'ಕೈ' ಅಭ್ಯರ್ಥಿಯಿಂದ ಮತದಾರರಿಗೆ ಸುಳ್ಳು ಹೇಳಿಕೆ: ತತ್ತಾರಿ ಆರೋಪ
ರಾಯಚೂರು: ನಗರ ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಅವರು ಮತದಾರರಿಗೆ ನಗರದ ಅಭಿವೃದ್ಧಿ ತಮ್ಮಿಂದಲೇ ಸಾಧ್ಯವಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರಿಂದ ನಗರ ಕ್ಷೇತ್ರದಲ್ಲಿ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ ಎಂದು ಹೈ-ಕ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಸತ್ತಾರ್ ತತ್ತಾರಿ ಆರೋಪಿಸಿದರು.
ಅವರು ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ ಕ್ಷೇತ್ರದ ಶಾಸಕ ಸೈಯದ್ ಯಾಸೀನ್ ಮುಸ್ಲಿಂ ಸಮಾಜದ ಶೈಕ್ಷಣಿಕ ಬೆಳವಣಿಗೆಗೆ ತೊಡಕಾಗಿದ್ದಾರೆಯೇ ವಿನಾ ಸಮಾಜದ ಪ್ರಗತಿಗೆ ಶ್ರಮಿಸಿಲ್ಲ. ಶಂಶಾಲಂ ದರ್ಗಾದ ಬಳಿಯ ಕಬರಸ್ತಾನದಲ್ಲಿ ಶಾದಿ ಮಹಲ್ ನಿರ್ಮಿಸಲು ಶಾಸಕರು ಮುಂದಾಗಿದ್ದಾರೆ. ಗೋರಿಗಳಿರುವ ಪ್ರದೇಶದಲ್ಲಿ ಮದುವೆ ಮಾಡುವುದು ಯಾವ ರೀತಿ ಸರಿ ಎಂದು ಪ್ರಶ್ನಿಸಿದರು.
ನಗರಕ್ಕೆ ಕೃಷಿ ವಿವಿ ಮಂಜೂರು ಮಾಡಿಸಿದ್ದಾಗಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಸುಳ್ಳು ಹೇಳಿಕೆ ನೀಡಿದ್ದಾರೆ. ನಗರದ ಹೊರವಲಯದಲ್ಲಿ ಕಳೆದ ಅನೇಕ ವರ್ಷಗಳಿಂದ ಕೃಷಿ ಮಹಾವಿದ್ಯಾಲಯ ಕಾರ್ಯನಿರ್ವಹಿಸುತ್ತಿತ್ತು. ಅದನ್ನು ಮೇಲ್ದರ್ಜೆಗೇರಿಸಿ ಕೃಷಿ ವಿವಿ ಆರಂಭಿಸಲಾಗಿದೆಯೇ ವಿನಾ ಸೈಯದ್ ಯಾಸೀನ್ ಪ್ರಯತ್ನವಲ್ಲ ಎಂದು ಟೀಕಿಸಿದರು.
ನಗರದಲ್ಲಿ ಮುಸ್ಲಿಂ ಸಮಾಜದ ಅನೇಕ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ವಿವಿಧ ಮದರಸಾಗಳಿಗೆ ಅನಗತ್ಯವಾಗಿ ಸಮ್ಮ ಅಧಿಕಾರದ ಬಲದಿಂದ ನೋಟಿಸ್ ಜಾರಿ ಮಾಡುವ ಮೂಲಕ ತೆರವಿಗೆ ಸೂಚಿಸಿದ್ದಾರೆ. ಹಾಗೆ ಮಾಡುವ ಮೂಲಕ ಬಡ ಮುಸ್ಲಿಂ ಸಮಾಜದವರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅವರು ಅಡ್ಡಿಯಾಗಿದ್ದಾರೆಂದು ಆರೋಪಿಸಿದರು.
ನಗರದಲ್ಲಿ ಸದ್ಯ ಹೊಸಬರಿಗೆ ಮತ ಚಲಾಯಿಸುವ ಮೂಲಕ ನಗರದ ಸರ್ವ ಜಾತಿ, ಜನಾಂಗದವರ ಪ್ರಗತಿಗೆ ದಾರಿ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ಬಿಎಸ್ಪಿ ಅಭ್ಯರ್ಥಿ ಹಾರೇಸ್ ಸಿದ್ದಿಖಿ ಅವರಿಗೆ ಜನತೆ ಮತ ನೀಡುವುದು ಸೂಕ್ತ ಎಂದ ಅವರು, ಮುಸ್ಲಿಂ ಸಮಾಜದ ಹಿತ ಕಾಯದ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಅವರಿಗೆ ಮತ ನೀಡದಂತೆ ಮುಸ್ಲಿಂ ಸಮಾಜಕ್ಕೆ ಕರೆ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಮಹ್ಮದ್ ಹಸನ್ ಮೊಹ್ಸೀನ್, ಸೈಯದ್ ಹುಸೇನ್ ಬಾಷಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

