4 ಮುಖಗಳನ್ನು ತಿರಸ್ಕರಿಸಿ: ಬಾದರ್ಲಿ
ಸಿಂಧನೂರು: ಬಿಜೆಪಿ., ಕೆಜೆಪಿ, ಬಿಎಸ್ಆರ್ ಮತ್ತು ಜೆಡಿಎಸ್ ಒಂದೇ ನಾಣ್ಯದ ನಾಲ್ಕು ಮುಖಗಳಿದ್ದಂತೆ. ಈ ಎಲ್ಲ ಪಕ್ಷಗಳ ಮುಖಂಡರು ಒಂದಿಲ್ಲ ಒಂದು ಆರೋಪ ಎದುರಿಸುತ್ತಿದ್ದಾರೆ. ಕಾರಣ ಇವರನ್ನು ತಿರಸ್ಕರಿಸಿ ದೇಶದ ಸಮಗ್ರತೆ, ಐಕ್ಯತೆ ಮತ್ತು ಅಭಿವೃದ್ಧಿ ಕಾಪಾಡಿಕೊಂಡು ಬಂದಿರುವ ಕಾಂಗ್ರೆಸ್ ಬೆಂಬಲಿಸುವಂತೆ ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ ಮನವಿ ಮಾಡಿದರು. ತಾಲೂಕಿನ ರಂಗಾಪುರ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ತಾವು ಅಧಿಕಾರದಲ್ಲಿದ್ದಾಗ ಅನೇಕ ಜನಪರ ಕೆಲಸಗಳನ್ನು ಮಾಡಿರುವುದಾಗಿ ತಿಳಿಸಿದ ಅವರು ಕುಡಿಯುವ ನೀರು, ರಸ್ತೆ, ಶಾಲಾ ಕಾಲೇಜ್ ಪ್ರಗತಿಯನ್ನು ನೋಡುವಂತೆ ತಿಳಿಸಿದರು. ಹಂಚಿನಾಳ ಲಿಂಗರಾಜ ಪಾಟೀಲ್, ವೀರೇಶಪ್ಪ ಮತ್ತಿತರರು ಮಾತನಾಡಿದರು.
ಕಾಂಗ್ರೆಸ್ ಬೆಂಬಲಿಸಲು ಮನವಿ
ಸಿಂಧನೂರು: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ಸೂಚನೆಗಳು ಕಂಡುಬರುತ್ತಿವೆ. ಹಿಂದುಳಿದ ವರ್ಗದ ನಾಯಕರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಕಾಲಸನ್ನಿತವಾಗಿದೆ. ಕಾರಣ ಹಾಲುಮತ ಬಾಂಧವರು ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕಾಂಗ್ರೆಸ್ ಮುಖಂಡರಾದ ಲಿಂಗಾಧರ ಗುರುಸ್ವಾಮಿ ಮತ್ತು ಪಂಪಣ್ಣ ನಂಜಲದಿನ್ನಿ, ಈರಣ್ಣ ಎಂ., ಮಂಜುನಾಥ ಕುರುಬರ, ಅಮರೇಶ ಕುರುಬರ ಮನವಿ ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಸಿಂಧನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಾದರ್ಲಿ ಹಂಪನಗೌಡರು ಅಭಿವೃದ್ಧಿ ಪರವಾಗಿದ್ದು, ತಮ್ಮ ಅವಧಿಯಲ್ಲಿ ತಾಲೂಕಿನಾದ್ಯಂತ ರಾಜೀವ್ ಗಾಂಧಿ ಸಬಬ್ಮಿಷನ್ ಯೋಜನೆಯಡಿ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಮತ್ತಿತರ ಕೆಲಸಗಳನ್ನು ಮಾಡಿದ್ದಾರೆ. ಹಾಲುಮತ ಸಮಾಜದವರು ಅವರನ್ನು ಬೆಂಬಲಿಸುವ ಮೂಲಕ ಮುಂಬರುವ ದಿನಗಳಲ್ಲಿ ಸಿಂಧನೂರು ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ವಿನಂತಿಸಿಕೊಂಡಿದ್ದಾರೆ.
ಬಿಎಸ್ಆರ್ಗೆ ಸೇರ್ಪಡೆ
ಲಿಂಗಸ್ಗೂರು: ಪಟ್ಟಣದ ಪಕ್ಷದ ಕಚೇರಿಯಲ್ಲಿ ಕಸಬಾಲಿಂಗಸ್ಗೂರು ಹಾಗೂ ಆಮದಿಹಾಳ ಗ್ರಾಮದ ಜನರು ಅಭ್ಯರ್ಥಿ ಸಿದ್ಧು ಬಂಡಿ ಸಮ್ಮುಖದಲ್ಲಿ ಶುಕ್ರವಾರ ಬಿಎಸ್ಆರ್ ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಪಕ್ಷ ಸೇರ್ಪಡೆಗೊಂಡ ಮುಖಂಡರಾದ ವೀರೇಶ ಪತ್ತಾರ, ಕುಪ್ಪಣ್ಣ ಲಂಕೆಪ್ಪನವರ, ಸೋಮಣ್ಣ, ಬಸಪ್ಪ, ಹನುಮಂತ, ರಾಮಸ್ವಾಮಿ, ಯಮನೂರ ಸೇರಿದಂತೆ ಇನ್ನಿತರರು ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಆರ್.ಎಸ್. ನಾಡಗೌಡ, ಶಂಕರಗೌಡ ಅಮರಾವತಿ, ಅಮರಪ್ಪ ನಾಯಕ ಗುರುಗುಂಟಾ, ಹನುಮಂತಪ್ಪ ಕಂದಗಲ್, ಜಿ.ಜಿ. ನಾಯಕ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

