ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ
ಕನ್ನಡಪ್ರಭ ವಾರ್ತೆ , ಲಿಂಗಸ್ಗೂರು , ಆ.9
ತಾಲೂಕಾದ್ಯಂತ ಮುಸ್ಲಿಮರು ರಂಜಾನ್ ಹಬ್ಬವನ್ನು ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ಮುಸ್ಲಿಂ ಧಾರ್ಮಿಕ ಪಂಚಾಂಗ ಚಂದ್ರಮಾನ ಪ್ರಕಾರ ಒಂಭತ್ತನೇ ತಿಂಗಳಿಗೆ ರಂಜಾನ್ ಎಂದು ಕರೆಯಲಾಗುತ್ತದೆ. ಒಂದು ತಿಂಗಳ ಪರ್ಯಂತ ಸೂರ್ಯೋದಯದಿಂದ ಅಸ್ತದವರೆಗೆ ಉಪವಾಸ ಮಾಡುವುದು ಈ ಹಬ್ಬದ ವೈಶಿಷ್ಟ್ಯ. ಒಂದು ತಿಂಗಳ ನಂತರ ಚಂದ್ರ ಕಾಣಿಸಿಕೊಳ್ಳುತ್ತಿದ್ದಂತೆ ಮರುದಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಪಟ್ಟಣದಲ್ಲಿ ಮುಸ್ಲಿಮರು ಹೊಸ ಬಟ್ಟೆ ಧರಿಸಿ ಈದ್ಗಾ ಮೈದಾನಕ್ಕೆ ತೆರಳಿ ಬೆಳಗ್ಗೆ 10ಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಮಾಜದ ಮುಖಂಡ ಯೂನೂಸ್ ಆಫೀಜ್ ಖಾಜಿ ಪವಿತ್ರ ಖುರಾನ್ ಪಠನೆ ಮಾಡಿದರು. ಪ್ರಾರ್ಥನೆಯ ನಂತರ ಎಲ್ಲರು ಶುಭಾಷಯ ಕೋರಿದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ತಂಜುಮಿನ್ ಕಮಿಟಿ ಉಪಾಧ್ಯಕ್ಷ ಲಾಲಅಹ್ಮದ ಸಾಬ, ಮುಖಂಡರಾದ ಖಾದರಪಾಶಾ, ನೂರುಲ್ ಹಸನ್ ಗ್ಯಾರಂಟಿ, ಎಕ್ಬಾಲ್ ಹವಾಲ್ದಾರ, ಎಂ.ಡಿ.ರಫೀ, ಫಯಾಜ್ ಅಹ್ಮದ್, ಅನೀಸ್ ಪಾಶಾ, ನಬಿಸಾಬ ಮನಿಯಾರ, ಮಹಿಬೂಬ, ಎಂ.ಡಿ. ಖಾಜಾಹುಸೇನ, ಶಮೀನ್, ರೋಷನ್ ಸೇರಿದಂತೆ ನೂರಾರು ಜನ ಮುಸ್ಲಿಮರು ಭಾಗವಹಿಸಿದ್ದರು.
ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಶಾಸಕ ಮಾನಪ್ಪ ವಜ್ಜಲ್, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಶಿವಾನಂದ ಐದನಾಳ, ಸಿದ್ಧನಗೌಡ ಪಾಟೀಲ್, ಶರಣಬಸವ ಮಾಲಿ ಪಾಟೀಲ್, ವೀರನಗೌಡ ಲೆಕ್ಕಿಹಾಳ ಸೇರಿದಂತೆ ಮುಸ್ಲಿಮರಿಗೆ ಶುಭ ಹಾರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

