ರಂಗಭೂಮಿ ಕಲೆ ಅವನತಿಯತ್ತ: ವಿಷಾದ
ಹಾನಗಲ್ಲ: ರಂಗಭೂಮಿ ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಪರಿಣಾಮಕಾರಿ ಮಾಧ್ಯಮವಾಗಿದೆ. ಜೀವಂತಿಕೆಯನ್ನು ಹೊಂದಿರುವ ಈ ಮಾಧ್ಯಮ ಆಧುನಿಕತೆಯ ಅಬ್ಬರಕ್ಕೆ ಸಿಲುಕಿ ಅವನತಿಯ ಹಾದಿಯಲ್ಲಿರುವುದು ನೋವಿನ ಸಂಗತಿ ಎಂದು ಪಿಎಸ್ಐ ಮಹದೇವ ಯಲಿಗಾರ ಹೇಳಿದರು.
ತಾಲೂಕಿನ ಡೊಳ್ಳೇಶ್ವರ ಗ್ರಾಮದಲ್ಲಿ ಇತ್ತೀಚೆಗೆ ಅಕ್ಕತಂಗಿ ಗ್ರಾಮದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ಸಾಯಿಬಾಬಾ ನಾಟ್ಯ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪ್ರಚಂಡ ಪರಶುರಾಮ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಕ್ರೌರ್ಯ, ಹಿಂಸೆ ಮಾರ್ಧನಿಸುತ್ತಿದೆ. ಮಾನವೀಯ ಸಂಬಂಧಗಳು ಪರಸ್ಪರ ಬೆಲೆ ಕಳೆದುಕೊಳ್ಳುತ್ತಿವೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದಂತಹ ಸ್ಥಿತಿ ತಲೆದೋರಿದೆ.
ಇಂತಹ ಸಂದಿಗ್ಧ ಸಂದರ್ಭದಲ್ಲಿ ರಂಗಭೂಮಿ ಚಟುವಟಿಕೆ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸುವ ಕಾರ್ಯ ನಡೆಯಬೇಕಿದೆ. ಆಧುನಿಕತೆಯ ಅಬ್ಬರದ ಮಧ್ಯೆಯೂ ರಂಗಭೂಮಿಯನ್ನು ಕಳೆದು ಹೋಗಲು ಬಿಡದೇ ಸಂರಕ್ಷಿಸುವಲ್ಲಿ ಯುವ ಸಮೂಹ ಗಮನ ಹರಿಸಬೇಕಿದೆ. ಸೂಕ್ತ ಪ್ರೋತ್ಸಾಹದ ಕೊರತೆಯಿಂದ ಗ್ರಾಮೀಣ ಪ್ರದೇಶದ ರಂಗಭೂಮಿ ಕಲಾವಿದರು ಸಂಕಷ್ಟದ ಸ್ಥಿತಿಯಲ್ಲಿದ್ದು, ಅಂಥ ಕಲಾವಿದರ ನೆರವಿಗೆ ಸ್ಪಂದಿಸುವಂತೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಗ್ರಾಮ ಸುಧಾರಣಾ ಸಮಿತಿಯ ಸದಸ್ಯ ಮುದಿಯಪ್ಪ ಬಾಳೂರ, ಮಲ್ಲಪ್ಪ ಕುರುಬರ, ಬಸವರಾಜ ಕೊಪ್ಪದ, ವೀರನಗೌಡ ಪಾಟೀಲ, ಮೂಕಣ್ಣ ಗುರುಲಿಂಗಮ್ಮನವರ, ರವಿಕುಮಾರ ಆರೇರ, ಬಾಬಣ್ಣ ಸುಭಾನಜಿ, ಚನ್ನಪ್ಪ ಬಡಿಗೇರ, ಫಕ್ಕೀರಪ್ಪ ಭಜಂತ್ರಿ, ರಾಮೂ ಕುರಿಯರ, ವೀರಬಸಪ್ಪ ಯಳ್ಳೂರ, ವಿರೂಪಾಕ್ಷಪ್ಪ ಹಕ್ಕಲವರ, ಬಸವರಾಜ ಬಳ್ಳಾರಿ, ಅನಿಲ ಕುಂಟನಹೊಸಳ್ಳಿ, ಕರೇಗೌಡ ಪಾಟೀಲ, ಚಂದ್ರಕಾಂತ ಕುಂಟನಹೊಸಳ್ಳಿ, ಬಾಬಣ್ಣ ಮಲಗುಂದ, ಶಿವಾಜಿ ಆರೇರ, ಕೆ.ಎಂ. ಬಾಳೂರ, ಮಲ್ಲಪ್ಪ ಕುರುಬರ, ಜಗದೀಶ ಹರಿಜನ, ಕೆ.ಪಿ. ಪಾಟೀಲ, ಅನಿಲ ಕುಂಟನ ಹೊಸಳ್ಳಿ ಸೇರಿದಂತೆ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

