ಕರ್ಣಾಟಕ ಬ್ಯಾಂಕ್ ನೂತನ ಶಾಖೆ ಉದ್ಘಾಟನೆ
ಲಿಂಗಸ್ಗೂರು: ಪಟ್ಟಣದಲ್ಲಿ ಕರ್ಣಾಟಕ ಬ್ಯಾಂಕ್ ನೂತನ 552ನೇ ಶಾಖೆಯನ್ನು ಹಂಗಾಮಿ ಶಾಸಕ, ಜೆಡಿಎಸ್ ಅಭ್ಯರ್ಥಿ ಮಾನಪ್ಪ ವಜ್ಜಲ್ ಶುಕ್ರವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕರ್ನಾಟಕ ಬ್ಯಾಂಕ್ ಆರಂಭದಿಂದ ಗ್ರಾಹಕರ ಮತ್ತು ಬಡವರ ಅಭಿವೃದ್ಧಿಗೆ ಸಹಕಾರಿ. ಇತರೆ ಬ್ಯಾಂಕುಗಳಿಗಿಂತ ಇದು ವಿಭಿನ್ನವಾಗಿದ್ದು, ವ್ಯಾಪಾರಸ್ಥರು, ಕಾರ್ಮಿಕರಿಗೆ, ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಬ್ಯಾಂಕ್ನ ಕಾರ್ಯನಿರ್ವಾಹಕ ಪ್ರಬಂಧಕ ಜಯರಾಮ್ ಭಟ್ ಅವರ ಶ್ರಮದಿಂದ ಆಡಳಿತ ವ್ಯವಸ್ಥೆಯಲ್ಲಿ ಉತ್ತುಮ ಸುಧಾರಣೆ ಕಂಡಿದೆ ಎಂದರು.
ಬ್ಯಾಂಕ್ನ ಕಾರ್ಯನಿರ್ವಾಹಕ ಪ್ರಬಂಧಕ ಜಯರಾಮ್ ಭಟ್ ಮಾತನಾಡಿ, 1924 ರಲ್ಲಿ ಆರಂಭಗೊಂಡ ಸದರಿ ಬ್ಯಾಂಕ್, ಇದುವರೆಗೆ 552 ಶಾಖೆಗಳನ್ನು ಹೊಂದಿದೆ. ಪ್ರಸ್ತುತ ಬ್ಯಾಂಕ್ ವ್ಯವಹಾರ 62 ಸಾವಿರ ಕೋಟಿ ರು. ದಾಟಿದೆ. ಮುಂದಿನ ವರ್ಷದಲ್ಲಿ ಒಂದು ಲಕ್ಷ ಸಾವಿರ ಕೋಟಿ ರು. ಗುರಿ ತಲುಪಲಿದೆ.
2013-14 ನೇ ಸಾಲಿನಲ್ಲಿ ಲಿಂಗಸ್ಗೂರು ಪಟ್ಟಣದಲ್ಲಿ ಬ್ಯಾಂಕ್ ಶಾಖೆ 2ನೇ ಶಾಖೆ ಆರಂಭಗೊಂಡಿದೆ. ಆಧುನಿಕ ತಾಂತ್ರಿಕತೆ ಹೊಂದಿರುವ ಬ್ಯಾಂಕಿನಲ್ಲಿ ಎಲ್ಲ ಸೇವೆಗಳು ಲಭ್ಯವಿದ್ದು, ರೈತರಿಗಾಗಿ ವಿವಿಧ ಯೋಜನೆಗಳು, ಲಾಕರ್ ವ್ಯವಸ್ಥೆ ಹೊಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಉಪ ಮಹಾ ಪ್ರಬಂದಕ ಎಸ್.ಎಚ್. ರುದ್ರಯ್ಯ, ಮುಖ್ಯ ವ್ಯವಸ್ಥಾಪಕ ಶ್ರೀನಿವಾಸ ದೇಶಪಾಂಡೆ, ಮುಖಂಡರಾದ ಅಮರಗುಂಡಪ್ಪ ಮೇಟಿ, ಶಿವಾನಂದ ಐದನಾಳ, ಡಾ.ಗುರುರಾಜ ದೇಶಪಾಂಡೆ, ಎಲ್.ಆರ್. ಮೇಟಿ, ಬಸವರಾಜ ಮೂಲಿಮನಿ, ಶ್ರೀನಿವಾಸ ಅಮ್ಮಾಪುರ, ಶರಣಬಸವ ಮೇಟಿ, ರಾಘವೇಂದ್ರ ಮುತಾಲಿಕ ವಕೀಲರು, ಬ್ಯಾಂಕ್ ಶಾಖೆ ನೌಕರರಾದ ಎ.ಜೆ.ಎಂ. ಗೋಪಾಲ, ಪಾರ್ವತಿ, ರವೀಂದ್ರ ಸೇರಿದಂತೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

