ಮುದಗಲ್ಗೆ ಉಡುಪಿ ಕಾಣೇಯೂರು ಶ್ರೀ
ಮುದಗಲ್: ತೃತೀಯ ಮಂತ್ರಾಲಯವೆಂದೇ ಕರೆಯಲ್ಪಡುವ ಮುದಗಲ್ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಉಡುಪಿ ಕಾಣೇಯೂರು ಶ್ರೀಗಳು ಆಗಮಿಸಿದರು. ಅವರನ್ನು ವಿಪ್ರ ಸಮಾಜದ ವಿಭಾಗೀಯ ಉಪಾಧ್ಯಕ್ಷ ನರಸಿಂಗರಾವ್ ದೇಶಪಾಂಡೆ ಹೂಮಾಲೆ ಹಾಕಿ ಸ್ವಾಗತಿಸಿದರು.
ನಂತರ ಮಹಿಳೆಯರು ಆರತಿ ಮಾಡಿ ಶ್ರೀಗಳನ್ನು ಆಹ್ವಾನಿಸಿ ಸ್ವಾಗತಿಸಿದರು. ನಂತರ ಸಂಜೆ 7.30ಕ್ಕೆ ತೊಟ್ಟಿಲು ಸೇವೆ, ಆಶೀರ್ವಚನ ಕಾರ್ಯಕ್ರಮ ಜರುಗಿದವು.
ಕಾರ್ಯಕ್ರಮದಲ್ಲಿ ಶ್ರೀ ಮಠದ ಅರ್ಚಕ ಮಧ್ವಾಚಾರ್ಯ, ವಿಪ್ರ ಸಮಾಜದ ಮುಖಂಡ ಡಾ. ಜಿ.ಆರ್. ದೇಶಪಾಂಡೆ, ವಿ.ಎಸ್. ಶೆಡ್ಲಿಗೇರಿ, ರಾಘವೇಂದ್ರ ದೇಶಪಾಂಡೆ, ಗುರುರಾಜ ದೇಶಪಾಂಡೆ, ವೆಂಕಟೇಶ ಕುಲಕರ್ಣಿ ಹೂನೂರು, ಆರ್.ವಿ. ಗುಮಾಸ್ತೆ ಮತ್ತಿತರರು ಶ್ರೀಗಳನ್ನು ಬರಮಾಡಿಕೊಂಡರು.
---
ಕರಿಗುಡ್ಡ; ಸಿಡಿಲು ಬಡಿದು ಇಬ್ಬರಿಗೆ ಗಾಯ
ದೇವದುರ್ಗ: ತಾಲೂಕಿನ ಕರಿಗುಡ್ಡ ಗ್ರಾಮದಲ್ಲಿ ಬುಧವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಯ ವೇಳೆ ಸಿಡಿಲು ಬಡಿದು ತಂದೆ ಮತ್ತು ಮಗನಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಗ್ರಾಮದ ಕುರಿಗಾರರ ಹನುಮಯ್ಯ ಅಂಜಳ(46) ಹಾಗೂ ಆತನ ಪುತ್ರ ವೆಂಕಟೇಶ ಅಂಜಳ(16) ಎಂದು ಗುರುತಿಸಲಾಗಿದೆ. ಇವರು ಹೊಲದಲ್ಲಿ ಕುರಿಗಳ ಹಟ್ಟಿ ಹಾಕಿದ್ದು, ರಾತ್ರಿ ವೇಳೆ ಬಿರುಗಾಳಿ ಬೀಸಿ ಸುರಿದ ಮಳೆಯಿಂದ ರಕ್ಷಣೆ ಪಡೆಯಲು ಹೊಲದಲ್ಲಿನ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ತೀವ್ರ ಗಾಯಗೊಂಡಿದ್ದಾರೆ. ಇವರನ್ನು ಚಿಕಿತ್ಸೆಗೆ ದೇವದುರ್ಗದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
-
ಕ್ರಿಕೆಟ್ ತರಬೇತಿ ಸಮಾರೋಪ
ರಾಯಚೂರು: ಪ್ರಕಾಶ್ ಕ್ರಿಕೆಟ್ ಅಕಾಡೆಮಿ ಮತ್ತು ಸಿಟಿ ಇಲೆವನ್ ಆಶ್ರಯದಲ್ಲಿ ಇತ್ತೀಚೆಗೆ ನಗರದಲ್ಲಿ ಕ್ರಿಕೆಟ್ ಬೇಸಿಗೆ ತರಬೇತಿ ಶಿಬಿರ ನಡೆಯಿತು.ಶಿಬಿರದ ಸಂದರ್ಭದಲ್ಲಿ ಏರ್ಪಡಿ ಸಿದ್ದ ಕ್ರಿಕೆಟ್ ಬಳ್ಳಾರಿ ಕ್ರಿಕೆಟ್ ತಂಡ ಮತ್ತು ಸಿಟಿ ಇಲೆವನ್ ತಂಡದ ಮಧ್ಯೆ ನಡೆದ ಪಂದ್ಯದಲ್ಲಿ ಸಿಟಿ ಇಲೆವನ್ ತಂಡ ಗೆಲವು ಸಾಧಿಸಿತು. ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ಪ್ರಕಾಶ್ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಹಾಗೂ ನಗರಸಭೆ ಸದಸ್ಯ ಶ್ರೀನಿವಾಸರೆಡ್ಡಿ ಮತ್ತು ಕೃಷಿ ವಿವಿ ದೈಹಿಕ ಶಿಕ್ಷಣ ವಿಭಾಗದ ಅಧಿಕಾರಿ ರಾಜಣ್ಣ ಮತ್ತು ಸಿಟಿ ಕ್ರಿಕೆಟ್ ಕ್ಲಬ್ನ ಕಾರ್ಯದರ್ಶಿ ಶರಣರೆಡ್ಡಿ, ವೀರೇಶ್, ಮಲ್ಲಿಕಾರ್ಜುನ ಆಗಮಿಸಿದ್ದರು. ಕ್ರಿಕೆಟ್ ತರಬೇತುದಾರ ವೆಂಕಟರೆಡ್ಡಿ, ಸಂದೀಪ ಪಾಟೀಲ್, ಶ್ರೀನಿವಾಸ ಜೆಸ್ಕಾಂ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

