ಲಾ ಜಲಾನಯನ ಇಲಾಖೆಯ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾಸಂಸ್ಥೆಯ ಸಹಯೋಗದಲ್ಲಿ ಉದ್ಯಮ ಶೀಲತಾ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಸಹಾಯ ಸಂಘದಲ್ಲಿ ಸೇರ್ಪಡೆಗೊಂಡ ಮಹಿಳೆಯರು ಅಂಜಿಕೆಯನ್ನು ದೂರ ತಳ್ಳಿ ಧೈರ್ಯದಿಂದ ಸ್ವಉದ್ಯೋಗ ಮಾಡುವಂತಾಗಿದೆ. ಸಂಘದಲ್ಲಿ ಸಹಕಾರ, ಸಹಕಾರದಿಂದ ಒಗ್ಗಟ್ಟು, ಒಗ್ಗಟ್ಟಿನಿಂದ ಒಮ್ಮತ ಒಮ್ಮತದಿಂದ ನಿರೀಕ್ಷಿತ ಫಲಿತಾಂಶ ಕಾಣುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರು ಒಕ್ಕೂಟವನ್ನು ಮಾಡಿಕೊಂಡಲ್ಲಿ ಸ್ವಉದ್ಯೋಗ ಕೈಗೊಳ್ಳಲು ಜಲಾನಯನ ಹಾಗೂ ಸಿರಿ ಮೊದಲಾದ ಯೋಜನೆಗಳಿಂದ ಸಹಾಯ ಪಡೆಯಬಹುದಾಗಿದೆ ಎಂದು ತಿಳಿಸಿದರು.  ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಮಂಜುನಾಥ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿ, ಮಹಿಳೆಯರು ಮಾನಸಿಕವಾಗಿ, ಬೌದ್ಧಿಕವಾಗಿ ಇನ್ನು ಹೆಚ್ಚು ವಿಕಾಸ ಹೊಂದಲು ಇಂಥ ತರಬೇತಿ ಕಾರ್ಯಾಗಾರಗಳು ಉಪಯುಕ್ತವಾಗಿವೆ. ಹೆಚ್ಚು ಕಲಿಕೆಗೆ ವಯಸ್ಸಿನ ನಿರ್ಬಂಧವಿಲ್ಲ, ಅವಶ್ಯಕತೆ ಇದ್ದಾಗ ತರಬೇತಿ ಪಡೆಯಲು ಮುಂದಾದರೆ ಅನುಕೂಲ ಕಲ್ಪಿಸಲಾಗುವುದು, ಸ್ವಉದ್ಯೋಗದಲ್ಲಿ ಪ್ರಗತಿಹೊಂದಿ ಶೈಕ್ಷಣಿಕವಾಗಿ, ಅರ್ಥಿಕವಾಗಿ ಎಲ್ಲ ರಂಗಗಳಲ್ಲಿ ಬಲಿಷ್ಠರಾಗಬೇಕು ಎಂದರು. ಇದೇ ಸಂದರ್ಭದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಅತಿಥಿಗಳಾಗಿ ಕೃಷಿ ಅಧಿಕಾರಿ ಎಸ್.ಎಂ. ಕೇರಿ, ಡಿ.ಎಂ. ಲಿಂಗದಳ್ಳಿ, ಎಂ.ಬಿ. ಮರಿಬಸಣ್ಣನವರ, ಸಂತೋಷ ದೊಡ್ಡತಮ್ಮಣ್ಣನವರ, ಹೂವಪ್ಪ, ಕುಸುಮಾ ಭೋಗಾವಿ, ತಿಪ್ಪೇಶ ಕನ್ನಮ್ಮನವರ, ಶಂಕ್ರಯ್ಯ ಸಂದಿಮನಿ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.