ಲಿಂಗಸ್ಗೂರು; ಕಣದಲ್ಲಿ ಕೋಟಿ ಒಡೆಯರು
ಕನ್ನಡಪ್ರಭವಾರ್ತೆ, ಲಿಂಗಸ್ಗೂರು ಏ.25,
ಜಿಲ್ಲೆಯಲ್ಲಿ ರಾಜಕೀಯ ಕೇಂದ್ರ ಬಿಂದು, ರಾಜಕೀಯ ಕಾರ್ಖಾನೆ ಎಂದೆಲ್ಲಾ ಹೆಸರಾದ ಲಿಂಗಸ್ಗೂರು ಕ್ಷೇತ್ರ ಪ್ರಸ್ತುತ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್, ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದು, ಇತರೆ ಕೆಜೆಪಿ ಮತ್ತು ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಲಕ್ಷಾಧಿಪತಿಗಳಾಗಿರುತ್ತಾರೆ.
ಡಿ.ಎಸ್.ಹೂಲಗೆರಿ(ಕಾಂಗ್ರೆಸ್): ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಎಸ್. ಹೂಲಗೇರಿ 10,09,526 ಹೊಂದಿದ್ದು, ಉಳಿತಾಯ ಖಾತೆಯಲ್ಲಿ ಸಪ್ತಗಿರಿ ಸ್ಟೋನ್ಸ್ ಇಳಕಲ್ಲ 70 ಲಕ್ಷ, ಸಪ್ತಗಿರಿ ರಾಕ್ಸ್ದಿಂದ 39 ಲಕ್ಷ, ಸಪ್ತಗಿರಿ ಎಕ್ಸ್ಪೋರ್ಟ್ 39 ಲಕ್ಷ, ಸಪ್ತಗಿರಿ ಗ್ರಾನೈಟ್ಸ್ 11 ಲಕ್ಷ, ಸಪ್ತಗಿರಿ ಗ್ರಾನೈಟ್ ವರ್ಲ್ಡ್ 13 ಲಕ್ಷ ಉಳಿತಾಯ ಖಾತೆ ಹೊಂದಿರುತ್ತಾರೆ. ಇವರ ಬ್ಯಾಂಕ್ ಠೇವಣಿ ಮೊತ್ತ 1,73,65,532 ಹೊಂದಿರುವ ಇವರು ಗ್ರಾನೈಟ್ ಉದ್ಯಮಿಯಾಗಿದ್ದು ಕೋಟ್ಯಧಿಪತಿಯಾಗಿದ್ದಾರೆ. ವಾಹನಗಳು- ಫೋರ್ಟ್ ಇಂಡೋವರ್, ಇನ್ನೋವಾ, ಟಾಟಾ ಸಫಾರಿ, ಮಹಿಂದ್ರಾ ಬೋಲೇರೋ ಕಾರ್ ಹೊಂದಿರುತ್ತಾರೆ. ಚರಾಸ್ತಿ ಮೌಲ್ಯ 58,60,931 ಸ್ಥಿರಾಸ್ತಿ, ಸ್ವಯಾರ್ಜಿತ ಒಟ್ಟು ಮೌಲ್ಯ 9,14,83,931, ಬ್ಯಾಂಕ್ ಸಾಲ 72,77,125 ಹೊಂದಿರುತ್ತಾರೆ.
ಮಾನಪ್ಪ ಡಿ. ವಜ್ಜಲ್(ಜೆಡಿಎಸ್): ಜೆಡಿಎಸ್ ಪಕ್ಷದ ಅಭ್ಯರ್ಥಿ ಮಾನಪ್ಪ ಡಿ. ವಜ್ಜಲ್ ಇವರು 1,40,000 ಹೊಂದಿರುತ್ತಾರೆ. ಇವರ ಒಟ್ಟು ಆಸ್ತಿ ಮೌಲ್ಯ 1,75,87,126. ಸ್ಥಿರಾಸ್ತಿ ಮೌಲ್ಯ 49 ಲಕ್ಷ, ಇವರಿಗೆ ಬರಬೇಕಾದ ಹಣ ಕೃಭಾಜನಿನಿ ಆಲಮಟ್ಟಿಯಿಂದ 35 ಲಕ್ಷ, ಎಚ್.ವೈ. ಜಾಲಹಳ್ಳಿ ಗುತ್ತೇದಾರ 1.45 ಲಕ್ಷ, ಮೆ. ಎನ್.ಡಿ. ವಡ್ಡರ 46,71,726 ಬರಬೇಕಾದ ಬಾಕಿ ಹಣವಾಗಿರುತ್ತದೆ. ಇವರ ಪತ್ನಿ ಅಮರಮ್ಮ ಅವರ ಒಟ್ಟು ಆಸ್ತಿ ಮೌಲ್ಯ 35,76,973, ಸ್ಥಿರಾಸ್ತಿ 83 ಲಕ್ಷ ಹಾಗೂ ಇನ್ನೋವಾ ಕಾರು ಹೊಂದಿದ್ದು ಕೋಟ್ಯಧಿಪತಿಯಾಗಿರುತ್ತಾರೆ.
ಸಿದ್ದಪ್ಪ ಬಂಡಿ (ಬಿಎಸ್ಆರ್): ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿದ್ದಪ್ಪ ಬಂಡಿ ಇವರು ನಗದು 1 ಲಕ್ಷ, ಬ್ಯಾಂಕ್ ಖಾತೆ ಒಟ್ಟು ಠೇವಣಿ 6,38,525, ಚರಾಸ್ತಿ ಒಟ್ಟು ಮೌಲ್ಯ 2,86,14,000, ಸ್ಥಿರಾಸ್ತಿ 1 ಕೋಟಿ, 26 ಲಕ್ಷ. ವಾಹನಗಳು 3 ಹಿಟಾಚಿ, ಡ್ರಿಲ್ಲಿಂಗ್ ಘಟಕ, ಎಂಎಂಡಬ್ಲ್ಯೂ ಯಂತ್ರ ಹೊಂದಿದ್ದು ಕೋಟಿಗಳ ಒಡೆಯರಾಗಿದ್ದಾರೆ.
ಎಚ್.ಬಿ. ಮುರಾರಿ(ಕೆಜೆಪಿ): ಕೆಜೆಪಿ ಪಕ್ಷದ ಅಭ್ಯರ್ಥಿ ಎಚ್.ಬಿ. ಮುರಾರಿ ಅವರು 90 ಸಾವಿರ, ಬ್ಯಾಂಕ್ ಠೇವಣಿ 5 ಲಕ್ಷ, ಮೋಟಾರು ವಾಹನ ಟ್ರಾಕ್ಟರ್, ಬುಲೇರೋ, 1 ಇನ್ನೋವಾ, ಚರಾಸ್ತಿ ಮೌಲ್ಯ 15 ಲಕ್ಷ, ಪಿತ್ರಾರ್ಜಿತ ಸ್ವತ್ತು 5 ಲಕ್ಷ, ಬ್ಯಾಂಕ್ ಸಾಲ 18 ಲಕ್ಷ ಹೊಂದಿದ್ದು ಲಕ್ಷಾಧೀಶರಾಗಿದ್ದಾರೆ.
ಟಿ.ಆರ್. ನಾಯಕ(ಬಿಜೆಪಿ): ಬಿಜೆಪಿ ಅಭ್ಯರ್ಥಿ ಟಿ.ಆರ್. ನಾಯಕ ಅವರು ನಗದು 95 ಸಾವಿರ, ಕೃಷಿ ಭೂಮಿಯ ಒಟ್ಟು ಮೌಲ್ಯ 12 ಲಕ್ಷ 50 ಸಾವಿರ, ಆಶಿಹಾಳ ತಾಂಡಾದಲ್ಲಿ ಮನೆ, ಬೆಂಗಳೂರು ಹೆಸರಘಟ್ಟದಲ್ಲಿ ಪ್ಲಾಟ್ ಹೊಂದಿರುತ್ತಾರೆ. ಪುತ್ರ ಡಾ. ಪ್ರಕಾಶ ಇನ್ನೋವಾ ಕಾರ್, ಇನ್ನೊಬ್ಬ ಮಗ ಡಾ. ಪ್ರಶಾಂತ ಮಾರುತಿ ಝೆನ್ ಕಾರ್ ಹೊಂದಿರುತ್ತಾರೆ. ಪತ್ನಿಯ ಹೆಸರಿನಲ್ಲಿ 635 ಗ್ರಾಂ ಚಿನ್ನ ಇರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

