ರಾಯಚೂರು

ಕತ್ತಲಲ್ಲಿ ತನಿಖಾ ತಂಡ; ಆಸರೆ ನೀಡದ ಟೆಂಟ್

Published On :

ಕ.ಪ್ರ. ವಾರ್ತೆ  ಗುಲ್ಬರ್ಗ/ಶಹಾಬಾದ್  ಏ.22
ಪ್ರತಿಷ್ಠಿತ ಚಿತ್ತಾಪುರ ಮತಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮಗಳ ತಡೆಗೆ ಚುನಾವಣೆ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ನಾಲವಾರ ಕ್ರಾಸ್‌ಬಳಿ ಇರುವ ತಾತ್ಕಾಲಿಕ ಚಕ್ ಪೋಸ್ಟ್‌ನಲ್ಲಿ ರಾತ್ರಿ ಹೊತ್ತು ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದೆ ಹಾಕಿರುವ ಟೆಂಟ್ ಸಿಬ್ಬಂದಿಗೆ ಸೂಕ್ತ ಆಸರೆ ನೀಡದಂತಾಗಿದೆ.
ವಾಡಿ, ಯಾದಗಿರಿ ರಾಜ್ಯ ಹೆದ್ದಾರಿಯಿಂದ ನಾಲವಾರ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ನಾಲವಾರ ಗ್ರಾಮ ಪಂಚಾಯತಿಯಿಂದ ನಿರ್ಮಿಸಿದ ಹೈಮಾಸ್ಟ್ ಕಳೆದ ಕೆಲವು ದಿನಗಳಿಂದ ಕೆಟ್ಟು ಹೋಗಿದ್ದು, ಸೂಕ್ತ ದುರಸ್ತಿ ಕಾಣದಂತಾಗಿದೆ.
ಇದರಿಂದ ಈ ಕ್ರಾಸ್ ಬಳಿ ನಿರ್ಮಿಸಿರುವ ತಾತ್ಕಾಲಿಕ ಚಕ್ ಪೋಸ್ಟ್‌ನಲ್ಲಿ ಅರೆ ಸೇನಾಪಡೆ, ಪೊಲೀಸರು, ಅಧಿಕಾರಿಗಳು ಸೇರಿದಂತೆ ಸುಮಾರು 10 ಜನ ಸಿಬ್ಬಂದಿ ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ಹೊತ್ತು ಟೆಂಟ್‌ನಲ್ಲಿ ಅಳವಡಿಸಿರುವ ಎರಡು ಬಲ್ಪ್‌ಗಳ ಹೊರತಾಗಿ ಯಾವುದೇ ಬೆಳಕು ಇಲ್ಲದಂತಾಗಿದೆ. ರಾತ್ರಿ ಹೊತ್ತು ಅತಿಹೆಚ್ಚು ವಾಹನಗಳು ಸಂಚರಿಸುವುದರಿಂದ ತನಿಖೆಯೂ ಕೂಡ ಹೆಚ್ಚು ಮಾಡಬೇಕಾಗಿದೆ. ಇದಕ್ಕಾಗಿ ಸೂಕ್ತ ಬೆಳಕು ಅವಶ್ಯಕವಾಗಿದ್ದು, ಗ್ರಾಮ ಪಂಚಾಯತಿ ಕೂಡಲೇ ಹೈಮಾಸ್ಟ್ ರಿಪೇರಿ ಕೆಲಸ ಕೈಗೊಳ್ಳಬೇಕಾಗಿದೆ.
ಸ್ಥಳದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಟೆಂಟ್ ಸಮರ್ಪಕವಾಗಿರದೆ ಇದ್ದು, ಒಂದು ಶ್ಯಾಮಿಯಾನ, ಚಾಪೆಯನ್ನು ಕಟ್ಟಿದ ಟೆಂಟ್ ನಿರ್ಮಿಸಲಾಗಿದೆ. ಇದರಿಂದ ಸಂಪೂರ್ಣ ಸಿಬ್ಬಂದಿ ನೆರಳಿಗಾಗಿ ಪರದಾಡಬೇಕಾಗಿದೆ. ಈ ಬಗ್ಗೆ ಚುನಾವಣೆ ಆಯೋಗ ಸೂಕ್ತ ಕ್ರಮ ಕೈಗೊಂಡು ಹಗಲು ರಾತ್ರಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.

ನೀತಿ ಸಂಹಿತೆ ಉಲ್ಲಂಘನೆ: 2 ಪ್ರಕರಣ ದಾಖಲು

ಗುಲ್ಬರ್ಗ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಏ.19 ರಂದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಎರಡು ಪ್ರಕರಣ ದಾಖಲಿಸಲಾಗಿದೆ.
ಗುಲ್ಬರ್ಗ ಗ್ರಾಮಾಂತರ ಚುನಾವಣಾ ಕ್ಷೇತ್ರದಲ್ಲಿ ಕೆಜೆಪಿ ಪಕ್ಷದ ಅಭ್ಯರ್ಥಿಯಾದ ಬಾಬುರಾವ ಚವ್ಹಾಣ ಅವರ ವಿರುದ್ಧ ಸಾರ್ವಜನಿಕ ಸ್ಥಳದ ಅನಧೀಕೃತ ಬಳಕೆಯ ಪ್ರಕರಣ ದಾಖಲಾಗಿರುತ್ತದೆ. ಗುಲ್ಬರ್ಗ ಗ್ರಾಮಾಂತರ ಚುನಾವಣಾ ಕ್ಷೇತ್ರದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಬಾಬು ಹೊನ್ನಾ ನಾಯಕ ಅವರ ವಿರುದ್ಧ ಸಾರ್ವಜನಿಕ ಸ್ಥಳದ ಅನಧೀಕೃತ ಬಳಕೆಯ ಪ್ರಕರಣ ದಾಖಲಾಗಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.