ಬದುಕಿನ ಮುಕ್ತಿಗೆ ಭಕ್ತಿಯೇ ಸಾಧನ
ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.12
ಮಾನವನ ಬದುಕಿಗೆ ಭಕ್ತಿಯೇ ಮುಕ್ತಿಯ ಸಾಧನವಾಗಿರುವುದರಿಂದ ದೃಢ ಸಂಕಲ್ಪ ಹಾಗೂ ಏಕಾಗ್ರತೆಯಿಂದ ಭಗವಂತನ ಸ್ಮರಣೆ ಮಾಡಬೇಕು. ಶರಣರ, ಪವಾಡ ಪುರುಷರ ಜೀವನ ಚರಿತ್ರೆಯನ್ನು ತಿಳಿದು ಅವರ ಜೀವನದ ಆದರ್ಶ, ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಿರ್ವಹಿಸಿಕೊಳ್ಳಬೇಕೆಂದು ಹಳೆಕೋಟೆಯ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ತಾಲೂಕಿನ ತಿಪ್ಪನಹಟ್ಟಿ ಗ್ರಾಮದ ಕಟ್ಟೆ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ನಿಮಿತ್ತ ಆಯೋಜಿಸಿದ ಉಟಗನೂರು ಬಸವಲಿಂಗ ತಾತನವರ ಪುರಾಣ ಪ್ರವಚನದ ಮಹಾಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಉಟಗನೂರು ಮರಿಬಸವಲಿಂಗ ತಾತನವರ ಸುಪ್ರಭಾತದ ನುಡಿಗಳನ್ನು ಹೇಳಿದ ಸ್ವಾಮೀಜಿ ಮುಂದಿನ ದಿನಗಳಲ್ಲಿ ಸುಪ್ರಭಾತದ ಸಿಡಿಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಸುಸಂಸ್ಕೃತರಾಗಲು ಪ್ರವಚನ: ನೀಲಗಲ್ ಬೃಹನ್ಮಠದ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಧರ್ಮವಂತರಾಗಬೇಕು ಹಾಗೂ ಸುಸಂಸ್ಕೃತರಾಗಬೇಕು ಎಂಬ ಉದ್ದೇಶದಿಂದ ಮಹಾನ್ ಶರಣರ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.
ಸುಕ್ಷೇತ್ರ ಉಟಕನೂರಿನ ಮರಿಬಸವರಾಜ ದೇಶೀಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಮಾನವರು ಉತ್ತಮರ ಸಹವಾಸದಿಂದ ಸಂಸ್ಕಾರವಂತರಾಗಿ ಜೀವನ ಸದ್ಗತಿ ಪಡೆಯಲು ಪವಿತ್ರವಾದ ಪುರಾಣ ಪ್ರವಚನಗಳು ಅಗತ್ಯವೆಂದು ತಿಳಿಸಿದರು.
ನಿರ್ಮಲ ಭಕ್ತಿಯಿಂದ ಭಗವಂತನ ಕೃಪೆ: ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬೀರಪ್ಪ ಶಂಭೋಜಿ, ಬದುಕಿನಲ್ಲಿ ಏಕಾಗ್ರತೆ ಹಾಗೂ ನಿರ್ಮಲ ಭಕ್ತಿಯಿಂದ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.
ವೆಂಕಟೇಶ್ವರ ಪ್ರೌಢಶಾಲೆಯ ಶಿಕ್ಷಕ ಸಾಹಿತಿ ವೆಂಕನಗೌಡ ವಟಗಲ್ ಮಾತನಾಡಿ, ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅನುಭಾವಿಗಳ, ಸ್ವಾಮೀಜಿಗಳ ದರ್ಶನ ಹಾಗೂ ಅವರ ಆಶೀರ್ವಾದದ ನುಡಿಗಳನ್ನು ಆಲಿಸಿ ಶಾಂತಿ ಸೌಹಾರ್ದತೆಯಿಂದ ಜೀವನ ಸಾಗಿಸಬೇಕೆಂದರು.
ಗೌಡನಬಾವಿಯ ನಾಗಪ್ಪ ತಾತನವರು, ಸಿದ್ರಾಮ ಶರಣರು, ಕಲ್ಯಾಣ ಹುಡೇವುದ ಸಿದ್ದಯ್ಯ ತಾತ, ಕಟ್ಟೆಪ್ಪ ಪೂಜಾರಿ, ಫಕೀರಪ್ಪ ಪೂಜಾರಿ, ನ್ಯಾಯವಾದಿ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಭೀಮಣ್ಣ, ವೀರಭದ್ರಪ್ಪ ಗಸ್ತಿ, ಮಲ್ಲಿಕಾರ್ಜುನ ಗುಮ್ಮಾ, ಶೇಟ್, ಉಪಖಜಾನೆಯ ಲೆಕ್ಕಾಧಿಕಾರಿ ಶಿವುಕುಮಾರಸ್ವಾಮಿ, ಹಂಪನಗೌಡ ಪೋಲಿಸ್ ಪಾಟೀಲ್, ವಿರುಪನಗೌಡ ಜಿನ್ನದ, ಮರಿಬಸಪ್ಪ, ವೆಂಕಪ್ಪ ನಾಯಕ, ವೀರಪ್ಪ ನಾಯಕ, ಅಮರೇಶ ಬೆಳ್ಳಿಗನೂರು, ದೇವಪ್ಪ, ದುರಗಪ್ಪ ಹಿರೇಕುರುಬರ, ವೆಂಕಣ್ಣ ತಿಪ್ಪನಹಟ್ಟಿ ಉಪಸ್ಥಿತರಿದ್ದರು.
ಹಸಮಕಲ್ ಬೃಹನ್ಮಠದ ಪಂಡಿತ ಮಲ್ಲಿಕಾರ್ಜುನಸ್ವಾಮಿ ಶಾಸ್ತ್ರಿಗಳು ಪುರಾಣ ಪ್ರವಚನ ನೆರವೇರಿಸಿದರು. ಮೌನೇಶಕುಮಾರ ಲಿಂಗನಬಂಡಿ, ಮುದೇಶಕುಮಾರ ಲಿಂಗನಬಂಡಿ ತಬಲಾ ಸಾಥ್ ನೀಡಿದರು. ಕುಮಾರಿ ಶ್ವೇತಾ ಪ್ರಾರ್ಥಿಸಿದರು. ನ್ಯಾಯವಾದಿ ಲಿಂಗರಾಜ್ ಸ್ವಾಗತಿಸಿದರು. ವೆಂಕಣ್ಣ ತಿಪ್ಪನಹಟ್ಟಿ ವಂದಿಸಿದರು. ವಳಬಳ್ಳಾರಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಬಸಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

