ರಾಯಚೂರು

ಸುದ್ದಿ ಸಂಕ್ಷೇಪ

Published On :

ಬಿಆರ್‌ಟಿಯಲ್ಲಿ ಅಕ್ರಮ ಮದ್ಯ ವಶ
ಯಳಂದೂರು: ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟದ ಚೆಕ್‌ಪೋಸ್ಟ್‌ನಲ್ಲಿ ಸೆಕ್ಟರ್ ಮ್ಯಾಜೆಸ್ಟರ್ ರಘುನಾಥ್ ಸಿಬ್ಬಂದಿ ಜೊತೆ ವಾಹನ ತಪಾಸಣೆ ನಡೆಸಿದಾಗ 5 ಲೀ. ಮದ್ಯ ಪತ್ತೆಯಾಗಿದ್ದು, ದೂರು ದಾಖಲಿಸಿಕೊಂಡಿದ್ದಾರೆ. ಕೊಳ್ಳೇಗಾಲ ತಾಲೂಕಿನ ಮುಡಿಗುಂಡ ಗ್ರಾಮದ ಅನಿಲ್ ಕುಮಾರ್ ಎಂಬಾತ ಮಾರುತಿ ಕಾರ್‌ನಲ್ಲಿ ಬಿಳಿಗಿರಿರಂಗನಾಥಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದು, ಅಧಿಕಾರಿಗಳ ತಪಾಸಣೆ ವೇಳೆಯಲ್ಲಿ ಒಂದು ಬ್ಯಾಗಿನಲ್ಲಿ 5 ಬಾಟಲ್ ಬಿಯರ್, ಒಂದು ಬಾಟಲ್ ವಿಸ್ಕಿ, 4 ಬಾಟಲ್ ಬ್ರಾಂದಿ ಕಂಡುಬಂದಿದ್ದು, ಆರೋಪಿಯನ್ನು ವಾಹನ ಸಮೇತ ವಶಪಡಿಸಿಕೊಂಡು ದೂರು ದಾಖಲಿಸಿಕೊಂಡು ಯಳಂದೂರು ಪೊಲೀಸ್ ಠಾಣೆಯ ಪಿಎಸ್‌ಐ ನಟರಾಜುರಿಗೆ ಒಪ್ಪಿಸಲಾಗಿದೆ.

33 ಹಂಡೆ ವಶ
ಯಳಂದೂರು: ತಾಲೂಕಿನ ಯರಿಯೂರು ಗ್ರಾಮದ ನಾಯಕರ ಬಡಾವಣೆಯಲ್ಲಿ ದಾಖಲೆಗಳಿಲ್ಲದೆ ಟಾಟಾ ಎಸಿ ವಾಹನದಲ್ಲಿ ತಾಮ್ರದ ಹಂಡೆಗಳನ್ನು ಸಾಗಿಸುತ್ತಿದ್ದು, ಚುನಾವಣೆ ಅಧಿಕಾರಿಗಳು ದೂರು ದಾಖಲಿಸಿಕೊಂಡು ವಾಹನ ಮತ್ತು ತಾಮ್ರದ ಹಂಡೆಗಳನ್ನು ಯಳಂದೂರು ಪೊಲೀಸ್ ಠಾಣೆಯ ವಶಕ್ಕೆ ನೀಡಿರುವ ಘಟನೆ ಶನಿವಾರ ನಡೆದಿದೆ. ಗ್ರಾಮದ ನಾಯಕರ ಬಡಾವಣೆಯಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ 33 ಹಂಡೆಗಳನ್ನು ಗ್ರಾಮದಲ್ಲಿ ಇಳಿಸುತ್ತಿದ್ದಾಗ ಅನುಮಾನಗೊಂಡು ಸೆಕ್ಟರ್ ಮ್ಯಾಜೆಸ್ಟೆರ್ ಡಾ. ಸುಂದರ್‌ರಾಜ್ ಹಾಗೂ ರಾಚಪ್ಪ  ಅವರು ವಾಹನ ಚಾಲಕ ಕುಮಾರ್‌ರನ್ನು ಪ್ರಶ್ನಿಸಿದರು. ಇದಕ್ಕೆ ಸಂಬಂಧಪಟ್ಟ ದಾಖಲಾತಿ ಇಲ್ಲದ ಕಾರಣ ನೀತಿಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡು ವಾಹನ ಹಾಗೂ ಹಂಡೆಗಳನ್ನು ಪೊಲೀಸ್ ಠಾಣೆ ವಶಕ್ಕೆ ಒಪ್ಪಿಸಲಾಗಿದ್ದು, ಈ ಬಗ್ಗೆ ಪಿಎಸ್‌ಐ ನಟರಾಜು ತನಿಖೆ ನಡೆಸುತ್ತಿದ್ದಾರೆ.
ಅಕ್ರಮ ಮರಳು ವಶ
ಹುಣಸೂರು: ಕಟ್ಟೆಪುರದಿಂದ ಕೇರಳಕ್ಕೆ ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂರು ಟಿಪ್ಪರ್ ಮತ್ತು ಒಂದು ಟ್ರಾಕ್ಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಪಟ್ಟಣದ ಕಲ್ಕುಣಿಕೆ ವೃತ್ತದಲ್ಲಿ ನಡೆದಿದೆ.ಅರಕೂಲಗೂಡು ತಾಲೂಕಿನ ಕಟ್ಟೆಪುರದಿಂದ ಕೇರಳಕ್ಕೆ ನಿರಂತರವಾಗಿ ಹುಣಸೂರು ಮಾರ್ಗವಾಗಿ ಮರಳು ಸಾಗಣೆ ಮಾಡುತ್ತಿರುವ ಬಗ್ಗೆ ಜಿಲ್ಲಾ ಅಪರಾಧ ವಿಭಾಗದ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಭಾನುವಾರ ಬೆಳಗ್ಗೆ ಕಲ್ಕುಣಿಕೆ ವೃತ್ತದ ಬಳಿ ತಪಾಸಣೆ ಮಾಡುವ ವೇಳೆಯಲ್ಲಿ ಮೂರು ಟಿಪ್ಪರ್ ಲಾರಿ, ಒಂದು ಟ್ರಾಕ್ಟರ್‌ನಲ್ಲಿ ಮರಳು ಸಮೇತ ವಶಪಡಿಸಿಕೊಂಡು ಚಾಲಕರು ಪರಾರಿಯಾಗಿದ್ದಾರೆ. ಪ್ರಕರಣ ಹುಣಸೂರು ಟೌನ್ ಠಾಣೆಯಲ್ಲಿ ದಾಖಲಿಸಲಾಗಿದೆ. ತನಿಖೆ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರ್ಗಾಯಿಸಲಾಗುತ್ತದೆ ಎಂದು ಪಿಎಸ್‌ಐ ಅಶೋಕ್ ಕುಮಾರ್ ತಿಳಿಸಿದ್ದಾರೆ. ಟ್ರಿಪ್ಪರ್ ಪಟ್ಟಣದ ಶಭ್ಭೀರ್ ನಗರದ ನಿವಾಸಿ ಗಿಲಾನಿ ಎಂಬುವರಿಗೆ ಸೇರಿದೆ ಎಂದು ತಿಳಿದು ಬಂದಿದೆ.
ಒಡವೆ ದರೋಡೆ
ಕೊರಟಗೆರೆ: ದಾರಿಯಲ್ಲಿ ಹೋಗುತ್ತಿದ್ದ ದಂಪತಿ ಹಾಗೂ ಯುವಕನನ್ನು ಅಡ್ಡಗಟ್ಟಿ ಹಣ ಮತ್ತು ಚಿನ್ನದ ಉಂಗುರವನ್ನು ದೋಚಿ ಪರಾರಿಯಾದ ಘಟನೆ ತಾಲೂಕಿನ ಮಾವತ್ತೂರು ಸಮೀಪ ನಡೆದಿದೆ.ತಾಲೂಕಿನ ದೊಡ್ಡಸಾಗ್ಗೆರೆ ಗ್ರಾಮದ ಯುವಕರ ತಂಡ 4 ಮಂದಿ ಮೊದಲು ಗೌರಿಬಿದನೂರು ತಾಲೂಕಿನ ಮಲ್ಲಸಂದ್ರ ಗ್ರಾಮದ ಮಂಜುನಾಥ ಎಂಬಾತ ಹನುಮಂತಪುರ ಗ್ರಾಮದಲ್ಲಿರುವ ಸಂಬಂದಿಕರ ಮನೆಗೆ ನಡೆದು ಬರುವಾಗ ದಾರಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಬಂದ ಯುವಕರನ್ನು ಡ್ರಾಪ್ ಕೇಳಿದಾಗ ಕರೆದೊಯ್ದ ಯುವಕರು ಪೋಲೇನಹಳ್ಳಿ ಕ್ರಾಸ್ ಬಳಿ ನಿಲ್ಲಿಸಿ ಬೆದರಿಸಿ ಸುಮಾರು ಎರಡೂವರೆ ಸಾವಿರ ರು. ಕಿತ್ತು ಕೊಂಡು ಪರಾರಿಯಾಗಿದ್ದಾರೆ.ಮತ್ತೊಂದು  ಪ್ರಕರಣದಲ್ಲಿ ಬೆಂಗಳೂರಿನ ವಾಸಿಯಾದ ರಂಗಧಾಮ ಮತ್ತು ಆತನ ಪತ್ನಿ ದ್ವಿಚಕ್ರ ವಾಹನದಲ್ಲಿ ತಾಲೂಕಿನ ಎಂ. ಹೊಸಹಳ್ಳಿಯ ಸಂಬಂದಿಕರ  ಮನೆಯಲ್ಲಿ ಊಟ ಮುಗಿಸಿಕೊಂಡು ತಮ್ಮ ಸ್ವಂತ ಊರಾದ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಗೆ ಹೋಗುವಾಗ ಮಾರ್ಗ ಮಧ್ಯೆ ಅಡ್ಡಗಟ್ಟಿದ ತಂಡ ದಂಪತಿ ಬೆದರಿಸಿ ಕೈಯಲ್ಲಿದ್ದ ಚಿನ್ನದ ಉಂಗುರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.