ಚುನಾವಣೆ ಕರ್ತವ್ಯ: ಮಾಜಿ ಸೈನಿಕರಿಗೆ ಆಹ್ವಾನ
ರಾಯಚೂರು: ವಿಧಾನಸಭೆಗೆ ನಡೆಯುವ ಚುನಾವಣೆ ಪ್ರಕ್ರಿಯೆಯಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತ ರಾಯಚೂರು, ಗುಲ್ಬರ್ಗ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯ ಮಾಜಿ ಸೈನಿಕರು ತಮ್ಮ ಹೆಸರು ಹಾಗೂ ವಿವರಗಳನ್ನು ಒದಗಿಸಲು ಕೋರಲಾಗಿದೆ. ಗುಲ್ಬರ್ಗಾದ ಸೈನಿಕ ಕಲ್ಯಾಣ ಮತ್ತು ಪುನಾವಸತಿ ಇಲಾಖೆ ಉಪನಿರ್ದೇಶಕರು ಈ ಕುರಿತು ಪ್ರಕಟಣೆ ನೀಡಿದ್ದು, ಆಸಕ್ತರು ಏ.3ರಿಂದ 15ರವರೆಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08472- 225003 ಇಲ್ಲಿಗೆ ಸಂಪರ್ಕಿಸಲು ತಿಳಿಸಿದ್ದಾರೆ.
ಆರೂಢಶ್ರೀ ರತ್ನ ಪ್ರಶಸ್ತಿ ಪ್ರದಾನ
ಗುರುಮಠಕಲ್: ಯಾದಗಿರಿ ತಾಲೂಕಿನ ಸುಕ್ಷೇತ್ರ ಅರಕೇರಾ(ಕೆ) ಗ್ರಾಮದ ಸಿದ್ಧಾರೂಡಸ್ವಾಮಿ ಬ್ರಹ್ಮ ವಿದ್ಯಾಶ್ರಮ ಇವರು ಕೊಡ ಮಾಡುವ ಆರೂಢಶ್ರೀ ರತ್ನ ಪ್ರಶಸ್ತಿಗೆ ಶಾಸಕ ಡಾ. ಮಾಲಕರೆಡ್ಡಿ ಭಾಜನರಾಗಿದ್ದಾರೆ. ಇವರ ರಾಜಕೀಯ ಸೇವೆಯನ್ನು ಪರಿಗಣಿಸಿ ನೀಡಿದ ಈ ಪ್ರಶಸ್ತಿಯನ್ನು ಡಾ. ಮಾಲಕರೆಡ್ಡಿಯವರ ಅನುಪಸ್ಥಿತಿಯಲ್ಲಿ ಅವರ ಧರ್ಮಪತ್ನಿ ಡಾ. ಮಹಾದೇವಮ್ಮ ಮಾಲಕರೆಡ್ಡಿ ಸ್ವೀಕರಿಸಿದರು. ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿದ್ದಬಸವ ಚನ್ನವೀರ ಸ್ವಾಮೀಜಿ ಇಲಕಲ್ ವಹಿಸಿದ್ದರು. ಸಿದ್ದಾರೂಢಾಶ್ರಮದ ಸಿದ್ದಲಿಂಗ ಸ್ವಾಮೀಜಿ ಅರಕೇರಾ, ಗುರುಮಠಕಲ್ ಖಾಸಮಠದ ಶಾಂತವೀರ ಸ್ವಾಮೀಜಿ, ಆಚಾರ್ಯ ಜಗದೀಶ್ವರ ಸ್ವಾಮೀಜಿ ಕಾಶಿ, ಸಿದ್ದಾನಂದ ಸ್ವಾಮೀಜಿ ಹುಮನಾಬಾದ, ಸದಾನಂದ ಸ್ವಾಮೀಜಿ ಋಷಿಕೇಶ, ಶಿವಾನಂದ ಸ್ವಾಮೀಜಿ ಬೈಲಹೊಂಗಲ, ಡಾ. ಸಿದ್ದಲಿಂಗರೆಡ್ಡಿ ಪಾಟೀಲ ಕಂದಕೂರ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

