ರಾಯಚೂರು

ಕಸಾಪ ಐದು ಘಟಕಗಳು ಅಸ್ತಿತ್ವಕ್ಕೆ: ಮಹಾಂತೇಶ್

Published On :

ರಾಯಚೂರು: ತಾಲೂಕಿನಿಂದ ದೂರವಿರುವ ಮತ್ತು ಹೆಚ್ಚು ಜನಸಂಖ್ಯೆ ಅಥವಾ ಆಜೀವ ಸದಸ್ಯರ ಸಂಖ್ಯೆ ಹೊಂದಿರುವ ಜಿಲ್ಲೆಯ ಐದು ಗ್ರಾಮಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಘಟಕಗಳನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಕಸಾಪ ತಿಳಿಸಿದೆ.
ಈ ಕುರಿತು ಕಸಾಪ ಅಧ್ಯಕ್ಷ ಮಹಾಂತೇಶ್ ಮಸ್ಕಿ ಪ್ರಕಟಣೆ ನೀಡಿ, ಜಿಲ್ಲೆಯ ಶಕ್ತಿನಗರ, ಸಿರವಾರ, ಕವಿತಾಳ, ಪೋತ್ನಾಳ ಮತ್ತು ಮಸ್ಕಿ ಘಟಕಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಶಕ್ತಿನಗರ ಘಟಕಕ್ಕೆ ಭೀಮಯ್ಯ ನಾಯಕ, ಸಿರವಾರ ಘಟಕಕ್ಕೆ ಅಮರೇಶ ನಂದರೆಡ್ಡಿ, ಕವಿತಾಳಕ್ಕೆ ಕೆ. ಶಂಕ್ರಯ್ಯ, ಪೋತ್ನಾಳ ಘಟಕಕ್ಕೆ ಶಿವಪ್ಪ ಭೂಸಾರೆ ಹಾಗೂ ಮಸ್ಕಿ ಘಟಕಕ್ಕೆ ಗುಂಡೂರಾವ್ ದೇಸಾಯಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆಂದು ತಿಳಿಸಿದ್ದಾರೆ.
ಪುಸ್ತಕ ಪ್ರಕಟಣೆ: ಕಸಾಪ ಸಂಸ್ಥಾಪನಾ ದಿನಾಚರಣೆ ಸಂದರ್ಭ ಮೇ.5ರಂದು ಪುಸ್ತಕ ಪ್ರಕಟಣೆ ಕೈಗೊಳ್ಳಲು ಜಿಲ್ಲಾ ಕಸಾಪ ನಿರ್ಧರಿಸಿದೆ ಎಂದು ತಿಳಿಸಿರುವ ಅವರು, ಈವರೆಗೆ ಯಾವುದೇ ಪುಸ್ತಕ ಹೊರತರದ ಬರಹಗಾರರು ತಮ್ಮ ಕರಡು ಪ್ರತಿಯನ್ನು(ಡಿಟಿಪಿ ರೂಪದಲ್ಲಿ) ಎಸ್. ದೇವೇಂದ್ರಗೌಡ ಗೌರವ ಕಾರ್ಯದರ್ಶಿಗಳು, ಜಿಲ್ಲಾ ಕಸಾಪ, ಅಂಚೆ- ಸಿಂಧನೂರು ಇವರಿಗೆ ಏ.20ರೊಳಗೆ ಸಲ್ಲಿಸಲು ಅವರು ಕೋರಿದ್ದಾರೆ.
ಕಥೆ, ಕವನ, ಲಲಿತ ಪ್ರಬಂಧ ಮತ್ತು ಸಂಶೋಧನಾತ್ಮಕ ಬರಹಗಳನ್ನು ಕಳಿಸಬಹುದಾಗಿದೆ. ಆಯ್ಕೆ ಸಮಿತಿ ತೀರ್ಮಾನಿಸಿದ ಒಂದು ಪ್ರಕಾರವನ್ನು ಪ್ರಕಟಿಸಲಾಗುವುದು. ಬರಹ ನೂರು ಪುಟಗಳಿಗೆ ಸೀಮಿತವಾಗಿರಬೇಕು. ಈವರೆಗೆ ಯಾವುದೇ ಪುಸ್ತಕ ಪ್ರಕಟಗೊಂಡಿಲ್ಲ ಎಂಬ ಸ್ವಯಂ ಘೋಷಣೆಯನ್ನು ಲೇಖಕರು ನೀಡಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.