ಪ್ರಮುಖ ಸಮುದಾಯಗಳ ನಿರ್ಲಕ್ಷ್ಯಕ್ಕೆ ಮುಖಂಡರ ಆಕ್ರೋಶ
ಶಿಗ್ಗಾಂವಿ: ಪ್ರಮುಖವಾಗಿ ಧಾರವಾಡ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯಲ್ಲಿ ಎರಡೂ ಪ್ರಮುಖ ರಾಷ್ಟ್ರೀಯ ಪಕ್ಷಗಳು ಪ್ರಮುಖ ಸಮುದಾಯಗಳಾದ ಲಿಂಗಾಯತ ಹಾಗೂ ಕುರುಬ ಸಮಾಜದ ಅಭ್ಯರ್ಥಿಗಳಿಗೆ ಅವಕಾಶ ನೀಡುವಲ್ಲಿ ಹಿಂದೇಟು ಹಾಕುತ್ತಿರುವುದಕ್ಕೆ ಸಮುದಾಯ ಮುಖಂಡರು ಸಾಮೂಹಿಕ ಆಕ್ರೋಶ ವ್ಯಕ್ತಪಡಿಸಿದರು.
ನಗರ ಹೊರವಲಯದ ಎಪಿಎಂಸಿ ಮಾರ್ಕೆಟ್ನಲ್ಲಿ ಸಭೆ ಸೇರಿದ್ದ ಸ್ಥಳೀಯ ವಿವಿಧ ಸಾಮಾಜಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ವಿವಿಧ ಸಾಮಾಜಿಕ ಮುಖಂಡರು ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಚರ್ಚೆ ನಡೆಸಿದರು. ಧಾರವಾಡ ಮತಕ್ಷೇತ್ರ ಅತಿಹೆಚ್ಚು ವಿದ್ಯಾವಂತರು ಹಾಗೂ ಕಾರ್ಮಿಕ ಮತದಾರರನ್ನು ಹೊಂದಿದ್ದು, ಇದರಲ್ಲಿ ಶೇ. 65ರಷ್ಟು ಲಿಂಗಾಯತ, ಕುರುಬ ಮತದಾರರಿದ್ದು, ಈ ಎರಡೂ ಪಂಗಡಗಳ ಪೈಕಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರೊಂದಿಗೆ ಪಕ್ಷಗಳ ಸಂಘಟನೆ ಹಾಗೂ ಇನ್ನಿತರ ಕೆಲಸಗಳಲ್ಲಿ ಮಾತ್ರ ಈ ಪ್ರಮುಖ ಪಂಗಡಗಳಿಗೆ ಮಾತ್ರ ಆದ್ಯತೆ ಕೊಟ್ಟು ಅಧಿಕಾರ ಪಡೆಯುವ ಸ್ಪಷ್ಟ ಅವಕಾಶವಿದ್ದಾಗ್ಯೂ ಅವಕಾಶ ನೀಡದಿರುವುದು ಎರಡೂ ಸಮುದಾಯದ ನಿರ್ಲಕ್ಷ್ಯ ಗೋಚರಿಸುತ್ತಿರುವುದು ನಿಜಕ್ಕೂ ಆತಂಕ ಸೃಷ್ಟಿಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜಕೀಯ ಅಧಿಕಾರಕ್ಕಾಗಿ ಪಕ್ಷಗಳು ಜಾತಿ ಆಧಾರಿತ ಅವಕಾಶ ಕೊಡುವುದು ಸಾಮಾನ್ಯ ವಿಷಯ. ಆದರೆ, ಧಾರವಾಡ ಮತಕ್ಷೇತ್ರದ ವಿಷಯಕ್ಕೆ ಜಾತೀಯ ಲೆಕ್ಕಾಚಾರ ಅನ್ವಯಿಸದಿರಲು ಕಾರಣವೇನು? ಹಾಗೆಯೇ ಸ್ಥಳೀಯವಾಗಿ ಸಣ್ಣ-ಪುಟ್ಟ ರಾಜಕೀಯ ಅವಕಾಶಗಳು ಕೈತಪ್ಪಿದಾಗ ವೀರಾವೇಶದ ಹೋರಾಟ ಮಾಡುವ ಈ ಸಮುದಾಯಗಳ ಚುನಾಯಿತ ಜನಪ್ರತಿನಿಧಿಗಳು ಹಾಗೂ ಮುಖಂಡರು ಕಣ್ಣೆದುರೆ ಆಗುತ್ತಿರುವ ಅನ್ಯಾಯ ನೋಡಿ ಅಸಹಾಯಕತೆ ತೋರುತ್ತಿರುವುದು ಸಮುದಾಯದ ಸಂಘಟಕರಿಗೆ ಇವರ ಈ ವರ್ತನೆ ಬೇಸರ ತಂದಿದೆ. ಅವಕಾಶವಿದ್ದಾಗ ಸುಮ್ಮನಿದ್ದು, ಅವಕಾಶ ಕಳೆದುಕೊಂಡು ಮತ್ತೆ ಹುಡುಕುವ ಪ್ರವೃತ್ತಿಯಿಂದ ಹೊರಬರದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ಅಪಾಯ ಸ್ಪಷ್ಟವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮಂಜುನಾಥ ಮಣ್ಣೆಣ್ಣವರ್ ಆತಂಕ ವ್ಯಕ್ತಡಿಸಿದರು.
ಈ ಸಂದರ್ಭ ಕುರುಬ ಸಮಾಜದ ಮುಖಂಡ ಗದಿಗೆಪ್ಪ ಕೋಡ್ಲಿವಾಡ, ಜೋಗಯ್ಯ ಹಿರೇಮಠ, ಪಂಚಮಸಾಲಿ ಮುಖಂಡ ಲಿಂಬನಗೌಡ್ರ, ಬಿ.ಎಸ್. ಮೇಲಿನಮನಿ, ಯುವ ಮುಖಂಡ ಗಣೇಶ ಸೀಗಿಹಳ್ಳಿ, ಫಕ್ಕಿರೇಶ ಓಣಿಮನಿ, ಮಂಜುನಾಥ ಕುರ್ಷಾಪುರ, ರೇಣುಕನಗೌಡ ಪಾಟೀಲ ಹಾಗೂ ಹಲವಾರು ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

