ಹಾವೇರಿ

ಪ್ರಾಮಾಣಿಕ ಅಭ್ಯರ್ಥಿ ಗೆಲ್ಲಿಸೋಣ

Published On :

ಶಿಗ್ಗಾಂವಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಶ್ರಮಪಡುವಂತೆ ಪಕ್ಷದ ಕಾರ್ಯಕರ್ತರಿಗೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ವೆಂಕೋಜಿ ಕರೆ ನೀಡಿದರು.
ಪಟ್ಟಣದ ಸವಣೂರು ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ವೆಂಕೋಜಿ, ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಶ್ರೇಯಸ್ಸಿಗಾಗಿ ದುಡಿಯೋಣ. ಹೈಕಮಾಂಡ್ ನಿರ್ಣಯಕ್ಕೆ ಯಾವುದೇ ತಕರಾರು ಮಾಡದೆ ಕಾಂಗ್ರೆಸ್ ಜಯದ ಪತಾಕೆ ಹಾರಿಸೋಣ. ಇದಕ್ಕೆ ನಿಮ್ಮೆಲ್ಲರ ಸಹನೆ, ಸಹಕಾರ ಅವಶ್ಯವಾಗಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಹನುಮರೆಡ್ಡಿ ನಡುವಿನಮನಿ ಮಾತನಾಡಿ, ಇಂದು ಹಾಗೂ ನಾಳೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಶುಕ್ರವಾರ ಬಿಡುಗಡೆಯಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಯಾರಿಗೆ ದೊರೆಯಲಿ ಹೆಚ್ಚಿನ ಶ್ರಮವಹಿಸಿ ಮನೆ ಮನೆಗೆ ಹೋಗಿ ಗೆಲ್ಲಿಸುವ ಪ್ರಯತ್ನ ಮಾಡೋಣ. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆಯಾದ ಮೇಲೆ ಎಲ್ಲರೂ ಮತ್ತೊಮ್ಮೆ ಸೇರಿ ಸಂಘಟನೆಯ ರೂಪರೇಷಗಳನ್ನು ಚರ್ಚಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲವಿಗಾಗಿ ನಾವೆಲ್ಲ ನಿಷ್ಠೆಯಿಂದ ದುಡಿಯೋಣ ಎಂದರು.
ಸಭೆಯಲ್ಲಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ದ್ಯಾಪನಗೌಡ್ರ, ಎಫ್.ಸಿ. ಪಾಟೀಲ, ಎಸ್.ಎಫ್. ಮಣಕಟ್ಟಿ, ಗುಡ್ಡಪ್ಪ ಜಲದಿ, ಪ್ರದೀಪ ಗಿರೆಡ್ಡಿ, ಶಿವಾಜಿರಾವ್ ಶಿಂದೆ, ಸಂಜನಾ ರಾಯ್ಕರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶೇಖಣ್ಣ ಗಣಾಚಾರಿ, ಮಲ್ಲಿಕಾರ್ಜುನಗೌಡ್ರ ಪಾಟೀಲ, ಪಾಲಾಕ್ಷಪ್ಪ ಹಾವಣಗಿ, ಚಂದ್ರಣ್ಣ ನಡುವಿನಮನಿ, ನ್ಯಾಯವಾದಿಗಳಾದ ಲಕ್ಕಣ್ಣವರ, ಜಾರ, ಪರೂಕಿ ಹಾಗೂ ಪುರಸಭೆ ಸದಸ್ಯರಾದ ಮಹಬೂಬಸಾಬ ಮಕಾನದಾರ, ಶಬ್ಬೀರ ದೊಡ್ಡಮನಿ, ಮಹ್ಮದಹನೀಪ್ ದುಖಾನದಾರ, ಮುಸ್ತಾಕ್ ಮುಲ್ಲಾ ಅನೇಕ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
--
ಹೋಳಿ ಹುಣ್ಣಿಮೆ: ವಿವಿಧ ಸ್ಪರ್ಧೆ
ಹಾವೇರಿ: ತಾಲೂಕಿನ ಹೊಸರಿತ್ತಿ ಗುದ್ದಲೀಶ್ವರ ಸ್ವಾಮಿ ಮಠದ ಎದುರು ಮಾ. 16ರಂದು ಹೋಳಿ ಹುಣ್ಣಿಮೆ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ನವ ಯುವ ಶಕ್ತಿ ಸೇನೆಯವರಿಂದ ಪ್ರಥಮ ಬಾರಿಗೆ ಹೋಳಿ ಹುಣ್ಣಿಮೆ ನಿಮಿತ್ತ ಗಡಿಗೆ ಒಡೆಯುವ ಮತ್ತು ಹಲಿಗೆ ಬಾರಿಸುವ ಸ್ಪರ್ಧೆ ಏರ್ಪಡಿಸಲಾಗಿದೆ.
ಮಾ. 16ರ ಬೆಳಗ್ಗೆ 11 ಗಂಟೆಗೆ ಹೊಸರಿತ್ತಿ ಗುದ್ದಲೀಶಿವಯೋಗಿಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಗಡಿಗೆ ಒಡೆಯುವ ಒಂದು ತಂಡದಲ್ಲಿ 11 ಜನರಿಗೆ ಮಾತ್ರ ಅವಕಾಶವಿದ್ದು, ಹಲಿಗೆ ಬಾರಿಸುವ ಒಂದು ತಂಡದಲ್ಲಿ ಕಡ್ಡಾಯವಾಗಿ 5 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಒಂದು ತಂಡದಲ್ಲಿ ಆಡಿದವರಿಗೆ ಇನ್ನೊಂದು ತಂಡದಲ್ಲಿ ಆಡಲು ಅವಕಾಶವಿಲ್ಲ. ಒಮ್ಮೆ ಪ್ರವೇಶ ಪಡೆದು ಗಡಿಗೆ ಒಡೆಯುವ ತಂಡದವರಿಗೆ 3 ಬಾರಿ ಆಡಲು ಮಾತ್ರ ಅವಕಾಶ. ಮತ್ತೆ  ಆಡಲು ಬಯಸಿದಲ್ಲಿ ಮತ್ತೆ ಪ್ರವೇಶ ಶುಲ್ಕ ನೀಡಬೇಕು. ಹಲಿಗೆ ಬಾರಿಸುವ ತಂಡಕ್ಕೆ 10 ನಿಮಿಷ ಕಾಲಾವಧಿ ನೀಡಲಾಗುವುದು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.