ಸುದ್ದಿ ಸಂಕ್ಷೇಪ
ದೇಣಿಗೆ: ಕ್ರಮಕ್ಕೆ ಆದೇಶ
ನವದೆಹಲಿ: ವಿದೇಶಿ ಮೂಲದ ಕಂಪನಿಯಿಂದ ದೇಣಿಗೆ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಆರು ತಿಂಗಳೊಳಗೆ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. ಬ್ರಿಟನ್ ಮೂಲದ ವೇದಾಂತ ರಿಸೋರ್ಸಸ್ನ ಸಹಸಂಸ್ಥೆಗಳಿಂದ ಹಣ ಪಡೆಯುವ ಮೂಲಕ ಈ ಎರಡೂ ಪಕ್ಷಗಳು ಕಾನೂನು ಉಲ್ಲಂಘಿಸಿವೆ ಎಂದು ನ್ಯಾ. ಪ್ರದೀಪ್ ನಂದರಾಜೋಗ್ ಮತ್ತು ಜಯಂತ್ ನಾಥ್ ಅವರ ಪೀಠ ಹೇಳಿದೆ.
ಹೊರಟ್ಟಿಗೆ ಅಭಿನಂದನೆ
ಹಾವೇರಿ: ಜಿಲ್ಲೆಯ ಅನುದಾನಿತ ಯೋಜನೆಯಡಿ ಬರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ವೇತನ ನಾಲ್ಕು ತಿಂಗಳಿಂದ ಆಗಿರಲಿಲ್ಲ. ಈ ಹಿನ್ನಲೆಯಲ್ಲಿ ಈ ಅನುದಾನವನ್ನು ಬಿಡುಗಡೆ ಮಾಡಿಸಲು ಶ್ರಮಿಸಿದ ಬಸವರಾಜ ಹೊರಟ್ಟಿಯವರಿಗೆ ಹಾಗೂ ಸರ್ಕಾರಕ್ಕೆ ತಾಲೂಕು ಘಟಕದ ಅಧ್ಯಕ್ಷ ಎಸ್.ಎಲ್. ಕಾಡದೇವರಮಠ ಹಾಗೂ ಕಾರ್ಯದರ್ಶಿ ಎಸ್.ಎಸ್. ಇಟಗಿ, ಸರ್ವ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿದ್ದಾರೆ.
ಏ. 7ರಂದು ಡೊಳ್ಳು ಕುಣಿತ ಸ್ಪರ್ಧೆ
ಹಾನಗಲ್ಲ: ಕನಕ ಗುರುಪೀಠ ಕಾಗಿನೆಲೆಯಲ್ಲಿ ಏ. 7ರಂದು ಜಿಲ್ಲಾ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯನ್ನು ಹಾನಗಲ್ಲ ತಾಲೂಕಿನ ಚಿಕ್ಕಹುಲ್ಲಾಳ ಗ್ರಾಮದ ಕನಕದಾಸ ಡೊಳ್ಳು ಕುಣಿತ ತಂಡದಿಂದ ಆಯೋಜಿಸಲಾಗಿದೆ. ಕಾಗಿನೆಲೆಯಲ್ಲಿ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಏರ್ಪಡಿಸಿರುವ ಈ ಡೊಳ್ಳು ಕುಣಿತ ಸ್ಪರ್ಧೆಗೆ ಪ್ರಥಮ ಬಹುಮಾನ ರು. 10 ಸಾವಿರ, ದ್ವಿತೀಯ ರು. 5 ಸಾವಿರ, ತೃತೀಯ ರು. 2 ಸಾವಿರ. ಸ್ಪರ್ಧೆಯ ನಿಯಮಗಳು, ಹೆಸರು ನೋಂದಾಯಿಸುವುದು ಸೇರಿದಂತೆ ಹೆಚ್ಚಿನ ಮಾಹಿತಿಗೆ ದಾನಪ್ಪ ಗಂಟೇರ (9449967122), ಯಲ್ಲಪ್ಪ ದೊಡ್ಡಚಿಕ್ಕಣ್ಣನವರ (9008553764) ಸಂಪರ್ಕಿಸುವಂತೆ ಸ್ಪರ್ಧೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.
ಪರೀಕ್ಷೆ: 19446 ವಿದ್ಯಾರ್ಥಿಗಳು ಹಾಜರ್
ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಂಡಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪ್ರಥಮ ಭಾಷೆಯ ಪರೀಕ್ಷೆ ಸುಸೂತ್ರವಾಗಿ ಜರುಗಿತು. ಕನ್ನಡ, ಇಂಗ್ಲಿಷ್ ಹಾಗೂ ಉರ್ದು ವಿಷಯದ ಪರೀಕ್ಷೆಗಳು ಶುಕ್ರವಾರ ನಡೆದವು. ಪ್ರಥಮ ಭಾಷೆಯ ಪರೀಕ್ಷೆಗೆ ಒಟ್ಟು 19963 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 19446 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 517 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಜಿಲ್ಲೆಯಲ್ಲಿ ಯಾವುದೇ ಪರೀಕ್ಷೆ ಅಕ್ರಮಗಳು ನಡೆದಿಲ್ಲ ಎಂದು ಡಿಡಿಪಿಐ ಎಸ್.ಬಿ. ಕೊಡ್ಲಿ ತಿಳಿಸಿದ್ದಾರೆ. ರಲ್ಲಿ ತಲ್ಲೀನರಾಗಿರುವ ವಿದ್ಯಾರ್ಥಿಗಳು.
92 ವಿದ್ಯಾರ್ಥಿಗಳು ಗೈರು
ರಾಣಿಬೆನ್ನೂರು: ನಗರದ 5 ಕೇಂದ್ರಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶದ 11 ಕೇಂದ್ರಗಳಲ್ಲಿ ಶುಕ್ರವಾರದಿಂದ ಪ್ರಾರಂಭಗೊಂಡಿರುವ 2013-14ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಅನುಮತಿಪಡೆದಿದ್ದ 4461 ವಿದ್ಯಾರ್ಥಿಗಳಲ್ಲಿ ಪ್ರಥಮ ಭಾಷೆಗಳಾದ ಕನ್ನಡ 3557, ಇಂಗ್ಲಿಷ್ 481, ಉರ್ದು 289, ಸಂಸ್ಕೃತ 42 ಸೇರಿದಂತೆ ಒಟ್ಟು 4369 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 92 ವಿದ್ಯಾರ್ಥಿಗಳು ಗೈರು ಉಳಿದಿದ್ದರೆಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಲಕ್ಷ್ಮಣ ತಿಳಿಸಿದರು.
ತಾಲೂಕಿನ ಒಟ್ಟು 16 ಪರೀಕ್ಷಾ ಕೇಂದ್ರಗಳ ಸುತ್ತಲು 200 ಮೀ ಅಂತರದಲ್ಲಿರುವ ಝೆರಾಕ್ಸ್ ಅಂಗಡಿಗಳನ್ನು ಪರೀಕ್ಷೆ ನಡೆಯುವ ಸಮಯದಲ್ಲಿ ಮುಚ್ಚಲು ಡಿಸಿ ಹಾಗೂ ಜಿಲ್ಲಾ ಎಸ್ಪಿ ತಿಳಿಸಿದ್ದರಿಂದ ಶಾಲೆಯ ಸುತ್ತಮುತ್ತ ಬಂದೋ ಬಸ್ತ್ನೊಂದಿಗೆ ಪರೀಕ್ಷೆ ನಡೆಸಲಾಯಿತೆಂದು ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಪರೀಕ್ಷಾ ಕೆಂದ್ರದ ಮುಖ್ಯ ಅಧಿಕ್ಷಕ ಎನ್.ಬಿ. ಮುಲ್ಕಿಗೌಡ್ರ ತಿಳಿಸಿದರು.
ಭೋಜರಾಜ ಕರೂದಿಗೆ ಪಿತೃ ವಿಯೋಗ
ಹಾವೇರಿ: ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ ಅವರ ತಂದೆ ಬಸವಣ್ಣೆಪ್ಪ ಕರೂದಿ (84) ಶುಕ್ರವಾರ ಸಂಜೆ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ, ಪತ್ನಿ ಅಪಾರ ಬಂಧು, ಬಳಗ ಇದ್ದರು. ಮೃತರ ಅಂತ್ಯಕ್ರಿಯೆ ಶನಿವಾರ ಹಾನಗಲ್ನಲ್ಲಿ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

