ಗ್ರಾಮೀಣ ಅಂಚೆ ವಿಮೆ ಹೊಂದಲು ಕರೆ
ಹಾವೇರಿ: ಜೀವನದ ಭದ್ರತೆಗಾಗಿ ಹಾಗೂ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಒಂದೊಂದು ಗ್ರಾಮೀಣ ಅಂಚೆ ಜೀವ ವಿಮೆಯನ್ನು ಹೊಂದಬೇಕು ಎಂದು ಉತ್ತರ ಕರ್ನಾಟಕ ಅಂಚೆ ವಲಯದ ಅಂಚೆ ಸೇವೆಗಳ ನಿರ್ದೇಶಕ ಎಂ. ಮಾರಿಯಪ್ಪನ್ ತಿಳಿಸಿದರು.
ಇತ್ತೀಚೆಗೆ ಹಾನಗಲ್ಲ ತಾಲೂಕು ಮಾಸನಕಟ್ಟಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಗ್ರಾಮೀಣ ಅಂಚೆ ಜೀವ ವಿಮಾ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಅಂಚೆ ಪಾಲಕರು ಪ್ರತಿಯೊಂದು ಮನೆ ಮನೆಗೂ ತೆರಳಿ ಗ್ರಾಮೀಣ ಅಂಚೆ ಜೀವ ವಿಮೆಯ ಲಾಭಗಳನ್ನು ತಿಳಿಹೇಳುವುದರ ಮೂಲಕ ಗ್ರಾಮೀಣ ಭಾಗದಲ್ಲಿ ವಾಸಿಸುವ ಪ್ರತಿಯೊಬ್ಬರನ್ನೂ ಗ್ರಾಮೀಣ ಜೀವ ವಿಮೆಯ ವ್ಯಾಪ್ತಿಯಲ್ಲಿ ತರಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾವೇರಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಆರ್.ಜಿ. ಬ್ಯಾಟಪ್ಪನವರ ಮಾತನಾಡಿ, ಗ್ರಾಮೀಣ ಜನರಿಗಾಗಿಯೇ ಅಂಚೆ ಇಲಾಖೆಯಿಂದ ಪರಿಚಯಿಸಲ್ಪಟ್ಟ ಗ್ರಾಮೀಣ ಅಂಚೆ ಜೀವ ವಿಮೆಯ ಮಹತ್ವ ಇಂದು ತುಂಬಾ ಇದ್ದು, ಅತ್ಯಂತ ಕಡಿಮೆ ಪ್ರೀಮಿಯಂ ಹಣವನ್ನು ಸಂಗ್ರಹಿಸಿ ಅತಿ ಹೆಚ್ಚು ಬೋನಸ್ ಹಣವನ್ನು ತನ್ನ ಗ್ರಾಹಕರಿಗೆ ನೀಡುವ ಇದರ ಲಾಭವನ್ನು ಗ್ರಾಮೀಣ ಭಾಗದಲ್ಲಿ ವಾಸಿಸುವ 18ರಿಂದ 55 ವರ್ಷ ವಯಸ್ಸಿನ ಎಲ್ಲ ಜನರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಸುಮಾರು ಒಂದು ಲಕ್ಷ ಪ್ರೀಮಿಯಂನ್ನು ಇಲಾಖೆಗೆ ಗಳಿಸಿಕೊಟ್ಟ ಮಾಸನಕಟ್ಟಿ ಶಾಖಾ ಅಂಚೆ ಕಚೇರಿಯ ಶಾಖಾ ಅಂಚೆ ಪಾಲಕ ರಾಮಚಂದ್ರ ಅರ್ಕಸಾಲಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಾವೇರಿ ಅಂಚೆ ವಿಭಾಗದ ಉಪ ಅಂಚೆ ಅಧೀಕ್ಷಕ ಎಂ.ವಿ. ಬಸಾಪುರ, ಸಹಾಯಕ ಅಂಚೆ ಅಧೀಕ್ಷಕ ದೀಪಾ ಕೆ.ಸಿ., ಶಿಗ್ಗಾಂವಿ ಉಪ ವಿಭಾಗದ ಅಂಚೆ ನಿರೀಕ್ಷಕ ಎನ್.ಜಿ.ಬಂಗಿಗೌಡ್ರ, ಹಾವೇರಿ ವಿಭಾಗೀಯ ಕಚೇರಿಯ ದೂರು ನಿರೀಕ್ಷಕ ಜಾಫರಸಾಬ ಮ್ಯಾಗೇರಿ, ರಾಣಿಬೆನ್ನೂರು ಉಪ ಅಂಚೆ ವಿಭಾಗದ ನಿರೀಕ್ಷಕ ಜೆ.ಡಿ. ನಿಂಗೋಜಿ, ಹಾನಗಲ್ಲ ಉಪ ಅಂಚೆ ಕಚೇರಿಯ ಅಂಚೆ ಪಾಲಕ ಜಯರಾಮ ನಾಯ್ಕ ಇತರರು ಇದ್ದರು. ಪ್ರೇಮಾ ಎಂ. ವಾಲಿ ಪ್ರಾರ್ಥಿಸಿದರು. ಎಂ.ಎ. ಬಂಕಾಪುರ ಸ್ವಾಗತಿಸಿದರು. ಎಸ್.ಎಸ್. ಗಾಜಿಪುರ ವಂದಿಸಿದರು. ಯಲ್ಲಪ್ಪ ಗೋಣೆಣ್ಣನವರ ಕಾರ್ಯಕ್ರಮವನ್ನು ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

