ರಾಜಿರಹಿತ ಮುಕ್ತ ಮತದಾನಕ್ಕೆ ಪಿಎಸ್ಐ ಬಾಳನಗೌಡ ಸಲಹೆ
ಸಿಂಧನೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಾರದರ್ಶಕ, ಮುಕ್ತ, ಶಾಂತಿಯುತ ಮತದಾನ ಮಾಡುವಂತೆ ಬಳಗಾನೂರು ಠಾಣೆ ಪಿಎಸ್ಐ ಬಾಳನಗೌಡ ಎಸ್.ಎಂ. ಮತದಾರರಿಗೆ ಸಲಹೆ ನೀಡಿದರು.
ಗ್ರಾಮದ ಠಾಣೆಯಲ್ಲಿ ಗುರುವಾರ ಶಾಂತಿಪಾಲನಾ ಸಮಿತಿಯಿಂದ ಹಮ್ಮಿಕೊಂಡಿದ್ದ ನಾಗರಿಕ ಸಭೆಯಲ್ಲಿ ಮಾತನಾಡಿ, ಮತದಾರರಿಗೆ ಹಣದ ಆಮಿಷ ತೋರಿಸುವುದು ಮಾತ್ರವಲ್ಲದೆ ಹಣ ಪಡೆಯುವುದು ಸಹ ಕಾನೂನು ಪ್ರಕಾರ ಅಪರಾಧ. ತಮಗೆ ನೀಡಿರುವ ಮತದಾನದ ಹಕ್ಕನ್ನು ಮಾರಿಕೊಳ್ಳದೆ ರಾಜಿ ರಹಿತವಾಗಿ ಮತ ಚಲಾಯಿಸಬೇಕೆಂದು ತಿಳಿಸಿದರು.
ಚುನಾವಣೆ ಯಶಸ್ವಿಯಾಗಬೇಕಾದರೆ ಮತದಾನದಿಂದ ದೂರ ಉಳಿಯದೆ ಪ್ರತಿಯೊಬ್ಬರು ಮತದಾನ ಮಾಡಬೇಕು. ಚುನಾವಣೆ ಆಯೋಗ ವಿಧಿಸುವ ನಿಯಮಗಳನ್ನು ಯಾರೂ ಉಲ್ಲಂಘನೆ ಮಾಡುವಂತಿಲ್ಲ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬಾರದು. ಚುನಾವಣಾ ಅನೈತಿಕ ಚುಟುವಟಿಕೆಗಳು ನಡೆದಲ್ಲಿ ಪೊಲೀಸ್ ಠಾಣೆಯ ಗಮನಕ್ಕೆ ತರುವಂತೆ ಮನವಿ ಮಾಡಿದರು.
ಮುಖಂಡರಾದ ವಿರುಪಣ್ಣ ಗುತ್ತೇದಾರ, ಸಿದ್ದಪ್ಪ ಮಾಕಾಪುರ, ಟಿ.ಅಮರೇಶ ನಾಯಕ, ಯಂಕನಗೌಡ ಗದ್ದಿ, ಪಂಪನಗೌಡ ಮಾಲಿಪಾಟೀಲ್, ಡಾ. ಎಸ್.ಎಸ್. ಜಾಗೀರದಾರ, ಮಹೆಬೂಬಪಾಷ ಅತ್ತಾರ್, ಕಂಟೆಪ್ಪ ನಾಯಕ, ಹುಸೇನಬಾಷ, ಮೋದಿನ್ ಪಾಷ ಮುಲ್ಲಾ, ಶೇಖರಪ್ಪ ನಾಗಲೀಕರ, ರೆಡ್ಡೆಪ್ಪ ವಾಲೇಕಾರ, ಬಳಗಾನೂರು ಠಾಣಾ ವ್ಯಾಪ್ತಿಯ ಎಲ್ಲ ಗ್ರಾಮಗಳ ಪ್ರಮುಖರು ಭಾಗವಹಿಸಿದ್ದರು. ಪಿ.ಸಿ. ಹನುಮಂತ ನಾಯಕ ಸ್ವಾಗತಿಸಿದರು. ಪರಶುರಾಮ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

