ನಿಸ್ವಾರ್ಥ ಸೇವೆಯಿಂದ ಜೀವನ ಸಾರ್ಥಕ
ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.3
ಸರ್ಕಾರಿ ಸೇವೆಯಲ್ಲಿದ್ದವರಿಗೆ ನಿವೃತ್ತಿ ಅನಿವಾರ್ಯ. ಆದರೆ ನಿಸ್ವಾರ್ಥ ಸೇವೆಯಿಂದ ಮಾತ್ರ ಜೀವನವನ್ನು ಸಾರ್ಥಕ ಮಾಡಿಕೊಳ್ಳಬಹುದಾಗಿದೆ ಎಂದು ಲಿಂಗಸ್ಗೂರು ಸಹಾಯಕ ಆಯುಕ್ತ ಟಿ.ಯೋಗೇಶ ಹೇಳಿದರು.
ಕರ ವಸೂಲಿಗಾರ ಸೂಗೂರಯ್ಯ ಸ್ವಾಮಿ ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ನಗರಸಭೆ ಆವರಣದಲ್ಲಿ ಪೌರಸೇವಾ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಲ್ಲರಿಗೂ ಸರ್ಕಾರಿ ಸೇವೆ ಮಾಡುವ ಅವಕಾಶ ದೊರೆಯುವುದಿಲ್ಲ. ಸೇವೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾರು ಸರಿಯಾಗಿ ಸ್ಪಂದಿಸುತ್ತಾರೋ ಅವರು ಬಹಳ ದಿನ ಜನಮನದಲ್ಲಿ ಉಳಿದುಕೊಳ್ಳುತ್ತಾರೆ. ಸೂಗೂರಯ್ಯ ಸ್ವಾಮಿಗಳು ನಿರಂತರವಾಗಿ 30 ವರ್ಷಗಳ ಕಾಲ ಕರ ವಸೂಲಿಗಾರರಾಗಿ ಸೇವೆ ಸಲ್ಲಿಸಿದ್ದು ಅನನ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ದುರುಗಪ್ಪ ಹಸಮಕಲ್ ಮಾತನಾಡಿ, ಸೂಗೂರಯ್ಯ ಸ್ವಾಮಿಗಳ ಸೇವೆ ನಮ್ಮೆಲ್ಲರಿಗೂ ಅನುಕರುಣೀಯವಾಗಿದೆ. ಅವರ ಸುಧೀರ್ಘ ಸೇವೆಯಲ್ಲಿ ಒಮ್ಮೆಯೂ ಹೇಳಿಸಿಕೊಂಡವರಲ್ಲ. ಸೇವಾ ಅವಧಿಯಲ್ಲಿ ಒಂದೂ ಮೆಮೋ ಪಡೆಯದೇ ಮಾಡಿರುವ ಅವರ ಸೇವೆ ಶ್ಲಾಘನೀಯ. ಅವರ ಸೇವೆ ನಮ್ಮ ನಗರಸಭೆಗೆ ಇನ್ನೂ ಬೇಕಿತ್ತು. ಸರ್ಕಾರ ಆದೇಶದನ್ವಯ ನಿವೃತ್ತಿ ಹೊಂದಿರುವ ಅವರ ಮುಂದಿನ ಜೀವನ ಸುಖಕರವಾಗಿರಲೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಪೌರಾಯಕ್ತ ನಾಸೀರ್ ಅಲಿ, ಕಂದಾಯ ಅಧಿಕಾರಿ ಗುಂಡಪ್ಪ ಸಾಲಗುಂದಾ, ವ್ಯವಸ್ಥಾಪಕ ಗುರುರಾಜ ದೇಸಾಯಿ ಹಾಗೂ ಸಿಬ್ಬಂದಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

