ಓದು ಮುಂದಿನ ಪೀಳಿಗೆಗೆ ಭವಿಷ್ಯವಾಗಲಿ
ಕನ್ನಡಪ್ರಭ ವಾರ್ತೆ , ಸಿಂಧನೂರು , ಆ.4
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ವಿಷಯಗಳಲ್ಲಿ ಚತುರರಾಗಿ, ಪಠ್ಯಕ್ರಮಗಳು ಸೇರಿದಂತೆ ಇನ್ನಿತರ ವಿಷಯಗಳನ್ನು ಅರ್ಥ ಮಾಡಿಕೊಂಡು ಪ್ರತಿ ವಿಷಯದಲ್ಲಿ ಉನ್ನತ ಶ್ರೇಣಿ ಏರುವುದರ ಮೂಲಕ ನಿಮ್ಮ ಓದು ಮುಂದಿನ ಪೀಳಿಗೆಯ ಭವಿಷ್ಯವಾಗಬೇಕೆಂದು ಪತ್ರಕರ್ತ ಕಲಿಗಣನಾಥ ಗುಡುದೂರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಕರ್ನಾಟಕ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸೋಲು ಜೀವನಕ್ಕೆ ಕತ್ತಲಾಗದೇ ಮುಂದಿನ ಗೆಲವಿಗೆ ಸ್ಪೂರ್ತಿ ನೀಡುವುದರ ಮೂಲಕ ಆತ್ಮ ವಿಶ್ವಾಸ ಬೆಳೆಯಲು ಪ್ರೇರೇಪಿಸುತ್ತದೆ. ವಿದ್ಯಾರ್ಥಿಗಳು ಓದುವ ಶಾಲೆಗೆ ಕೀರ್ತಿ ತರುವುದರ ಮೂಲಕ ತಾಲೂಕು, ಜಿಲ್ಲೆ, ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.
ಶರಣರ ಆದರ್ಶದಿಂದ ಉಜ್ವಲ ಭವಿಷ್ಯ: ಕಾರ್ಯಕ್ರಮವನ್ನು ನಿರುಪಾದೆಪ್ಪ ಗುಡಿಹಾಳ ವಕೀಲರು ಉದ್ಘಾಟಿಸಿ, ಒಳ್ಳೆಯ ವಿಚಾರವನ್ನು ಬೆಳೆಸಿಕೊಳ್ಳವುದರ ಮೂಲಕ ಪ್ರೀತಿಯಿಂದ ಶಿಕ್ಷಣ ಕಲಿಯಬೇಕು, 12 ಶತಮಾನದ ಶರಣರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಉಜ್ವಲ ಭವಿಷ್ಯ ಹೊಂದಲು ಸಾಧ್ಯವಾಗುತ್ತದೆ. ಶಿಕ್ಷಣದ ಜೊತೆಜೊತೆಗೆ ಸದ್ಗುಣ ಮೈಕಟ್ಟು ಹೊಂದಲು ಕ್ರೀಡೆ ಅತ್ಯವಶ್ಯಕ ಎಂದು ಹೇಳಿದರು.
ಕಾಲೇಜಿನ ಆಸ್ತಿ ವಿದ್ಯಾರ್ಥಿಗಳು: ಕರ್ನಾಟಕ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕುರುಕುಂದೆಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನ ಆಸ್ತಿ ವಿದ್ಯಾರ್ಥಿಗಳಾಗಿದ್ದು, ನಿಮ್ಮ ಉಜ್ವಲವಾದ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ಕಾಲೇಜನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕೆಂದು ಹೇಳಿದರು.
ಎಕ್ಸ್ಲೆಂಟ್ ಕಾಲೇಜಿನ ಪ್ರಾಚಾರ್ಯ ಹೊನ್ನೂರ ಹುಸೇನಸಾಬ, ಉಪನ್ಯಾಸಕರಾದ ಮಹೆಬೂಬ್, ಶಂಕರ ವಾಲೇಕಾರ ಮಾತನಾಡಿದರು. ವಿದ್ಯಾರ್ಥಿಗಳಾದ ಶಾರದಾ, ಅನಿಲ್, ಹುಸೇನಪ್ಪ, ರೂಪ, ಬಸವರಾಜ, ಅಜಿತ್ ನಾಗಲಿಂಗ ಅನಿಸಿಕೆ ವ್ಯಕ್ತಪಡಿಸಿದರು.
ಉಪನ್ಯಾಸಕರಾದ ಶಂಕರ ಗುರಿಕಾರ, ಹಾಜಿಮಸ್ತಾನ ಜಾಹಗೀರದಾರ, ರಮೇಶ ಪಾಟೀಲ್, ನಾರಾಯಣ ಬೆಳಗುರ್ಕಿ, ಮಲ್ಲಯ್ಯ ಬಾದರ್ಲಿ, ಹುಲಿಗೇಶ ಬಾದರ್ಲಿ, ಬಸಪ್ಪ ಬಾರಕೇರ, ಹನುಮೇಶ ಗುಡದೂರು ಉಪಸ್ಥಿತರಿದ್ದರು. ಹುಸೇನಪ್ಪ ಸ್ವಾಗತಿಸಿದರು. ಸಿದ್ದೇಶ ನಿರೂಪಿಸಿದರು. ಗಂಗಾಸಜ್ಜನ್ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

