ರಾಯಚೂರು

ನಾಳೆ ಪುರಾಣ ಮಹಾಮಂಗಲ

Published On :

ಸಿಂಧನೂರು: ತಾಲೂಕಿನ ತಿಪ್ಪನಹಟ್ಟಿಯಲ್ಲಿ ಏ. 11 ಯುಗಾದಿ ಪಾಡ್ಯ, ಗುರುವಾರದಂದು ಕಟ್ಟೆ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ನಡೆಯಲಿದೆ. ಇದರ ಅಂಗವಾಗಿ ಉಟಕನೂರು ಬಸವಲಿಂಗತಾತ ಪುರಾಣ ಮಹಾಮಂಗಲ ಹಾಗೂ ಮಹಾರಥೋತ್ಸವ ಜರುಗುವುದು ಎಂದು ಸದ್ಭಕ್ತ ಮಂಡಳಿ ತಿಳಿಸಿದೆ.
ಅಂದು ಬೆಳಿಗ್ಗೆ 8 ಗಂಟೆಗೆ ಸಕಲ ವಾದ್ಯಗಳೊಂದಿಗೆ ಕಳಸಾರೋಹಣ ಜರುಗುವುದು. ಮಧ್ಯಾಹ್ನ 12 ಗಂಟೆಯಿಂದ ಭೂರಿ ಗಣಾರಾಧನೆ, ಸಾಯಂಕಾಲ 5 ಗಂಟೆಯಿಂದ ಹರ ಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಹೂವಿನ ಅಲಂಕಾರದೊಂದಿಗೆ ನಂದಿಕೋಲು ಕುಣಿತ, ಡೊಳ್ಳು ಕುಣಿತ, ಭಜನೆ, ಬಾಜಾ ಭಜಂತ್ರಿಯೊಂದಿಗೆ ಮಹಾರಥೋತ್ಸವ ಹಾಗೂ ಪುರಾಣ ಮಹಾಮಂಗಲ ಜರುಗುವುದು.
ಸಾನ್ನಿಧ್ಯ: ಉಟಕನೂರು ಸುಕ್ಷೇತ್ರದ ಮರಿಬಸವರಾಜ ದೇಶಿಕೇಂದ್ರ ಮಹಾಸ್ವಾಮಿ ಸಾನ್ನಿಧ್ಯ ವಹಿಸುವರು. ಗುಲ್ಬರ್ಗ ವಿಭಾಗದ ತಿಂಥಿಣಿ ಬ್ರಿಜ್ ಕನಕಗುರು ಪೀಠದ ಸಿದ್ದರಾಮನಂದ ಪುರಿ, ನೀಲಗಲ್ ಬೃಹನ್ಮಠದ ಷ.ಬ್ರ. ಪಂಚಾಕ್ಷರಿ ಶಿವಾಚಾರ್ಯ, ರಾಯಚೂರಿನ ಬೈರೂನ ಕಿಲ್ಲೇದಮಠದ ಶಾಂತಮಲ್ಲ ಶಿವಾಚಾರ್ಯ, ಗಬ್ಬೂರ ಬಸವೇಶ್ವರ ಮಠದ ಬೂದಿ ಬಸವೇಶ್ವರ ಸ್ವಾಮಿ, ಯದ್ದಲದೊಡ್ಡಿ ಶ್ರದ್ಧಾನಂದ ಆಶ್ರಮದ ಸಂಜೀವಕುಮಾರ ಸ್ವಾಮಿ, ಬಸಾಪುರ(ಇಜೆ) ಜಗದ್ಗುರು ಶಿವಾನಂದಮಠದ ಶಿವಾದೇವಾನಂದ, ಹಳೆಕೋಟೆಯ ಮಲ್ಲಿಕಾರ್ಜುನ ಸ್ವಾಮಿ, ನವಲಕಲ್ ಸಿರವಾರ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮಿ, ಅಂಕಲಿಮಠದ  ಬ್ರಹ್ಮ ವೀರಭದ್ರ ಮಹಾಸ್ವಾಮಿ, ಎಂ. ಗುಡದೂರಿನ ನೀಲಕಂಠಾರ್ಯ ತಾತ, ಸಜ್ಜಲಗುಡ್ಡದ ದೊಡ್ಡಬಸವಾರ್ಯ ತಾತ, ಹಂಚಿನಾಳ್ ಕ್ಯಾಂಪ್ ಶಿವಲಿಂಗಯ್ಯ ತಾತ, ಯರಮರಸ್‌ನ ಶರಣಬಸವ ಸ್ವಾಮಿ, ಕಲ್ಯಾಣ ಹುಡೇವು ಸಿದ್ದಯ್ಯ ತಾತ, ಸುಕಾಲಪೇಟೆ ನಂಜುಂಡೇಶ್ವರ ಮಠದ ನಂಜುಂಡಯ್ಯ ಗುರು, ಗೌಡನಬಾವಿಯ ಕಟ್ಟೆ ಬಸವೇಶ್ವರ ಮಠದ ನಾಗಪ್ಪ ತಾತ, ಕಲ್ಯಾಣ ಹುಡೇವುದ ಕಟ್ಟೇಪ್ಪ ಪೂಜಾರಿ, ಫಕೀರಪ್ಪ ಪೂಜಾರಿ, ಕಟ್ಟೆಪ್ಪ ಜವಳಗೇರಾ, ಹಸಮಕಲ್‌ನ  ಪಂಡಿತ ಮಲ್ಲಿಕಾರ್ಜುನಸ್ವಾಮಿ, ಲಿಂಗನಬಂಡಿ ಮೌನೇಶಕುಮಾರ, ಮುದೇಶಕುಮಾರರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.