ರಾಯಚೂರು

6ರಂದು ಮಾನವಿಗೆ ಬಿಎಸ್‌ವೈ: ಮಲ್ಕಾಪುರ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.3
ರಾಯಚೂರು ಜಿಲ್ಲೆಯಾದ್ಯಂತ ಎಲ್ಲ ಕ್ಷೇತ್ರಗಳಲ್ಲಿ ತಾವು ಸಂಚರಿಸಿದ್ದು ಪ್ರತಿಯೊಂದು ಕ್ಷೇತ್ರದಲ್ಲಿ ಯುವಕರು ಉತ್ಸಾಹದಿಂದ ಕೆಜೆಪಿಗೆ ಒಲವು ತೋರಿಸುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಅಭೂತಪೂರ್ವ ಜಯ ಲಭಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ವೆಂಕನಗೌಡ ಮಲ್ಕಾಪೂರ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಸಿಂಧನೂರು ಕ್ಷೇತ್ರಕ್ಕೆ ರಾಜಶೇಖರ ಪಾಟೀಲ್, ಮಸ್ಕಿ ಕ್ಷೇತ್ರಕ್ಕೆ ಮಹಾದೇವಪ್ಪಗೌಡ, ಮಾನ್ವಿ ಗಂಗಾಧರ ನಾಯಕ, ಲಿಂಗಸಗೂರಿಗೆ ಎಚ್.ಬಿ.ಮುರಾರಿ ಅವರ ಹೆಸರುಗಳು ಘೋಷಣೆಯಾಗಿವೆ.
ಏ.6 ರಂದು ಜಿಲ್ಲೆಗೆ ಆಗಮಿಸಲಿರುವ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಯಚೂರು ಗ್ರಾಮೀಣ ಮತ್ತು ದೇವದುರ್ಗ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಿದ್ದಾರೆ. ಅದೇ ದಿನ ಮಸ್ಕಿ, ಮಾನ್ವಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಪಟ್ಟಣಗಳಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ವಿವರಿಸಿದರು.
ಹಂಪನಗೌಡ ಗೆಲ್ಲುವುದಿಲ್ಲ: ಸಿಂಧನೂರು ಇತಿಹಾಸದಲ್ಲಿ ಹಲವಾರು ಬಾರಿ ನಗರಸಭೆ, ತಾಲೂಕು, ಜಿಲ್ಲಾ ಮತ್ತು ಗ್ರಾಪಂಗಳಲ್ಲಿ ಅಧಿಕಾರ ಹಿಡಿದ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷ ಸೋತ ಉದಾಹರಣೆಗಳಿವೆ. ಈ ಬಾರಿಯೂ ಅದೇ ಪುನರಾವರ್ತನೆಯಾಗಲಿದೆ. ಕೆಜೆಪಿ ಅಭ್ಯರ್ಥಿ ವಿಧಾನಸಭೆ ಪ್ರವೇಶಿಸುವುದರಲ್ಲಿ ಅನುಮಾನವಿಲ್ಲ ಎಂದು ಕೆಜೆಪಿ ನಿಯೋಜಿತ ಅಭ್ಯರ್ಥಿ ರಾಜಶೇಖರ ಪಾಟೀಲ್  ಭವಿಷ್ಯ ನುಡಿದರು.
ಎಸ್.ಟಿ. ಘಟಕದ ತಾಲೂಕಾಧ್ಯಕ್ಷ ಕುಪೇಂದ್ರನಾಯಕ, ನಗರಸಭಾ ಸದಸ್ಯ ಲಿಂಗರಾಜ ಹೂಗಾರ, ಮುಖಂಡರಾದ ಅನ್ವರ್ಮಿಯ್ಯಾ, ಜಾವೇದ್, ಅಹ್ಮದ್ ಪಟೇಲ್, ಸೈಲಾನಿ ಪಾಷಾ ನಜೀರ್ ಅಹ್ಮದ್, ಸೈ. ಬಾಬಾ, ಲತೀಫ್, ಗಾಲಿಬ್, ಚನ್ನನಗೌಡ ಪಾಟೀಲ್, ಎಚ್.ವೈ. ಸೂಲಂಗಿ, ರವಿ ತಡಕಲ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.