ಶಿವಲಿಂಗಪ್ಪಗೆ ಪ್ರಶಸ್ತಿ, ಸನ್ಮಾನ
ಲಿಂಗಸ್ಗೂರು: ಲಿಂಗಸ್ಗೂರು ಉಪ ವಿಭಾಗದ ಹೊನ್ನಳ್ಳಿ ಅಂಚೆ ಶಾಖೆಯ ಶಾಖಾ ಪ್ರಬಂಧಕ ಶಿವಲಿಂಗಪ್ಪ ಅವರಿಗೆ ಬೆಂಗಳೂರಿನ ಮುಖ್ಯ ಪ್ರಧಾನ ಅಂಚೆ ಕಚೇರಿಯಲ್ಲಿ ಮುಖ್ಯ ಅಂಚೆ ಮಹಾಪ್ರಬಂಧಕ ಹಿಲ್ಡಾ ಅಬ್ರಾಹಂ ಅವರು ಪ್ರಶಸ್ತಿ ನೀಡಿ ಸನ್ಮಾನಿಸಿದರು. 2012- 13ನೇ ಸಾಲಿನಲ್ಲಿ ಗ್ರಾಮೀಣ ಅಂಚೆಯಲ್ಲಿ ಹೊಸದಾಗಿ ಉಳಿತಾಯ ಮತ್ತು ಆರ್ಡಿ ಖಾತೆ ತೆರೆಯುವಲ್ಲಿ ಹೊನ್ನಳ್ಳಿ ಅಂಚೆ ಶಾಖಾ ಪ್ರಬಂಧಕ ಶಿವಲಿಂಗಪ್ಪ ಅವರು ಕರ್ನಾಟಕ ವೃತ್ತದಲ್ಲಿ ತೃತೀಯ ಸ್ಥಾನ ಗಳಿಸಿದ್ದು, ಇವರ ಈ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಮುಖ್ಯ ಪ್ರಧಾನ ಅಂಚೆ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ನಾರಂಗಿ, ಪೋಸ್ಟ್ ಮಾಸ್ಟರ್ ಜನರಲ್ ಬಿಸಿನೆಸ್ ಡೆವೆಲಪ್ಮೆಂಟ್ ವೀಣಾ ಶ್ರೀನಿವಾಸ ಸೇರಿದಂತೆ ಇದ್ದರು.
ನೌಕರರ ಸಂಘಕ್ಕೆ ಆಯ್ಕೆ
ದೇವದುರ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ದೇವದುರ್ಗ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಹನುಮಂತ್ರಾಯ ಶಾಖೆ ಆಯ್ಕೆಯಾಗಿದ್ದಾರೆ. ಪಟ್ಟಣದಲ್ಲಿ ಗುರುವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಒಟ್ಟು 28 ಕಾರ್ಯಕಾರಿ ಮಂಡಳಿ ಸದಸ್ಯರ ಪೈಕಿ ಹನುಮಂತ್ರಾಯ ಶಾಖೆ ಅವರಿಗೆ 20 ಮತಗಳು ಬಂದರೆ, ಅವರ ವಿರುದ್ಧ ಸ್ಪರ್ಧಿಸಿದ್ದ ಚಿದಾನಂದಪ್ಪ ಶಿವಂಗಿ ಅವರಿಗೆ 8 ಮತಗಳು ಬಂದು ಪರಾಭವಗೊಂಡರು. ಅದೇ ರೀತಿ ರಾಜ್ಯ ಪರಿಷತ್ತಿಗೆ ರೇಷ್ಮೆ ಇಲಾಖೆಯ ಮಹಾಂತಯ್ಯ ಸ್ವಾಮಿ ಹಾಗೂ ಖಜಾಂಚಿಯಾಗಿ ಆರೋಗ್ಯ ಇಲಾಖೆಯ ಸುಬ್ಬಯ್ಯ ಆಯ್ಕೆಯಾಗಿದ್ದಾರೆಂದು ಸಂಘ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

