ರಾಯಚೂರು

ಬಿಸಿಲ ನಾಡಲ್ಲೊಂದು ಆಕರ್ಷಣೀಯ ಜಲಪಾತ

Published On :

 ಲಿಂಗಸ್ಗೂರು: ಬಿಸಿಲ ನಾಡೆಂದು ಕರೆಯಲ್ಪಡುವ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಕಾಣಸಿಗುವ ಬೆರಳೆಣಿಕೆ ಜಲಪಾತಗಳಲ್ಲಿ ರಾಯಚೂರು ಜಿಲ್ಲೆಯ ಗುಂಡಲಬಂಡಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿ ನಿರ್ಮಾಣಗೊಂಡಿದೆ.
ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಬಳಿ ಬರುವ, ಲಿಂಗಸ್ಗೂರು ಪಟ್ಟಣದಿಂದ ಸುಮಾರು 25 ಕಿಮೀ ಅಂತರವಿರುವ ಗೊಲಪಲ್ಲಿ ಗ್ರಾಮದ ಸಮೀಪದ ಗುಂಡಲಬಂಡಿ ಜಲಪಾತ ಅರಣ್ಯ ಪ್ರದೇಶದ ಹಾಸು ಬಂಡೆ, ಗುಂಡು ಕಲ್ಲುಗಳ ಮಧ್ಯದಲ್ಲಿ ರಭಸದಿಂದ ಹರಿಯುತ್ತಿದೆ.
ಆಕರ್ಷಣೀಯ..: ನಾರಾಯಣಪುರ ಜಲಾಶಯದ ಬಲದಂಡೆ ವಿತರಣಾ ಕಾಲುವೆಯಿಂದ ಹರಿಯುವ ಹೆಚ್ಚುವರಿ ನೀರು ಹಳ್ಳಕ್ಕೆ ಸೇರುವಾಗ ಮಧ್ಯದಲ್ಲಿ ಜಲಪಾತದಂತೆ ಗೋಚರಿಸುತ್ತದೆ.
 ಈ ಸುಂದರ ತಾಣವನ್ನು ವೀಕ್ಷಿಸಲು ಜನರು ತಂಡೋಪ ತಂಡವಾಗಿ ಆಗಮಿಸಿ ಆನಂದಿಸುತ್ತಾರೆ. ಅಲ್ಲದೆ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ವೀಕ್ಷಿಸಬಹುದು.
ಈವರೆಗೂ ಅಭಿವೃದ್ಧಿ ಕಂಡಿಲ್ಲ: ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಅನೇಕ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಲ್ಲದೆ ವಿವಿಧ ಇಲಾಖೆ ಅಧಿಕಾರಿಗಳು ಈ ಜಲಪಾತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಲಪಾತದ ಆಕರ್ಷಣೀಯ ದೃಶ್ಯ ಕಂಡು ಇದನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಸಂಕಲ್ಪ ವ್ಯಕ್ತಪಡಿಸಿದ್ದರು.
 ಆದರೆ ಇದುವರೆಗೆ ಯಾವುದೇ ಕೆಲಸ ಮಾಡಿಲ್ಲ. ಈಗಲಾದರೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ ಪ್ರವಾಸಿಗರ ಕಣ್ಮನ ಸೆಳೆಯುವ ಗುಂಡಲಬಂಡಾ ಜಲಪಾತದ ಅಭಿವೃದ್ಧಿಗೆ ಮುಂದಾಗಬೇಕೆಂಬುದು ಪ್ರವಾಸಿಗರ ಒತ್ತಾಸೆಯಾಗಿದೆ. ಇದು ನೆರವೇರಿದರೆ ಮತ್ತಷ್ಟು ಪ್ರವಾಸಿಗರ ಭೇಟಿ ಸಾಧ್ಯವಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.