ಕಾಲುವೆ ನೀರು ಅಕ್ರಮ ಬಳಕೆ; ಪ್ರತಿಭಟನೆ
ಕನ್ನಡಪ್ರಭ ವಾರ್ತೆ , ಸಿಂಧನೂರು , ಆ.6
ತುಂಗಭದ್ರಾ ಎಡದಂಡೆ ಕಾಲುವೆಯ ಮೇಲ್ಭಾಗದ ರೈತರು ಗೊರೇಬಾಳ ಹಳ್ಳಕ್ಕೆ ಅನಧಿಕೃತ ಪೈಪುಗಳನ್ನು ಹಾಕಿ ನೀರು ಪಡೆದುಕೊಳ್ಳುತ್ತಿದ್ದು, ಇದನ್ನು ತಡೆಗಟ್ಟುವಂತೆ ಒತ್ತಾಯಿಸಿ ವಿವಿಧ ಪಕ್ಷಗಳ ಮುಖಂಡರು ಹಾಗೂ ರೈತರು ಒಗ್ಗೂಡಿ ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಬಸಾಪುರ, ಜಾಲಿಹಾಳ, ಹಂಚಿನಾಳ, ಗೊರೇಬಾಳ, ಸಾಸಲಮರಿ, ರವುಡಕುಂದಾ, ಸೋಮಲಾಪುರ, ಸಾಲಗುಂದಾ, ಕೆಂಗಲ್ ಗ್ರಾಮಗಳ ರೈತರು ಅನಧಿಕೃತ ಪೈಪಿನ ಹಾವಳಿಗೆ ತುತ್ತಾಗುತ್ತಿದ್ದಾರೆ. ಗೊರೇಬಾಳ ಮತ್ತು ಸಾಲಗುಂದಾ ಹಳ್ಳಕ್ಕೆ ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಪಿಕ್ಅಪ್ ಡ್ಯಾಂ ನಿರ್ಮಾಣ ಮಾಡಲಾಗಿದೆ.
ಆದರೆ ಮೇಲ್ಭಾಗದ ಮೈಲಾಪುರ ಹಾಗೂ ಇನ್ನಿತರ ಹಳ್ಳಿಗಳ ರೈತರು ಅನಧಿಕೃತವಾಗಿ ಹಳ್ಳಕ್ಕೆ ಪೈಪ್ಲೈನ್ ಹಾಕಿಕೊಂಡು ಪಂಪ್ಸೆಟ್ ಮೂಲಕ ನೀರು ಪಡೆಯುತ್ತಿದ್ದಾರೆ. ಇಷ್ಟಲ್ಲದೆ ಹೊಲಗಳಲ್ಲಿ ಕೆರೆಗಳನ್ನು ಮಾಡಿಕೊಂಡು ಜನರೇಟರ್ ಮೂಲಕ ಹಗಲು- ರಾತ್ರಿ ನೀರು ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಕೆಳಭಾಗದ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಗ್ರ ಪ್ರತಿಭಟನೆ ಎಚ್ಚರಿಕೆ: 7 ಸಾವಿರಕ್ಕೂ ಅಧಿಕ ಎಕರೆ ಜಮೀನಿದ್ದು ನೀರಿಲ್ಲದೆ ಹೋದರೆ ಬತ್ತ ನಾಟಿಗೆ ಸಮಸ್ಯೆಯಾಗಲಿದೆ. ಪಿಕ್ ಅಪ್ ಡ್ಯಾಂ ನಂಬಿಕೊಂಡಿರುವ ರೈತ ಸಮೂಹ ಕಂಗಾಲಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸ್ಥಳಕ್ಕೆ ಭೇಟಿ ಕೊಟ್ಟು ಅನಧಿಕೃತ ಪೈಪುಗಳನ್ನು ವಾರದೊಳಗೆ ತೆಗೆಸಬೇಕು. ಇಲ್ಲವಾದಲ್ಲಿ ರೈತರು ಉಗ್ರ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಮನವಿ ಮೂಲಕ ಎಚ್ಚರಿಸಲಾಯಿತು.
ಮಾಜಿ ಶಾಸಕ ವೆಂಕಟರಾವ ನಾಡಗೌಡ, ನಯೋಪ್ರಾ. ಮಾಜಿ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ, ಮುಖಂಡರಾದ ಕೆ.ಕರಿಯಪ್ಪ, ರಾಜಶೇಖರಗೌಡ ಪಾಟೀಲ, ಕೊಲ್ಲಾ ಶೇಷಗಿರಿರಾವ್, ಎಪಿಎಂಸಿ ನಿರ್ದೇಶಕ ಲಿಂಗರಾಜ ರಾಗಲಪರ್ವಿ, ರಾಜುಗೌಡ ಬಾದರ್ಲಿ, ದೇವೇಂದ್ರಪ್ಪ ಯಾಪಲಪರ್ವಿ, ಹನುಮೇಶ ಹರೇಟನೂರು, ಟಿ.ಹನುಮೇಶ ಸಾಸಲಮರಿ, ಬಸನಗೌಡ, ಶರಣಪ್ಪ ಕುಂಬಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

